ರಾಜ್ಯ

ಕೋವಿಡ್-19 ನಿಯಂತ್ರಣಕ್ಕೆ 'ಐವರ್ಮೆಕ್ಟಿನ್' ಔಷಧದ ಸಲಹೆ ನೀಡಿದ ಮೆಲ್ಬರ್ನ್ ತಜ್ಞ ವೈದ್ಯ

Nagaraja AB

ಕಲುಬುರಗಿ: ಆಸ್ಟ್ರೇಲಿಯಾದ ಮೆಲ್ಬರ್ನ್ ನ ತಜ್ಞ ವೈದ್ಯರೊಬ್ಬರು, ಕೋವಿಡ್-19 ರೋಗಿಗಳಿಗೆ 'ಐವರ್ಮೆಕ್ಟಿನ್  ಔಷಧ ನೀಡುವಂತೆ ಭಾರತೀಯ ವೈದ್ಯರುಗಳಿಗೆ ಸಲಹೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮೆಲ್ಬೂರ್ನ್ ಹೃದಯ ಅರಿವಳಿಕೆ ತಜ್ಞ ಡಾ. ಶಶಿಕಾಂತ್ ಮಾಣಿಕಪ್ಪ,  ಕೋವಿಡ್-19 ರೋಗಕ್ಕೆ ಹಲವಾರು ಔಷಧಗಳನ್ನು ಬಳಸುತ್ತಿದ್ದರೂ, ಹೈಡ್ರೋಕ್ಸಿಕ್ಲೊರೈನ್, ಇತ್ತೀಚಿಗೆ ಐವರ್ಮೆಕ್ಟಿನ್ ಔಷಧ ಉತ್ತಮ ಭರವಸೆ ಮೂಡಿಸಿದೆ ಎಂದರು.ಈ ಔಷಧವನ್ನು ಬಳಸಿದ ಶೇ. 50 ರಷ್ಟು ರೋಗಿಗಳ ಆರೋಗ್ಯದಲ್ಲಿ ಉತ್ತಮ ಪ್ರಗತಿಯಾಗಿರುವುದಾಗಿ ಅವರು ತಿಳಿಸಿದರು.

ಮೂರು ತಿಂಗಳ ಹಿಂದೆ ಐವರ್ಮೆಕ್ಟಿನ್, ಡಾಕ್ಸಿಸೈಕ್ಲಿನ್, ಜಿಂಕ್ ಮತ್ತು ಕೊಲ್ಚಿಸಿನ್ ಔಷಧವನ್ನು ಕೊರೋನಾ ರೋಗಿಗಳು ಬಳಸಲು ಆರಂಭಿಸಿದ ನಂತರ ತುಂಬಾ ಪರಿಣಾಮಕಾರಿ ಎಂಬುದು ಕಂಡುಬಂದಿತು. ಪ್ರಸ್ತುತ ಜಗತ್ತಿನದಾದ್ಯಂತ 28 ಕೋವಿಡ್-19 ಐವರ್ಮೆಕ್ಟಿನ್ ಚಿಕಿತ್ಸೆ ಬಗ್ಗೆ ಅಧ್ಯಯನ ನಡೆಯುತ್ತಿದೆ ಎಂದು ಅವರು ಹೇಳಿದರು.

ಕೊರೋನಾ ಸೋಂಕನ್ನು ಪರಿಣಾಮಕಾರಿಯಾಗಿ ತಡೆಗಟ್ಟುವಲ್ಲಿ ಈ ಔಷಧ ಸಹಕಾರಿಯಾಗಿರುವುದಾಗಿ ಡಾ. ಶಶಿಕಾಂತ್ ವಿಶ್ವಾಸ ವ್ಯಕ್ತಪಡಿಸಿದರು.

SCROLL FOR NEXT