ರಾಜ್ಯ

'ರಾಜಕೀಯ ಕಲಿಕಾ ಅನುಭವ'ಕ್ಕಾಗಿ ಅ.27ಕ್ಕೆ ಬಿಹಾರಕ್ಕೆ ಸಚಿವ ಸಿಟಿ ರವಿ

Manjula VN

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅಕ್ಟೋಬರ್ 27 ರಿಂದ ಮೂರು ದಿನಗಳ ಕಾಲ ಬಿಹಾರ ರಾಜ್ಯಕ್ಕೆ ಭೇಟಿ ನೀಡಲಿದ್ದು, ಭೇಟಿ ವೇಳೆ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ. 

ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ಅಕ್ಟೋಬರ್ 28ರಂದು ನಡೆಯಲಿದೆ. ಚುನಾವಣೆ ಹಿನ್ನೆಲೆ ಸಿಟಿ ರವಿಯವರಿಗೆ ಯಾವುದೇ ರೀತಿಯ ನಿರ್ದಿಷ್ಟ ಜವಾಬ್ದಾರಿಯನ್ನು ನೀಡಿಲಾಗಿಲ್ಲವಾದರೂ, ರವಿಯವರು ರಾಜಕೀಯ ಕಲಿಕಾ ಅನುಭವಕ್ಕಾಗಿ ಬಿಹಾರಕ್ಕೆ ತೆರಳಲಿದ್ದಾರೆಂದು ತಿಳಿದುಬಂದಿದೆ. 

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನೇಮಕಗೊಂಡ ಬಳಿಕ ಪಕ್ಷದ ಕಾರ್ಯ ಚಟುವಟಿಕೆಗಳತ್ತ ಸಂಪೂರ್ಣವಾಗಿ ಕಾರ್ಯಮಗ್ನರಾಗಿರುವ ಸಿಟಿ ರವಿಯವರು, ಪಕ್ಷದ ಬಲ ಹೆಚ್ಚಿಸಲು ದೆಹಲಿ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಗೆ ಆಗಾಗ ಪ್ರವಾಸ ಕೈಗೊಳ್ಳುತ್ತಲೇ ಇದ್ದಾರೆ. 

ಅನುಭವಕ್ಕಾಗಿ ನಾನು ಬಿಹಾರ ರಾಜ್ಯಕ್ಕೆ ತೆರಳುತ್ತಿದ್ದೇನೆ. ಪಕ್ಷದ ವತಿಯಿಂದ ನನಗೆ ಯಾವುದೇ ರೀತಿಯ ನಿರ್ದಿಷ್ಟ ಜವಾಬ್ದಾರಿಗಳನ್ನೂ ನೀಡಲಾಗಿಲ್ಲ. ಪಕ್ಷದ ಸಭೆಗಳು ಹಾಗೂ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಇದೇ ಮೊದಲ ಬಾರಿಗೆ ಬಿಹಾರ ರಾಜ್ಯದ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಇದೊಂದು ವಿಭಿನ್ನ ರೀತಿಯ ಅನುಭವವಾಗಲಿದೆ ಎಂದು ಸಿಟಿ ರವಿಯವರು ಹೇಳಿದ್ದಾರೆ. 

ಬಿಹಾರ ಪ್ರಚಾರ ಕಾರ್ಯದಿಂದ ಒಂದು ಅನುಭವವಾಗುವ ನಂಬಿಕೆಯಿದೆ. ದಕ್ಷಿಣ ಭಾರತದ ಕೆಲ ಆಚಾರ ವಿಚಾರಗಳು, ಸಂಸ್ಕೃತಿಗಳ ತಿಳಿದುಕೊಳ್ಳಲು ಇದು ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ. 

ಈ ನಡುವೆ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರೂ ಕೂಡ ಸಿಟಿ ರವಿಯವರೊಂದಿಗೆ ಬಿಹಾರ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆಂದು ಮೂಲಗಳು ತಿಳಿಸಿವೆ. 

SCROLL FOR NEXT