ರಾಜ್ಯ

ಕೃಷಿ, ಕೃಷಿಯೇತರ ಕ್ಷೇತ್ರಕ್ಕೆ 39,300 ಕೋಟಿ ರೂ. ಸಾಲ: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

Nagaraja AB

ಬೆಂಗಳೂರು: ಈ ವರ್ಷ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ  ಕೃಷಿ, ಕೃಷಿಯೇತರ ಕ್ಷೇತ್ರಕ್ಕೆ 39 ಸಾವಿರದ 300 ಕೋಟಿ ಸಾಲವನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಸಹಕಾರ ಇಲಾಖೆ ಆಯೋಜಿಸಿದ್ದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಆರ್ಥಿಕ ಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್- 19 ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ಕೈಗೊಳ್ಳಲಾಗಿರುವ ಯೋಜನೆಗಳ ಬಗ್ಗೆ ವಿವರ ನೀಡಿದರು. ಸಹಕಾರ ಕ್ಷೇತ್ರದಲ್ಲಿ ಮೂಲಸೌಕರ್ಯಕ್ಕೆ ಆದ್ಯತೆ ನೀಡಲಾಗಿದ್ದು, ಸಹಕಾರಿ ಸಂಘಗಳ ಬಲವರ್ದನೆಗೆ 4,525 ಕೋಟಿ ರೂಪಾಯಿಯನ್ನು ಹಂಚಿಕೆ ಮಾಡಲಾಗಿದೆ.ಕೇಂದ್ರ ಸರ್ಕಾರ ವಿಶೇಷ ಲಿಕ್ವಿಡಿ ಸೌಲಭ್ಯದಡಿಯಲ್ಲಿ ಜಿಲ್ಲಾ ಸಹಕಾರಿ ಬ್ಯಾಂಕ್ ಗಳಿಗೆ 1,700 ಕೋಟಿ ರೂ ನೀಡಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಈ ಕಾರ್ಯಕ್ರಮ ಈಗಾಗಲೇ ಅನುಷ್ಠಾನಗೊಂಡಿದ್ದು, ಸಹಕಾರಿ ಸಂಘಗಳು ಈಗಾಗಲೇ 11,880 ಕೋಟಿ ರೂ. ಸಾಲವನ್ನು ನೀಡಿದ್ದರೆ, ನಗರ ಸಹಕಾರಿ ಬ್ಯಾಂಕುಗಳು ಸಹ ಸಾಲವನ್ನು ಮಂಜೂರು ಮಾಡಿದ್ದು, ಈ ವರ್ಷ 39, 300 ಕೋಟಿ ಗುರಿಯನ್ನು ಹೊಂದಲಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

SCROLL FOR NEXT