ಆರೋಪಿ ನಾಗರಾಜ್ 
ರಾಜ್ಯ

ಹಾಸನ: ಮದುವೆಗೆ ನಿರಾಕರಿಸಿದ ಸೋದರಿಯರ ಮೇಲೆ ಮಚ್ಚಿನಿಂದ ಹಲ್ಲೆ!

ಮದುವೆಗೆ ನಿರಾಕರಿಸಿದ್ದ ಸೋದರಿಯರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ವ್ಯಕ್ತಿಯೊಬ್ಬನನ್ನು ಹಾಸನ ಜಿಲ್ಲಾ ಪೋಲೀಸರು ಬಂಧಿಸಿದ್ದಾರೆ. 

ಹಾಸನ: ಮದುವೆಗೆ ನಿರಾಕರಿಸಿದ್ದ ಸೋದರಿಯರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ವ್ಯಕ್ತಿಯೊಬ್ಬನನ್ನು ಹಾಸನ ಜಿಲ್ಲಾ ಪೋಲೀಸರು ಬಂಧಿಸಿದ್ದಾರೆ. 

ಆರೋಪಿಯನ್ನು ನಾಗರಾಜ್ ಅಲಿಯಾಸ್ ನಾಗ ಎಂದು ಗುರುತಿಸಲಾಗಿದ್ದು ಇವನೊಂದಿಗೆ ಕೃತ್ಯಕ್ಕೆ ಸಹಕರಿಸಿದ್ದ ಅಜ್ಜಿ ಪುಟ್ಟಮ್ಮ ಹಾಗೂ ಅವನ ಸೋದರತ್ತೆ ಅಕ್ಕಮ್ಮನನ್ನ ಸಹ ಪೋಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆ ವಿವರ

ಏಪ್ರಿಲ್ 12 ರಂದು ಹಾಸನ ಜಿಲ್ಲೆ ಹೊಳೆನರಸೀಪುರದ ದೊಡ್ಡಕುಂಚಾವು ಗ್ರಾಮದಲ್ಲಿ ಯೋಗಿತಾ (22) ಹಾಗೂ ಆಕೆಯ ಸೋದರಿ ಪುಶ್ಪಿತಾ ಎಂಬುವವರ ಮೇಲೆ ನಾಗರಾಜ್ ಹಲ್ಲೆ ನಡೆಸಿದ್ದ. ಯೋಗಿತಾ ಹಾಗೂ ಪುಶ್ಪಿತಾ ಅವರ ತಂದೆ ಎರಡು ತಿಂಗಳ ಹಿಂದೆ ಸಾವನ್ನಪ್ಪಿದ್ದರು. ಸಾವಿನ ಮನೆಯಲ್ಲಿ ವರ್ಷದೊಳಗೆ ಶುಭಕಾರ್ಯ ನಡೆಯಬೇಕೆಂದು ನಂಬಿಕೆ ಇದ್ದು ಈ ಹಿನ್ನೆಲೆ ನಾಗರಾಜ್ ಯೋಗಿತಾಳನ್ನು ತನ್ನ ತಮ್ಮ ದಿನೇಶ್ ಗೆ ವಿವಾಹ ಮಾಡಿಕೊಡುವಂತೆ ಸೋದರಿಯರ ತಾಯಿಯ ಬಳಿ ಕೇಳಿದ್ದ.

ಆದರೆ ಹಿರಿಯಳಾಗಿದ್ದ ಯೋಗಿತಾ ತಂದೆ ಇಲ್ಲದ ಕಾರಣ ನನಗೆ ಸಂಸಾರದ ಜವಾಬ್ದಾರಿ ಇದೆ. ತಂಗಿಯನ್ನು ಓದಿಸಬೇಕು, ಮೇಲಾಗಿ ಪದವೀಧರೆಯಾಗಿರುವ ನಾನು ನಿನ್ನ ತಮ್ಮನನ್ನು ಮದುವೆಯಾಗಲಾರೆ ಎಂದು ನಿರಾಕರಿಸಿದ್ದಾಳೆ. ಆಗ ನಾಗರಾಜ್ ನಿನ್ನ ತಂಗಿಯಾದರೂ ಸರಿ ನನ್ನ ತಮ್ಮ ಮದುವೆಯಾಗುತ್ತಾನೆ ಎಂದು ಹೇಳಿದ್ದಾನೆ. ಆದರೆ ಅದಕ್ಕೂ ಯೋಗಿತಾ ಒಪ್ಪದೆ ಹೋದಾಗ ಇಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ.

ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಸೋದರಿಯರು ಹಾಸನದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಸಂಬಂಧ ಹೊಳೆನರಸೀಪುರ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಕೇರಳಂ: ಮಿನಿ ಕೂಪರ್ ಕಾರು ಅಪಘಾತದಲ್ಲಿ ಮೂವರ ಸಾವು, ತಡರಾತ್ರಿಯಲ್ಲಿ ಹಿಂದೂ ಯುವತಿಯರು ಹೊರಗೆ ಹೋಗಿದ್ಯಾಕೆ? ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ

ಸ್ಟಿಂಗ್‌ ಆಪರೇಷನ್‌ ಬಗ್ಗೆ ಬೇರೆಯವರು ಮಾತನಾಡುವ ಆಗಿಲ್ಲ ಎನ್ನಲು ನೀವೇನು ಸರ್ವಾಧಿಕಾರಿಯೇ ಪ್ರಿಯಾಂಕ್‌ ಖರ್ಗೆ..?