ರಾಜ್ಯ

ಪುರಾತತ್ವ ಇಲಾಖೆಯ ಪ್ರದೇಶಗಳಲ್ಲಿ ಚಿತ್ರೀಕರಣಕ್ಕೆ ಆನ್'ಲೈನ್ ಮೂಲಕ ಅನುಮತಿಗೆ ಅವಕಾಶ

Manjula VN

ಬೆಂಗಳೂರು: ಪುರಾತತ್ವ ಇಲಾಖೆಯ ಪ್ರದೇಶಗಳಲ್ಲಿ ಸಾಕ್ಷ್ಯಚಿತ್ರ, ಫೋಟೋ ಶೂಟ್ ಹಾಗೂ ಸಿನಿಮಾ ಚಿತ್ರೀಕರಣಕ್ಕೆ ಆನ್'ಲೈನ್ ಮೂಲಕ ಅರ್ಜಿ ಸಲ್ಲಿಸಿ ಅನುಮತಿ ಪಡೆಯಲು ಸರ್ಕಾರ ಅವಕಾಶ ಕಲ್ಪಿಸಿದೆ. 

ಈ ಕುರಿತು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರು ಮಾತನಾಡಿ, ಪುರಾತತ್ವ ಇಲಾಖೆಗೆ ಸೇರಿದ ಪ್ರದೇಶಗಳಲ್ಲಿ ಫೋಟೋ ಶೂಟ್, ಸಾಕ್ಷ್ಯಚಿತ್ರ ಹಾಗೂ ಸಿನಿಮಾ ಚಿತ್ರೀಕರಣ ನಡೆಯಲು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಅನುಮತಿ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಪ್ರಸ್ತುತ ಇರುವ ಪ್ರಕ್ರಿಯೆ ಮಾರ್ಗಸೂಚಿ ಹಾಗೂ ನಿರ್ಬಂಧಗಳೇ ಇಲ್ಲಿಯೂ ಅನ್ವಯಿಸಲಿವೆ ಎಂದು ಹೇಳಿದ್ದಾರೆ.

ಈ ಹಿಂದೆ ಜನರು ಹಲವು ಸಂಸ್ಥೆಗಳಿಂದ ಅನುಮತಿ ಪಡೆಯಬೇಕಿತ್ತು. ಆದರೆ, ಆನ್'ಲೈನ್ ಮೂಲಕ ಅರ್ಜಿ ಸಲ್ಲಿಸುವುದರಿಂದ ಏಕಕಾಲದಲ್ಲೇ ಅನುಮತಿ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಿ, ಹಣ ಪಾವತಿ ಮಾಡಿದ 7 ದಿನಗಳಲ್ಲೇ ಅನುಮತಿ ನೀಡಲಾಗುತ್ತದೆ. ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ಪುರಾತತ್ವ ಇಲಾಖೆಯ ಪ್ರದೇಶಗಳಿಗೆ ಮಾತ್ರ ಅನುಮತಿ ಪಡೆಯಬೇಕಾಗಿದೆ. ಅನುಮತಿ ಪಡೆದ ವ್ಯಕ್ತಿ ಸ್ಥಳ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. 

ಹೆಲಿಕಾಪ್ಟರ್ ಮತ್ತು ಹೆಲಿಟೂರಿಸಂ ಸಂಸ್ಥೆಗಳೊಂದಿಗೆ ಸಭೆ ನಡೆಸಲಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರುತ್ತಿದ್ದಂತೆಯೇ ಮಾರ್ಗಗಳ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ನಂತರ ಕಾರ್ಯಾಚರಣೆಗಳೂ ಆರಂಭವಾಗುತ್ತದೆ ಎಂದಿದ್ದಾರೆ.

SCROLL FOR NEXT