ರಾಜ್ಯ

ಸೆ.14 ರಿಂದ ದಾವಣಗೆರೆ ವಿವಿಯ ಅಂತಿಮ ವರ್ಷದ ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆ: ಅ.20ಕ್ಕೆ ಫಲಿತಾಂಶ 

Srinivas Rao BV

ಚಿತ್ರದುರ್ಗ/ದಾವಣಗೆರೆ: ಕೋವಿಡ್-19 ಪ್ರಕರಣಗಳ ಏರಿಕೆಯ ಪರಿಣಾಮ ಹೆಚ್ಚುತ್ತಿರುವ ಅಸ್ಥಿರತೆಯ ನಡುವೆಯೇ ದಾವಣಗೆರೆ ವಿಶ್ವವಿದ್ಯಾನಿಲಯ ಅಂತಿಮ ವರ್ಷದ ಪದವಿ, ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದೆ. 

ಸೆ.14 ರಿಂದ ಪರೀಕ್ಷೆ ಪ್ರಾರಂಭವಾಗಲಿದ್ದು, ಅಕ್ಟೋಬರ್ 10 ಕ್ಕೆ ಎಲ್ಲಾ ಪರೀಕ್ಷೆಗಳೂ ಮುಕ್ತಾಯಗೊಂಡು ಅ.20 ರಂದು ಫಲಿತಾಂಶವೂ ಪ್ರಕಟಗೊಳ್ಳಲಿದೆ. 

ಕೋವಿಡ್-19 ಪರಿಸ್ಥಿತಿಯಲ್ಲಿ ಉಂಟಾಗುವ ಆರೋಗ್ಯದ ಅಪಾಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಶ್ವವಿದ್ಯಾನಿಲಯ ಪರೀಕ್ಷೆಗೆ ತಯಾರಿ ನಡೆಸಿದೆ. ಶಿವಗಂಗೋತ್ರಿ ಹಾಗೂ ಗುಡ್ಡದ ರಂಗವ್ವನಹಳ್ಳಿಯಲ್ಲಿರುವ ಕ್ಯಾಂಪಸ್ ನ್ನು, ಘಟಕ ಮತ್ತು ಅಂಗಸಂಸ್ಥೆ ಕಾಲೇಜುಗಳನ್ನು ಪರೀಕ್ಷೆ ನಡೆಸುವುದಕ್ಕಾಗಿ ಸಿದ್ಧತೆ ಮಾಡಲಾಗಿದೆ. 

ಕೋವಿಡ್-19 ಸೋಂಕಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದಕ್ಕೆ ಅನುಕೂಲವಾಗಲೆಂದು ಕೋವಿಡ್ ಕೇರ್ ಕೇಂದ್ರಗಳನ್ನು ತೆರೆಯಲಾಗಿದೆ. ರೋಗಲಕ್ಷಣ ರಹಿತರಾದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇನ್ನು ಇನ್ವಿಜಿಲೇಟರ್ ಗಳು ಪರೀಕ್ಷೆ ಮುಕ್ತಾಯಗೊಳ್ಳುವವರೆಗೂ ಪಿಪಿಇ ಕಿಟ್ ಗಳನ್ನು ಧರಿಸಿರುತ್ತಾರೆ ಎಂದು ವಿವಿಯ ರಿಜಿಸ್ಟಾರ್ ಪ್ರೊ. ಬಸವರಾಜ ಬಣಕಾರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಪದವಿ, ಸ್ನಾತಕೋತ್ತರ ಪದವಿಯಿಂದ ಒಟ್ಟಾರೆ 47786 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 

SCROLL FOR NEXT