ಸಾಂದರ್ಭಿಕ ಚಿತ್ರ 
ರಾಜ್ಯ

ಪ್ಲಾಸ್ಮಾ ದಾನ ಮಾಡಿದರೂ ಸರ್ಕಾರ ಘೋಷಿಸಿದ್ದ 5 ಸಾವಿರ ರೂ. ಪ್ರೋತ್ಸಾಹ ಧನ ಇನ್ನೂ ಸಿಕ್ಕಿಲ್ಲ!

ಪ್ಲಾಸ್ಮಾ ದಾನಿಗಳಿಗೆ ಸರ್ಕಾರ ಘೋಷಣೆ ಮಾಡಿದ್ದ 5 ಸಾವಿರ ರೂ ಪ್ರೋತ್ಸಾಹ ಧನ ಪ್ಲಾಸ್ಮಾದಾನಿಗಳಿಗೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರು: ಪ್ಲಾಸ್ಮಾ ದಾನಿಗಳಿಗೆ ಸರ್ಕಾರ ಘೋಷಣೆ ಮಾಡಿದ್ದ 5 ಸಾವಿರ ರೂ ಪ್ರೋತ್ಸಾಹ ಧನ ಪ್ಲಾಸ್ಮಾದಾನಿಗಳಿಗೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಕೋವಿಡ್ ಸೋಂಕು ಚಿಕಿತ್ಸೆಯಲ್ಲಿ ಪರಿಣಾಮಕಾರಿ ಎಂದು ಹೇಳಲಾಗುತ್ತಿದ್ದ ಪ್ಲಾಸ್ಮಾ ಥೆರಪಿ ಚಿಕಿತ್ಸೆಗಾಗಿ ಪ್ಲಾಸ್ಮಾ ದಾನ ಮಾಡುವಂತೆ ಸರ್ಕಾರ ಮನವಿ ಮಾಡಿತ್ತು. ಅಲ್ಲದೇ ಪ್ಲಾಸ್ಮಾದಾನಿಗಳಿಗೆ 5 ಸಾವಿರ ರೂ ಪ್ರೋತ್ಸಾಹ ಧನ ನೀಡುವುದಾಗಿ ಕಳೆದ ಜುಲೈನಲ್ಲಿ ಸರ್ಕಾರ ಘೋಷಣೆ ಮಾಡಿತ್ತು, ಆದರೆ ಇದೀಗ  ಪ್ಲಾಸ್ಮಾ ದಾನಿಗಳಿಗೆ ಈ ಪ್ರೋತ್ಸಾಹ ಧನ ಲಭ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ. 

ಮೂಲಗಳ ಪ್ರಕಾರ ಪ್ಲಾಸ್ಮಾ ದಾನಿಗಳ ಕುರಿತು ಸರ್ಕಾರ ದತ್ತಾಂಶವನ್ನೇ ಸಂಗ್ರಹಿಸಿಲ್ಲ. ಎಷ್ಟು ಮಂದಿ ಪ್ಲಾಸ್ಮಾ ದಾನಿಗಳು ನೋಂದಣಿಯಾಗಿದ್ದಾರೆ ಮತ್ತು ಎಷ್ಟು ಮಂದಿ ಪ್ಲಾಸ್ಮಾ ದಾನ ಮಾಡಿದ್ದಾರೆ ಎಂಬ ಅಂಶಗಳು ಸರ್ಕಾರದ ಬಳಿ ಇಲ್ಲ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿದ ಆರೋಗ್ಯ ಇಲಾಖೆ ಅಧಿಕಾರಿಗಳು 
ಪ್ಲಾಸ್ಮಾ ದಾನಿಗಳ ಮಾಹಿತಿಯನ್ನು ತಾವು ಶೇಖರಣೆ ಮಾಡುತ್ತಿದ್ದು, ಸುವರ್ಣ ಆರೋಗ್ಯ ಸುರಕ್ಷ ತಂಡ-SASTದಿಂದ ಪ್ಲಾಸ್ಮಾದಾನಿಗಳಿಗೆ ಹಣ ವರ್ಗಾವಣೆ ಮಾಡಲಾಗುತ್ತದೆ. ಈ ಕುರಿತಂತೆ ಸೋಮವಾರ SAST ಟಾಸ್ಕ್ ಫೋರ್ಸ್ ಸಭೆ ನಡೆಸಿದ್ದು, ಸಭೆಯಲ್ಲಿ ಹಲವು ಅಂಶಗಳ ಕುರಿತು ಚರ್ಚೆ  ನಡೆಸಲಾಗಿದೆ.
 
