ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಮಂಡ್ಯ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಮಲಗಿದ್ದಲ್ಲೇ ಇಬ್ಬರ ಬರ್ಬರ ಹತ್ಯೆ

ಮಲಗಿದ್ದಲ್ಲೇ ಇಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ ತಾಲೂಕಿನ ಯಲಿಯೂರು ಗ್ರಾಮದ ಇಟ್ಟಿಗೆ ಫ್ಯಾಕ್ಟರಿಯೊಂದರಲ್ಲಿ ಜರುಗಿದೆ.

ಸಂಗ್ರಹ ಚಿತ್ರ
Vishwanath S
Updated On : 4 Sept 2020, 8:07 pm

ಮಂಡ್ಯ: ಮಲಗಿದ್ದಲ್ಲೇ ಇಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ ತಾಲೂಕಿನ ಯಲಿಯೂರು ಗ್ರಾಮದ ಇಟ್ಟಿಗೆ ಫ್ಯಾಕ್ಟರಿಯೊಂದರಲ್ಲಿ ಜರುಗಿದೆ.

ಯಲಿಯೂರು ಸಮೀಪದ ಚಲುವರಾಜ್ ಮಾಲೀಕತ್ವದ ಮಾರುತಿ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಬಸವರಾಜು (44) ಹಾಗೂ ರಾಮಮೂರ್ತಿ (46) ಕೊಲೆಯಾದರು. 

ಬಸವರಾಜು ಶ್ರೀರಂಗಪಟ್ಟಣ ತಾಲೂಕಿನ ತಡಗವಾಡಿ ಗ್ರಾಮದವರಾಗಿದ್ದು, ರಾಮಮೂರ್ತಿ ಮೂಲತಃ ನೆಲಮಂಗಲ ಬಳಿಯ ಮರಳಗುಂಟೆ ಗ್ರಾಮದವರಾಗಿದ್ದಾರೆ. ಇಬ್ಬರೂ ಸುಮಾರು 8 ವರ್ಷಗಳಿಂದ ಈ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದಿನಂತೆಯೇ ಕೆಲಸ ಮುಗಿಸಿ ಅಲ್ಲೇ ಮಲಗುತ್ತಿದ್ದರು.ಆದರೆ ಇಂದು ಬೆಳಗ್ಗೆ  ಇಟ್ಟಿಗೆ ಫ್ಯಾಕ್ಟರಿಗೆ ಹೋದಾಗ ಚಲುವರಾಜ್ ಅವರಿಗೆ ಕೆಲಸಗಾರರ ಜೊಡಿ ಕೊಲೆಯಾಗಿರುವುದು ಪತ್ತೆಯಾಗಿದೆ. ತಕ್ಷಣವೇ ಸ್ಥಳೀಯರಿಗೆ ಮತ್ತು ಪೊಲೀಸರಿಗೆ ತಿಳಿಸಿದ್ದಾರೆ.

Advertisement

Advertisement

ಸುದ್ದಿತಿಳಿದ ಮಂಡ್ಯ ಎಸ್ಪಿ ಪರಶುರಾಮ್, ಡಿವೈಎಸ್ಪಿ ನವೀನ್ಕುಮಾರ್, ಎಸ್ಐ ಸಿದ್ದರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಕಳೆದ ರಾತ್ರಿ ಇಬ್ಬರೂ ಬಾರ್ಗೆ ಹೋಗಿ ಎಣ್ಣೆ ತಂದು ಇಟ್ಟಿಗೆ ಫ್ಯಾಕ್ಟರಿಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಈ ವೇಳೆ ಗಲಾಟೆಯಾಗಿ ಈ ಇಬ್ಬರ ಕೊಲೆ ನಡೆದಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದು ಆರೋಪಿಗಳ ಪತ್ತೆಗಾಗಿ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ನಾಗಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement