ಅರಮನೆ ಆವರಣದಲ್ಲಿ ಜಂಬೂ ಸವಾರಿಯಲ್ಲಿ ಅಭಿಮನ್ಯು ಆನೆ ಅಂಬಾರಿ ಹೊತ್ತು ಸಾಗಿದ ದೃಶ್ಯ 
ರಾಜ್ಯ

ಸರಳ ದಸರಾ: ಐತಿಹಾಸಿಕ ಜಂಬೂ ಸವಾರಿ ಮುಕ್ತಾಯ; ಅರಮನೆ ಆವರಣದಲ್ಲಿ ಅಂಬಾರಿ ಹೊತ್ತು ಸಾಗಿದ ಅಭಿಮನ್ಯು

ಕೊರೋನಾ ಆತಂಕದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿಯಲ್ಲಿ ಈ ಬಾರಿ ವಿಜಯದಶಮಿ ಆಚರಣೆಯನ್ನು ಸೀಮಿತ ಅವಧಿಯಲ್ಲಿ ಸರಳವಾಗಿ ಮತ್ತು ಸುಸಜ್ಜಿತವಾಗಿ ನಡೆಸಲಾಗಿದೆ.

ಮೈಸೂರು: ಐತಿಹಾಸಿಕ ಜಂಬೂ ಸವಾರಿ ಈ ಬಾರಿ ಸರಳವಾಗಿ ಆಚರಣೆಯಾಗಿ, ಮುಕ್ತಾಯಗೊಂಡಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸೋಮವಾರ ನಾಡ ದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಶ್ವ ವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗೆ ಚಾಲನೆ ನೀಡಿದ್ದರು. 

ಅರಮನೆ ಆವರಣಕ್ಕೆ ಸೀಮಿತಗೊಂಡ ಈ ಬಾರಿಯ ಜಂಬೂ ಸವಾರಿಯಲ್ಲಿ ಅಭಿಮನ್ಯು ಮೊದಲ ಬಾರಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಗಾಂಭೀರ್ಯದಿಂದ ಹೆಜ್ಜೆ  ಹಾಕಿದ್ದು, ವಿಜಯ ಕಾವೇರಿ, ಗೋಪಿ ಆನೆಗಳು ಸಾಥ್ ನೀಡಿದ್ದವು.

ಬಲರಾಮ ದ್ವಾರದ ಬಳಿ ಸಂಜೆ 4.17 ವೇಳೆಗೆ ಜಂಬೂ ಸವಾರಿ ಮೆರವಣಿಗೆ ಮುಕ್ತಾಯವಾಯಿತು. ಈ ಎರಡು ಸ್ತಬ್ಧಚಿತ್ರಗಳು ಮಾತ್ರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಅಲ್ಲಿ ನೆರೆದಿದ್ದ ಪ್ರೇಕ್ಷಕರು ಕಣ್ತುಂಬಿಕೊಂಡರು.

ಸರಳ ದಸರಾ: ಕೊರೋನಾ ಆತಂಕದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿಯಲ್ಲಿ ಈ ಬಾರಿ ವಿಜಯದಶಮಿ ಆಚರಣೆಯನ್ನು ಸೀಮಿತ ಅವಧಿಯಲ್ಲಿ ಸರಳವಾಗಿ ಮತ್ತು ಸುಸಜ್ಜಿತವಾಗಿ ನಡೆಸಲಾಗಿದೆ.

ಪ್ರತಿವರ್ಷ ಐದು ಕಿಮೀ ಸಾಗುತ್ತಿದ್ದ ಜಂಬೂಸವಾರಿ ಈ ಬಾರಿ ಅರಮನೆ ಆವರಣದೊಳಗಿನ ಭುವನೇಶ್ವರಿ ದೇವಸ್ಥಾನದಲ್ಲಿ ‘ಶಮಿಪೂಜೆ’ ನಡೆಸುವುದರೊಂದಿಗೆ ಕೊನೆಗೊಂಡಿದೆ.

ರಾಜಮನೆತನದ ಖಡ್ಗವನ್ನು ದೇವಾಲಯಕ್ಕೆ ಬೆಳ್ಳಿ ರಥದಲ್ಲಿ ಮೆರವಣಿಗೆಯಲ್ಲಿ ಸಾಗಿಸಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೊಂದಿಗೆ ನಡೆಸಿದ ಆಚರಣೆಗಳಲ್ಲಿ ರಾಜಕುಟುಂಬದ ನಿಕಟ ಸಂಬಂಧಿಗಳು ಮಾತ್ರ ಭಾಗವಹಿಸಿದ್ದರು. ರಾಜ ಖಡ್ಗವನ್ನು ಹಿಡಿದ ಒಡೆಯರ್, ಸ್ಥಾನವನ್ನು ಪ್ರವೇಶಿಸಿ, ಅದನ್ನು ‘ಶಮಿ’ ಮರದ ಬಳಿ ಇಟ್ಟು ಮರಕ್ಕೆ ಒಂದೇ ಹೊಡೆತದಲ್ಲಿ ಕತ್ತರಿಸಿ ಪೂಜೆಯನ್ನು ಅರ್ಪಿಸಿದರು.

