ರಾಜ್ಯ

ಶಾಸಕಾಂಗ ಪಕ್ಷದ ಸಭೆಯಲ್ಲಿದ್ದಾಗಲೇ ಹ್ಯಾರಿಸ್ ಗೆ ಬಂತು ಮೊಬೈಲ್ ಸಂದೇಶ, ಕಾಂಗ್ರೆಸ್ ಶಾಸಕರಿಗೀಗ ಆತಂಕ!

Lingaraj Badiger

ಬೆಂಗಳೂರು: ಇದೇ ತಿಂಗಳ 21 ರಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗಲಿದೆ. ಸದನದಲ್ಲಿ ಹಲವು ವಿಚಾರಗಳನ್ನು ಪ್ರಸ್ತಾಪ ಮಾಡಲು ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಕರೆದಿದ್ದ ಶಾಸಕಾಂಗ ಸಭೆಯಲ್ಲಿ ಶಾಂತಿನಗರ ಮತಕ್ಷೇತ್ರದ ಶಾಸಕ ಎನ್.ಎ.ಹ್ಯಾರಿಸ್ ಅವರು ಸಹ ಭಾಗವಹಿಸಿದ್ದರು.

ಹ್ಯಾರಿಶ್ ಅವರು ಸಭೆಯಲ್ಲಿದ್ದಾಗಲೇ ಅವರ ಮೊಬೈಲ್ ಗೆ ಸಂದೇಶವೊಂದು ಬಂದಿದ್ದು, ಅಲ್ಲಿದ್ದ ಇತರ ಶಾಸಕರಿಗೆ ಈಗ ಆತಂಕ ಶುರುವಾಗಿದೆ.

ಸದನಕ್ಕೆ ಪಕ್ಷದ ತಯಾರಿ ಹೇಗಿರಬೇಕೆಂಬ ಚರ್ಚೆಗಾಗಿ ಕರೆದಿದ್ದ ಸಭೆಯಲ್ಲಿ ಭಾಗವಹಿಸುವ ಮುನ್ನ ಹ್ಯಾರಿಶ್ ಅವರು ಕೋವಿಡ್-19  ಪರೀಕ್ಷೆಗೊಳಗಾಗಿದ್ದರು. ಆದರೆ ಫಲಿತಾಂಶ ಬರುವುದು ತಡವಾದ್ದರಿಂದ ಹ್ಯಾರೀಸ್ ಸಭೆಗೆ ಹಾಜರಾಗಿದ್ದರು. ಸಭೆಯ ಬಳಿಕ ಮಧ್ಯಾಹ್ನ ಭೋಜನದ ವೇಳೆ ಹ್ಯಾರೀಸ್ ಮೊಬೈಲ್ ಗೆ ಸಂದೇಶವೊಂದು ಬಂದಿದ್ದು, ಸಂದೇಶ ಬಂದ ತಕ್ಷಣವೇ ಹ್ಯಾರೀಸ್ ಸಭೆಯಿಂದ ಹೊರನಡೆದಿದ್ದಾರೆ.

ಇದು ಹ್ಯಾರೀಸ್ ಗೆ ಕೊರೊನಾ ಸೋಂಕು ದೃಢಪಟ್ಟಿರುವ ಬಗ್ಗೆ ಸಂದೇಶ ಬಂದಿದೆ ಎನ್ನಲಾಗಿದ್ದು, ಹ್ಯಾರೀಸ್ ತಮ್ಮ ಮನೆಗೆ ತೆರಳಿ ಹೋಮ್ ಐಸೋಲೇಶನ್ ಆಗಿದ್ದಾರೆ. ಹ್ಯಾರೀಸ್ ಜೊತೆ ಊಟ ಮಾಡಿದ್ದ, ಸಭೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಶಾಸಕರಿಗೀಗ ಆತಂಕ ಶುರುವಾಗಿದೆ.

SCROLL FOR NEXT