ರಾಜ್ಯ

ಧಾರವಾಡದ ತಿಮಿಂಗಲದ ಅಸ್ಥಿಪಂಜರ ಹೊಸ ಸಂಸತ್ ಭವನಕ್ಕೆ ಶಿಫ್ಟ್?

Shilpa D

ಕಾರವಾರ: ಕರ್ನಾಟಕ ವಿಶ್ವವಿದ್ಯಾಲಯದ ಸಾಗರ ಜೀವಶಾಸ್ತ್ರ ವಿಭಾಗದಲ್ಲಿ ಪ್ರದರ್ಶಿಸಲಾದ ತಿಮಿಂಗಿಲದ ಅಸ್ಥಿಪಂಜರವು ರಾಷ್ಟ್ರೀಯ ಸಾಗರ ವಿಜ್ಞಾನ ಸಂಸ್ಥೆಯ ತಜ್ಞರ ಗಮನ ಸೆಳೆದಿದ್ದು,  ದೆಹಲಿಯ ಹೊಸ ಸಂಸತ್ತಿನ ಭವನದಲ್ಲಿ ಪ್ರದರ್ಶಿಸಲು ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

1971 ರಲ್ಲಿ  ಭಟ್ಕಳದ ಸಮುದ್ರ ತೀರಕ್ಕೆ ತಿಮಿಂಗಲದ ಅಸ್ಥಿಪಂಜರ ತೇಲಿ ಬಂದಿತ್ತು. ಎನ್ ಐಒ ನಿರ್ದೇಶಕ ಶ್ರೀಧರ್ ಮತ್ತು ಇತರರ ಪರಿಶ್ರಮದಿಂದಾಗಿ ಅದನ್ನು ಸುರಕ್ಷಿತವಾಗಿಟ್ಟಿದ್ದಾರೆ.  

ಹೊಸದಾಗಿ ನಿರ್ಮಾಣವಾಗುತ್ತಿರುವ ಸಂಸತ್ ಭವನದಲ್ಲಿ ಇಂಥ ಅಪರೂಪದ ವಸ್ತುಗಳನ್ನು ಪ್ರದರ್ಶಿದರೇ  ಉತ್ತಮವಾಗಿರುತ್ತದೆ ಎಂದು ಧಾರವಾಡದ ಕರ್ನಾಟಕ ವಿವಿ ಸಾಗರ ವಿಜ್ಞಾನ ವಿಭಾಗದ ಮುಖ್ಯಸ್ಥ ಜಗನ್ನಾಥ್ ರಾಥೋಡ್ ಹೇಳಿದ್ದಾರೆ. 

ಅದರಂತೆ ಅಪರೂಪದ ಆವಿಷ್ಕಾರಗಳು ಅಥವಾ ಮಾದರಿಗಳನ್ನು ಹೊಸದಾಗಿ ನಿರ್ಮಾಣವಾಗುತ್ತಿರುವ ಸಂಸತ್ ಭವನದಲ್ಲಿ ಪ್ರದರ್ಶಿಸಲಾಗುವುದು ಎಂದು ಎನ್‌ಐಒ ಅಧಿಕಾರಿಗಳು ಹೇಳಿದ್ದಾರೆ.

“ಬಲೀನ್ ತಿಮಿಂಗಿಲದ ಅಸ್ಥಿಪಂಜರವು ಅಪರೂಪವಾಗಿದ್ದು,  ಅದನ್ನು ಇಲ್ಲಿ ಹೇಗೆ ಜೋಡಿಸಲಾಗಿದೆ ಮತ್ತು ಪ್ರದರ್ಶಿಸಲಾಗಿದೆ  ಎಂಬ ಬಗ್ಗೆ ರಾಷ್ಟ್ರೀಯ ಸಾಗರ ವಿಜ್ಞಾನ ಅಧಿಕಾರಿಗಳು  ವಿಚಾರಿಸಿದ್ದಾರೆ ಎಂದು ಕೆಯುಡಿಯ ಸಾಗರ ಜೀವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಿವಕುಮಾರ್ ಹರಗಿ ತಿಳಿಸಿದ್ದಾರೆ.

ಇಲಾಖೆಯಲ್ಲಿರುವ ಅಸ್ಥಿಪಂಜರವು ಕಳೆದ ಹಲವು ದಶಕಗಳಿಂದ ಸಮುದ್ರ ಜೀವಶಾಸ್ತ್ರದ ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ಪ್ರಮುಖ ಆಕರ್ಷಣೆಯಾಗಿದೆ. ಬಲೀನ್ ತಿಮಿಂಗಿಲಗಳು ಅಥವಾ ನೀಲಿ ತಿಮಿಂಗಿಲಗಳು 136 ಟನ್ ವರೆಗೆ ತೂಗುತ್ತವೆ. ಆದಾಗ್ಯೂ, ಅಸ್ಥಿಪಂಜರದ ಉದ್ದ 12 ಮೀಟರ್ ಮತ್ತು ಇದು ಮೂರು ಟನ್ ತೂಕವಿದೆ.

SCROLL FOR NEXT