ಕೋವಿಡ್ -19 ಆತಂಕದ ಹಿನ್ನೆಲೆಯಲ್ಲಿ ಈ ಬಾರಿ ‘ವಜ್ರಮುಷ್ಟಿ ಕಾಳಗ' (ಕುಸ್ತಿ ಸ್ಪರ್ಧೆ) ರದ್ದಾಗಿದೆ.
ಆರಂಭಿಕ ಒಂಬತ್ತು ದಿನಗಳಲ್ಲಿ ಮೈಸೂರು ರಾಜಮನೆತನದ ಖಾಸಗಿ ದರ್ಬಾರ್ ಅನ್ನು ದಸರಾ ಹಬ್ಬಗಳ ನೆನಪಿಗಾಗಿ ನಡೆಸಲಾಯಿತು, ದಸರೆಗೆ ಹಂಪಿಯ ವಿಜಯನಗರ ಚಕ್ರವರ್ತಿ ಆಚರಿಸಿದ ಆಚರಣೆಗಳೇ ಮೂಲ ಎಂದು ಗುರುತಿಸಲಾಗಿದೆ.

ಮೈಸೂರು ರಾಜ ಮನೆತನದವರು ಸಾಂಪ್ರದಾಯಿಕ ಆಚಾರಗಳೊಂದಿಗೆ ದಸರಾ ಸಂಪ್ರದಾಯವನ್ನು ಜೀವಂತವಾಗಿರಿಸಿಕೊಂಡಿದ್ದು, ಮೆರವಣಿಗೆಯಲ್ಲಿ ಆನೆಗಳು, ಕುದುರೆಗಳು ಮತ್ತು ಸೈನಿಕರ ಸೇರ್ಪಡೆಯಿರುತ್ತದೆ. 
ಹಿಂದೆ, ಮಹಾರಾಜರು ಎಲ್ಲಾ ಒಂಬತ್ತು ದಿನಗಳಲ್ಲಿ ರಾಜ ಸಿಂಹಾಸನವನ್ನು ಏರಿ ದರ್ಬಾರ್ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಪ್ರಜೆಗಳು ಆಡಳಿತಗಾರರನ್ನು ಗೌರವಿಸುತ್ತಿದ್ದರು. 

ದಸರಾ ಸಂದರ್ಭದಲ್ಲಿ ಚಿನ್ನದ ಸಿಂಹಾಸನ ಎಲ್ಲರ ಆಕರ್ಷಣೆ. ಇದರ ಮೂಲವೂ ವಿಜಯನಗರ ಎಂದು ಇತಿಹಾಸದಲ್ಲಿ ಗುರುತಿಸಲಾಗಿದೆ. 

ಕೆಲವರು ಅದರ ಮೂಲ ಮೊಘಲ್ ಎಂದು ಉಲ್ಲೇಖಿಸುತ್ತಾರೆ. ಆದರೆ ಖಚಿತವಾದ ಸಂಗತಿಯೆಂದರೆ, ಸಿಂಹಾಸನವನ್ನು 1609 ರಲ್ಲಿ ರಾಜಾ ಒಡೆಯರ್‌ಗೆ ಹಸ್ತಾಂತರಿಸಲಾಯಿತು. ಅಂದಿನಿಂದಲೂ ಅದು ಮೈಸೂರು ರಾಜಮನೆತನದಲ್ಲಿಯೇ ಉಳಿದಿದೆ.

ಡೊಮಿಂಗೊ ​​ಪೇಸ್ ಅವರು ಬಿಸ್ನಗರ ಸಾಮ್ರಾಜ್ಯಕ್ಕೆ (ವಿಜಯನಗರ) ಭೇಟಿ ನೀಡಿದ ಸಂದರ್ಭದಲ್ಲಿ ಒಂಬತ್ತು ದಿನಗಳ ಹಬ್ಬದ ನಂತರ ದಶಮಿಯಂದು ನಡೆದ ರಾಜನ ಮೆರವಣಿಗೆಯ ವಿವರಣೆಗಳು 1520 ರ ದಶಕದಲ್ಲಿ ಬರೆಯಲ್ಪಟ್ಟವು ಎಂದು ಪರಿಗಣಿಸಲಾಗಿದೆ. 

ಸುಮಾರು 500 ವರ್ಷಗಳ ನಂತರ, ಸೋಮವಾರ ಮೈಸೂರಿನ ರಾಜಮನೆತನದ ವಿಜಯದಶಮಿ ಮೆರವಣಿಗೆಯನ್ನು ಗುರುತಿಸಲು ಅಂಬಾ ವಿಲಾಸ್ ಅರಮನೆಯ ಆವರಣದಲ್ಲಿ ಹಿಂದಿನ ಯುಗದ ಚಿತ್ರಣಗಳು ತೆರೆದುಕೊಂಡು ಕಣ್ಮನ ತಣಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT