ಕೆರೆಯಲ್ಲಿ ಮರಳು ತೆಗೆಯುತ್ತಿದ್ದಾಗ ದಿಬ್ಬ ಕುಸಿದು ಮಹಿಳೆ ಸಾವು
ಕೆರೆಯಲ್ಲಿ ಮರಳು ತೆಗೆಯುತ್ತಿದ್ದಾಗ ದಿಬ್ಬ ಕುಸಿದ ಪರಿಣಾಮ ಮಹಿಳೆ ಸಾವನ್ನಪ್ಪಿರುವ ಘಟನೆ ಮಂಗಳವಾರ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು: ಕೆರೆಯಲ್ಲಿ ಮರಳು ತೆಗೆಯುತ್ತಿದ್ದಾಗ ದಿಬ್ಬ ಕುಸಿದ ಪರಿಣಾಮ ಮಹಿಳೆ ಸಾವನ್ನಪ್ಪಿರುವ ಘಟನೆ ಮಂಗಳವಾರ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಮಾಗಡಿ ತಾಲೂಕಿನ ಬಿಸ್ಕೂರು ಈ ಘಟನೆ ನಡೆದಿದ್ದು, ಜೀವನ ನಿರ್ವಹಣೆಗಾಗಿ ಕೆರೆಯಲ್ಲಿ ಮರಳು ತೆಗೆಯಲು ಹೋಗಿದ್ದ ಮಹಿಳೆಯೊಬ್ಬರು ಮರಳಿನ ದಿಬ್ಬ ಕುಸಿದು ಅದರಡಿ ಸಿಲುಕಿ ಮೃತಪಟ್ಟ ದುರ್ಘಟನೆ ಮಾಗಡಿ ತಾಲೂಕಿನ ಬಿಸ್ಕೂರುವಿನಲ್ಲಿ ನಡೆದಿದೆ.
ಗೊಲ್ಲಹಳ್ಳಿಯ ಮುನಿಸ್ವಾಮಿ ಎಂಬುವರ ಪುತ್ರಿ ರಾಧಾ (27) ಮೃತಪಟ್ಟವರು. ಬಿಸ್ಕೂರು ಕೆರೆ ಪಕ್ಕದಲ್ಲಿರುವ ಗೊಲ್ಲಹಳ್ಳಿ ಗ್ರಾಮದ ಮುನಿಸ್ವಾಮಿ ಕುಟುಂಬ ಸದಸ್ಯರು ಎತ್ತಿನಗಾಡಿಯಲ್ಲಿ ಕೆರೆಯಿಂದ ಮರಳು ತೆಗೆದು ಸುತ್ತಮುತ್ತಲ ಗ್ರಾಮಗಳಲ್ಲಿ ಮಾರಾಟ ಮಾಡುತ್ತಿದ್ದರು.
ಮುನಿಸ್ವಾಮಿ ಅವರ ಪತ್ನಿ ನಾಗಮಯ್ಯ ಹಾಗೂ ಮಗಳು ರಾಧಾ ಜತೆ ನಿನ್ನೆ ರಾತ್ರಿ ಮರಳು ತೆಗೆಯುತ್ತಿದ್ದಾಗ ಮರಳಿನ ದಿಬ್ಬ ಕುಸಿದಿದೆ. ಮರಳಿನಲ್ಲಿ ಸಿಲುಕಿದ ರಾಧಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಾಗಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.