ರಾಜ್ಯ

ಮಾಸ್ಕ್ ಧರಿಸದಿದ್ದರೆ ದಂಡ: ಮಾರ್ಷಲ್ ಗಳಿಗೆ ಬಿಬಿಎಂಪಿ ನೀಡಿರುವ ಟಾರ್ಗೆಟ್ ಎಷ್ಟು ಗೊತ್ತಾ?

Srinivasamurthy VN

ಬೆಂಗಳೂರು: ಮಾರಕ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಜಾರಿಗೆ ತರಲಾಗಿರುವ ಮಾಸ್ಕ್ ಕಡ್ಡಾಯವನ್ನು ಪರಿಪಾಲಿಸಲು ಮಾರ್ಷಲ್ ಗಳನ್ನು ಬಿಬಿಎಂಪಿ ನೇಮಕ ಮಾಡಿತ್ತು. ಅಚ್ಚರಿ ವಿಚಾರ ಎಂದ ಈ ಮಾರ್ಷಲ್ ಗಳಿಗೂ ದಿನನಿತ್ಯ ಟಾರ್ಗೆಟ್ ನೀಡಲಾಗಿದೆಯಂತೆ...

ಹೌದು..ಮಾಸ್ಕ್ ಧರಿಸದಿದ್ದರೆ ಸ್ಥಳದಲ್ಲೇ ದಂಡಹಾಕುವ ಬಿಬಿಎಂಪಿ ಮಾರ್ಷಲ್ ಗಳಿಗೆ ನಿತ್ಯ ಕನಿಷ್ಟ 20 ಪ್ರಕರಣಗಳನ್ನು ದಾಖಲಿಸಲೇಬೇಕು ಎಂಬ ನಿಯಮ ವಿಧಿಸಲಾಗಿದೆಯಂತೆ. ಈ ನಿಯಮದ ಆದೇಶಕ್ಕೆ ಸ್ವತಃ ಬಿಬಿಎಂಪಿ ದಕ್ಷಿಣ ವಲಯದ ಕಾರ್ಯದರ್ಶಿ ಮತ್ತು ವಲಯ ಸಂಯೋಜಕರಾದ ಮನೀಶ್ ಮೌದ್ಗಿಲ್ಮ ಅವರು ಸಹಿ ಹಾಕಿದ್ದಾರೆ ಎನ್ನಲಾಗಿದೆ. 

ಅಂತೆಯೇ ಒಂದು ವೇಳೆ ಮಾರ್ಷಲ್ ಗಳು ನಿಗದಿ ಪಡಿಸಿರುವ ಟಾರ್ಗೆಟ್ ಸಾಧಿಸದಿದ್ದರೆ ಅವರ ವಿರುದ್ಧ ವಿಕೋಪ ನಿರ್ವಹಣಾ ಕಾಯ್ದೆ 2005ರ ಅಡಿಯಲ್ಲಿ ಯಾವುದೇ ರೀತಿಯ ನೋಟಿಸ್ ನೀಡದೇ ಕ್ರಮ ಕೈಗೊಳ್ಳಬೇಕು ಎಂದು ದಕ್ಷಿಣ ವಲಯದ ಮಾರ್ಷಲ್ಸ್ ಮೇಲ್ವಿಚಾರಕ ಸೋಮಶೇಖರ್ ಪಾಟೀಲ್ ಅವರಿಗೆ  ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ಸಾರ್ವಜನಿಕರು ಮಾಸ್ಕ್ ಧರಿಸದೇ ತಿರುಗಾಡುವಂತಿಲ್ಲ. ನಿಯಮ ಉಲ್ಲಂಘನೆ ಮಾಡಿದರೆ 250 ರೂ. ದಂಡ ವಿಧಿಸಬೇಕು ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಮಾಸ್ಕ್ ಧರಿಸದಿದ್ದರೆ ಹೇರಲಾಗುತ್ತಿದ್ದ 1000 ರೂ. ಗಳ ದಂಡಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಇತ್ತೀಚೆಗಷ್ಚೇ ಬಿಬಿಎಂಪಿ ಈ ದಂಡದ ಪ್ರಮಾಣವನ್ನು 250 ರೂ. ಗಳಿಗೆ ಇಳಿಕೆ ಮಾಡಿತ್ತು. 

SCROLL FOR NEXT