ರಾಜ್ಯ

ಆರೋಗ್ಯ ಕಾರ್ಯಕರ್ತರಿಗೆ ಮೊದಲು ಕೊರೋನಾ ಲಸಿಕೆ: ಭರದಿಂದ ಸಾಗುತ್ತಿದೆ ಪೂರೈಕೆಗೆ ಸರ್ಕಾರದ ಸಿದ್ಧತೆ!

Manjula VN

ಬೆಂಗಳೂರು: ಕೊರೋನಾ ವೈರಸ್'ಗೆ ಲಸಿಕೆ ಬಂದ ಕೂಡಲೇ ಆರೋಗ್ಯ ಕಾರ್ಯಕರ್ತರಿಗೆ ಮೊದಲು ಲಸಿಕೆಯನ್ನು ನೀಡಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. 

ಈ ಕುರಿತು ಹೇಳಿಕೆ ಬಿಡುಗಡೆಗೊಳಿಸಿರುವ ರಾಜ್ಯ ಸರ್ಕಾರ. ಕೋವಿಡ್-19 ಲಸಿಕೆ ಪರಿಚಯಿಸಲು ಭಾರ ಸರ್ಕಾರ ಯೋಜಿಸುತ್ತಿದ್ದು, ಈ ನಿಟ್ಟಿನಲ್ಲಿ ಪೂರ್ವಸಿದ್ಥತೆಯ ಚಟುವಟಿಕೆಗಳನ್ನು ಪ್ರಾರಂಭಿಸಿದೆ. ಪರಿಚಯದ ಆರಂಭಿಕ ಹಂತದಲ್ಲಿ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳ ಎಲ್ಲಾ ಆರೋಗ್ಯ ಕಾರ್ಯಕರ್ತರು ಫಲಾನುಭವಿಗಳಾಗಿರುತ್ತಾರೆ. ಆದ್ಯತೆಯ ಮೇರೆಗೆ ಇತರೆ ಗುಂಪುಗಳು ಮತ್ತು ಜನಸಂಖ್ಯೆಯನ್ನು ಹಂತಹಂತವಾಗಿ ಒಳಪಡಿಸಲಾಗುತ್ತದೆ. ಲಸಿಕೆಯ ವಿವರ ಮತ್ತು ಕೋವಿಡ್-19 ಲಸಿಕೆ ಪರಿಚಯದ ದಿನಾಂಕವನ್ನು ಭಾರತ ಸರ್ಕಾರದಿಂದ ತಿಳಿಸಲಾಗುವುದು ಎಂದು ಹೇಳಿದೆ. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರ ನೀಡಿದ ಮಾರ್ಗಸೂಚಿಗಳು ಮತ್ತು ಕಾರ್ಯತಂತ್ರಗಳ ಪ್ರಕಾರ ಆರೋಗ್ಯ ಕಾರ್ಯಕರ್ತರ ಸಿದ್ಧತೆ, ಚಟುವಟಿಕೆಗಳು ಮತ್ತು ದತ್ತಾಂಶ ಸಂಗ್ರಹಣೆಯನ್ನು ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ. 

ಆರೋಗ್ಯ ಕಾರ್ಯಕರ್ತರ ಪ್ರಾಥಮಿಕ ದತ್ತಾಂಶ ಸಂಗ್ರಹಣೆಯನ್ನು ಅಕ್ಟೋಬರ್ 30ರೊಳಗೆ ಪೂರ್ಣಗೊಳಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸಂಸ್ಥೆ ಎಲ್ಲಾ ಜಿಲ್ಲೆಗಳು ಜಿಲ್ಲಾ ಮಟ್ಟದ ಅಭಿಶಿಕ್ಷಣವನ್ನು ಪ್ರಾರಂಭಿಸಿವೆ. ಆರೋಗ್ಯ ಕಾರ್ಯಕರ್ತರ ದತ್ತಾಂಶಗಳ ವಿವರಗಳನ್ನು ಸಂಗ್ರಹಿಸಲು ಪ್ರಾಮಾಣಿಕ ಟೆಂಪ್ಲೆಟ್ ಗಳನ್ನು ಎಲ್ಲಾ ಆರೋಗ್ಯ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ತಿಳಿಸಿದೆ. 

SCROLL FOR NEXT