ಈ ಬಗ್ಗೆ ಮಾತನಾಡಿದ SAST ಟಾಸ್ಕ್ ಫೋರ್ಸ್ ನ ವೈದ್ಯಕೀಯ ನಿರ್ವಹಣೆ ವಿಭಾಗದ ನಿರ್ದೇಶಕ ಡಾ.ಬಿ ಮಂಜುನಾಥ್ ಅವರು, ಪ್ಲಾಸ್ಮಾ ಪ್ಯಾಕೇಜ್‌ ಕುರಿತಂತೆ KSAPS (ಕರ್ನಾಟಕ ಸ್ಟೇಟ್ ಏಯ್ಡ್ಸ್ ಪ್ರಿವೆನ್ಷನ್ ಸೊಸೈಟಿ) ಕಾರ್ಯನಿರ್ವಹಿಸುತ್ತಿದ್ದು, ಶೀಘ್ರದಲ್ಲೇ ನಾವು ಪಾವತಿ ಪ್ರಕ್ರಿಯೆ  ಪ್ರಾರಂಭಿಸಬಹುದು. ನಾವು ರಾಜ್ಯದ ವಿವಿಧ ರಕ್ತ ಬ್ಯಾಂಕ್‌ಗಳಿಂದ ದಾನಿಗಳ ವಿವರಗಳನ್ನು ಪಡೆಯಲು ಪ್ರಾರಂಭಿಸಿದ್ದೇವೆ. ರಾಜ್ಯದಲ್ಲಿ 60 ಕ್ಕೂ ಹೆಚ್ಚು ಪ್ಲಾಸ್ಮಾ ಕೇಂದ್ರಗಳಿವೆ ಎಂದು ಹೇಳಿದ್ದಾರೆ.

SAST ನ ಕಾರ್ಯಕಾರಿ ನಿರ್ದೇಶಕ ಎನ್ ಟಿ ಅಬ್ರೂ ಅವರು, ನಮ್ಮಲ್ಲಿ ಪ್ಲಾಸ್ಮಾ ದಾನಿಗಳ ದತ್ತಾಂಶ ಇಲ್ಲದಿರುವುದರಿಂದ ಪ್ರೋತ್ಸಾಹ ಧನ ದಾನಿಗಳನ್ನು ತಲುಪಿಲ್ಲ. ಒಂದು ವಾರದಲ್ಲಿ ನಾವು ಎಲ್ಲಾ ವಿವರಗಳನ್ನು ಪಡೆಯಲಿದ್ದೇವೆ ಮತ್ತು ಪಾವತಿಗಳನ್ನು ಪ್ರಾರಂಭಿಸುತ್ತೇವೆ. ಬೆಂಗಳೂರಿನ ಹೆಚ್ ಸಿಜಿ  ಆಸ್ಪತ್ರೆಯಲ್ಲಿ 320 ಪ್ಲಾಸ್ಮಾ ದಾನಿಗಳು ನೋಂದಣಿಯಾಗಿದ್ದು, ಅವರಿಗೆ ಅವರ ಪ್ರೋತ್ಸಾಹಕ ಧನ ನೀಡಲಾಗಿದೆ. ಕೇವಲ ಪ್ರೋತ್ಸಹ ಧನ ಮಾತ್ರವಲ್ಲದೇ ಪ್ಲಾಸ್ಮಾ ದಾನಿಗಳ ಸಾರಿಗೆ ಭತ್ಯೆ ಮತ್ತು ಆಹಾರ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ಹೇಳಿದರು.

ಕಳೆದ ಜುಲೈನಲ್ಲಿ ಸಚಿವ ಸುಧಾಕರ್ ಅವರು ಪ್ಲಾಸ್ಮಾದಾನ ಮಾಡುವವರಿಗೆ ಸರ್ಕಾರದಿಂದ 5000 ರೂ. ಪ್ರೋತ್ಸಾಹಧನ ನೀಡಲಾಗುವುದು ಎಂದು ಘೋಷಣೆ ಮಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT