ರಾಜ್ಯ

ಉಡುಪಿಯಲ್ಲಿ ಮತ್ತೆ ತೆರೆದ ದೇವಾಲಯ, ಬೀಚ್: ಪ್ರವಾಸಿಗರಲ್ಲಿ ಮರುಕಳಿಸಿದ ಸಂಭ್ರಮ

Shilpa D

ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರಮುಖ ಆಕರ್ಷಣೆ  ದೇವಾಲಯಗಳು ಮತ್ತು ಬೀಚ್ ಗಳು,  ಕೊರೋನಾದಿಂದ ತತ್ತರಿಸಿರಿರುವ ರಾಜ್ಯ ಸರ್ಕಾರಕ್ಕೆ ಆದಾಯ ತರುವ ಮೂಲಗಳಲ್ಲಿ ಪ್ರವಾಸೋದ್ಯಮ ಕೂಡ ಒಂದಾಗಿದೆ. 

ಪ್ರವಾಸೋದ್ಯಮ ಕ್ಷೇತ್ರಕ್ಕೆ ಆದಾಯವನ್ನು ತರುವ ಚಟುವಟಿಕೆಗಳು ಭಾಗಶಃ ಪ್ರಾರಂಭವಾಗಿದ್ದು, ಇದು ಜನರು ತಮ್ಮ ಮನರಂಜನಾ ಚಟುವಟಿಕೆಗಳನ್ನು ಪುನರಾರಂಭಿಸಲು ಪ್ರೇರೇಪಿಸಿದೆ.

ಹೊರಗಿನಿಂದ ಬರುವ ಜನರಿಂದ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡುವ ಸಾಧ್ಯತೆ ಇರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನ ಒಟ್ಟಿಗೆ ಸೇರದಂತೆ ನೋಡಿಕೊಳ್ಳಲು ಉಡುಪಿ ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಮೂಲಗಳು ತಿಳಿಸಿವೆ. ಒಂದು ವೇಳೆ ಪ್ರವಾಸಿರು ತಮ್ಮ ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಹೂಡಿದರೇ ಯಾವುದೇ ಸಮಸ್ಯೆಯಿಲ್ಲ ಎಂದು ತಿಳಿಸಿದೆ.

ಆದರೆ ಪೂರ್ಣ ಪ್ರಮಾಣದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಆರಂಭವಾಗಿಲ್ಲ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಮಲ್ಪೆ ಬೀಚ್ ಗೆ ಹೆಚ್ಚಿನ ಪ್ರವಾಸಿಗರು ಬರಲು ಆರಂಭಿಸಿದ್ದಾರೆ, ಬೀಚ್ ಚಟುವಟಿಕೆಗಳನ್ನು ಆರಂಭಿಸಲು ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ, ವಾರಾಂತ್ಯದಲ್ಲಿ ಕೇವಲ ಕೆಲವು ಅಂಗಡಿಗಳು ಮಾತ್ರ ತೆರೆಯುತ್ತಿವೆ ಎಂದು ತಿಳಿಸಿದ್ದಾರೆ.

ಕರಾವಳಿ ಭಾಗದ ಹಲವು ಜಿಲ್ಲೆಗಳು ದೇವಾಲಯಗಳ ತಾಣಗಳಾಗಿವೆ,ಶೇ. 50 ರಷ್ಟು ಭಕ್ತಾದಿಗಳು ದೇವಾಲಯಕ್ಕೆ ಬರಲು ಆರಂಭಿಸಿದ್ದಾರೆ.  ಕೊಲ್ಲೂರು ಮೂಕಾಂಬಿಕಾ, ಮಂಗಳಾದೇವಿ ದೇವಾಲಯ, ಧರ್ಮಸ್ಥಳ ಮಂಜುನಾಥ ದೇವಾಲಯ, ಕದ್ರಿ ದೇವಾಲಯ, ಮತ್ತು ಕುಕ್ಕೆ ಸುಬ್ರಮಣ್ಯ ದೇವಾಲಯಗಳು ಪ್ರಮುಖವಾಗಿವೆ.

ದೇವಾಲಯಗಳ ಬಾಗಿಲು ತೆರೆದ ಮೇಲೆ ಶೇ.60 ರಷ್ಟು ಭಕ್ತಾದಿಗಳು ಬರುತ್ತಿದ್ದಾರೆ. ದೇವಾಸ್ಥಾನದ ಆವರಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದೆ,  ಯಾವುದೇ ಸಮಸ್ಯೆಯಾಗಗುತ್ತಿಲ್ಲ ಎಂದು ಶ್ರೀ ಮಂಗಳಾದೇವಿ ದೇವಾಸ್ಥಾನದ ಟ್ರಸ್ಟಿ ರಮನಾಥ್ ಹೆಗಡೆ ಹೇಳಿದ್ದಾರೆ.

ಇನ್ನೂ ಉಡುಪಿಯ ಕೃಷ್ಣ ಮಠದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇನ್ನೂ ವ್ಯವಸ್ಥೆ ಮಾಡಿಲ್ಲ,ಕನಕನ ಕಿಂಡಿ ಮೂಲಕ ಭಕ್ತರು ದೇವರ ದರ್ಶನ ಪಡೆದು ತೆರಳುತ್ತಿದ್ದಾರೆ.

SCROLL FOR NEXT