ರಾಜ್ಯ

ಹುಲಿ ಬೇಟೆಯಾಡಿದ್ದ ಓರ್ವ ಆರೋಪಿ ಸೆರೆ, ಮತ್ತೋರ್ವ ಪರಾರಿ

Srinivasamurthy VN

ಮಡಿಕೇರಿ: ನಾಗರಹೊಳೆ ಹುಲಿ ಬೇಟೆಯಾಡಿ ಹತ್ಯೆಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗೋಣಿಕೊಪ್ಪ ಬಾಳಲೆ ಗ್ರಾಮದ ನಿವಾಸಿ ಕಾಂಡೇರ ಶಶಿ ಮತ್ತು ಸಂತೋಷ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಯೊಂದನ್ನು ಬೇಟೆಯಾಡಲಾಗಿತ್ತು. ಹುಲಿಯನ್ನು ಹತ್ಯೆಗೈದು ಅದರ ನಾಲ್ಕು ಕಾಲು ಮತ್ತು ಕೋರೆ ಹಲ್ಲುಗಳನ್ನು ಆರೋಪಿಗಳು  ಅಪಹರಿಸಿದ್ದರು. ಈ ಬಗ್ಗೆ ಆರೋಪಿಗಳ ಬಂಧನಕ್ಕೆ ಪೊಲೀಸರು ಯೋಜನೆ ರೂಪಿಸಿದ್ದರು. ಬಂಡೀಪುರ ಉದ್ಯಾನದ ಶ್ವಾನ ರಾಣಾನಿಂದಾಗಿ ಹುಲಿ ಹತ್ಯೆಯಾದ 24 ಗಂಟೆಯೊಳಗೆ ಪ್ರಮುಖ ಆರೋಪಿ ಸಂತೋಷ್ ನನ್ನು ಬಂಧಿಸಲಾಗಿತ್ತು. ಮತ್ತು ಈತನಿಂದ 7 ಹುಲಿ ಉಗುರುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆತ  ನೀಡಿದ ಸುಳಿವನ್ನಾಧರಿಸಿ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಹಚ್ಚಲು 6 ವಿಶೇಷ ತಂಡಗಳನ್ನು ರಚಿಸಲಾಗಿತ್ತು.

ಆರೋಪಿ ಸಂತೋಷ್ ನೀಡಿದ ಮಾಹಿತಿಯನ್ನಾಧರಿಸಿ ಬೆಂಗಳೂರಿನತ್ತ ತೆರಳಿದ್ದ ವಿಶೇಷ ತಂಡದ ಅಧಿಕಾರಿ. ಎ.ಸಿ.ಎಫ್ ಆಂಟೋನಿ ಪೌಲ್, ಆರ್ ಎಫ್ ಓ ಚೌಗುಲೆ ನೇತೃತ್ವದ ತಂಡಕ್ಕೆ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ರಾಮನಗರ ಪಟ್ಟಣದ KSRTC ಬಸ್ ನಿಲ್ದಾಣ ಬಳಿ ಪೆಟ್ರೋಲ್ ಪಂಪ್ ಹತ್ತಿರ  ಕುಳಿತುಕೊಂಡಿದ್ದ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಳೆಲೆ ನಿಟ್ಟೂರಿನ ವಟ್ಟ0ಗಡ ರಂಜು ಬಿನ್ ಬೆಳ್ಳಿಯಪ್ಪನನ್ನು ವಶಕ್ಕೆ ಪಡೆದುಕೊಂಡಿದ್ದರು. ಈತನನ್ನು ತೀವ್ರವಾಗಿ ವಿಚಾರಣೆ ನಡೆಸಿದ ವೇಳೆ ಆರೋಪಿ ನೀಡಿದ ಮಾಹಿತಿಯ ಮೇರೆಗೆ 4 ಹುಲಿ ಉಗುರುಗಳು ಮತ್ತು 2 ಕೊರೆ ಹಲ್ಲುಗಳನ್ನು ಆರೋಪಿ  ರಂಜುನ ಮಾವ ಅನ್ನಾಲವಾಡ್ ವಿಶ್ವನಾಥ್ ರವರ ಕಾಫಿ ತೋಟದಲ್ಲಿ ವಶಪಡಿಸಿಕೊಳ್ಳಲಾಗಿದೆ. ಇನ್ನುಳಿದ ಆರೋಪಿಗಳ ಪತ್ತೆಗೆ ಕ್ರಮವಹಿಸಲಾಗಿದೆ ಎಂದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಡಿ.ಮಹೇಶ್ ಕುಮಾರ್ ತಿಳಿಸಿದ್ದಾರೆ.

SCROLL FOR NEXT