ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು: ಆ್ಯಕ್ಸಿಜನ್ ಬೆಡ್ ಸಿಗದೆ ಸೋಂಕು ಪೀಡಿತ ಟೆಕ್ಕಿ ಸಾವು

ಸೂಕ್ತ ಸಮಯಕ್ಕೆ ಆ್ಯಕ್ಸಿಜನ್ ಬೆಡ್ ಸಿಗದ ಕಾರಣ ಕೊರೋನಾ ಸೋಂಕಿನಿಂದ ಬಳಲುತ್ತಿದ್ದ 35 ವರ್ಷದ ಸಾಫ್ಟ್ ವೇರ್ ಎಂಜಿನಿಯರ್ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.

ಬೆಂಗಳೂರು: ಸೂಕ್ತ ಸಮಯಕ್ಕೆ ಆ್ಯಕ್ಸಿಜನ್ ಬೆಡ್ ಸಿಗದ ಕಾರಣ ಕೊರೋನಾ ಸೋಂಕಿನಿಂದ ಬಳಲುತ್ತಿದ್ದ 35 ವರ್ಷದ ಸಾಫ್ಟ್ ವೇರ್ ಎಂಜಿನಿಯರ್ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. 

ಸುಬ್ರಹ್ಮಣ್ಯ (35) ಮೃತಪಟ್ಟ ಟೆಕ್ಕಿಯಾಗಿದ್ದಾರೆ. ಸುಬ್ರಹ್ಮಣ್ಯ ಅವರು ಅತ್ಯುತ್ತಮ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದರು. ಕುಟುಂಬದ ಸ್ನೇಹಿತರಾಗಿದ್ದರು. ಸೋಮವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಅವರ ಪತ್ನಿ ನನಗೆ ದೂರವಾಣಿ ಕರೆ ಮಾಡಿದ್ದರು. ಮೊದಲು ಸುಬ್ರಹ್ಮಣ್ಯ ಅವರ ಪತ್ನಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ನಂತರ ಅವರು ಚೇತರಿಸಿಕೊಂಡಿದ್ದರು. ಬಳಿಕ ಪತಿಗೆ ಸೋಂಕು ತಗುಲಿದ್ದು, ದೇವಗಿರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಸುಬ್ರಹ್ಮಣ್ಯ ಅವರಿಗೆ ಆಮ್ಲಜನಕ ಪೂರೈಕೆ ಅನಿವಾರ್ಯವಾದ್ದರಿಂದ ಆಸ್ಪತ್ರೆಯವರು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ತಿಳಿಸಿದ್ದಾರೆಂದು ಸಾಮಾಜಿಕ ಹೋರಾಟಗಾರ್ತಿ ಆಶಾ ಸೂರ್ಯನಾರಾಯಣ್ ಅವರು ಹೇಳಿದ್ದಾರೆ. 

ದೇವಗಿರಿ ಆಸ್ಪತ್ರೆಯಲ್ಲಿ ಆ್ಯಕ್ಸಿಜನ್ ವ್ಯವಸ್ಥೆಯಿಲ್ಲ. ಸುಬ್ರಹ್ಮಣ್ಯ ಅವರಿಗೆ ಆಕ್ಸಿಜನ್ ನೀಡದೇ ಹೋದರೆ ಪರಿಸ್ಥಿತಿ ತೀವ್ರವಾಗಿ ಹದಗೆಡುತ್ತದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಸೋಂಕಿತ ಟೆಕ್ಕಿಗೆ ಆಸ್ಪತ್ರೆಯವರು ಕೊರೋನಾಗೆ ಸಂಬಂಧಿಸಿದ ಎಲ್ಲಾ ಔಷಧಿಗಳನ್ನೂ ನೀಡಿದ್ದಾರೆ. ರೆಮ್ಡೆಸಿವಿರ್ ಚುಚ್ಚುಮದ್ದನ್ನೂ ನೀಡಿದ್ದಾರೆ. ಆದರೆ, ಅದಾವುದೂ ಕೆಲಸ ಮಾಡಿಲ್ಲ. ನಂತರ ಸಾಕಷ್ಟು ಆಸ್ಪತ್ರೆಗಳಿಗೆ ಕರೆ ಮಾಡಿ ಆಕ್ಸಿಜನ್ ವುಳ್ಳ ಹಾಸಿಗೆಗಾಗಿ ಪ್ರಯತ್ನಿಸಿದ್ದೆ. ನೋಡಲ್ ಅಧಿಕಾರಿ, ಸ್ಥಳೀಯ ಅಧಿಕಾರಿ ಸಚಿವ ಸುಧಾಕರ್ ಅವರ ಕಚೇರಿ, ಬಿಬಿಎಂಪಿ ಅಧಿಕಾರಿಗಳಿಗೆ ಕರೆ ಮಾಡಿದ್ದೆ, ಸಹಾಯ ಸಿಗಬಹುದು ಎಂದು ನಿರೀಕ್ಷಿಸಿದ್ದೆ ಎಂದರು. 

ಬರೋಬ್ಬರಿ 60 ದೂರವಾಣಿ ಕರೆಗಳನ್ನು ಮಾಡಿದ್ದೆ. ಕೊನೆಗೆ. ಪ್ರಶಾಂತ್ ಆಸ್ಪತ್ರೆಯ ವೈದ್ಯ ವಿಶ್ವನಾಥ್ ರೆಡ್ಡಿ ಎಂಬುವವರು ಹಾಸಿಗೆ ಇದ್ದು, ದಾಖಲು ಮಾಡಿಕೊಳ್ಳಲು ಒಪ್ಪಿಕೊಂಡಿದ್ದರು. ಆದರೆ, ಆಸ್ಪತ್ರೆ ಬೊಮ್ಮನಹಳ್ಳಿಯಲ್ಲಿತ್ತು ಸುಬ್ರಹ್ಮಣ್ಯ ಅವರು ಬನಶಂಕರಿಯ ದೇವಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದು, ಬೊಮ್ಮನಹಳ್ಳಿಗೆ ತಲುಪುವಷ್ಟರಲ್ಲಿ ಸುಬ್ರಹ್ಮಣ್ಯ ಅವರಿಗೆ ಉಸಿರಾಟ ಸಮಸ್ಯೆ ಎದುರಾಗಬಹುದು. ಆದರೆ, ಆಕ್ಸಿಜನ್ ನೀಡಿದ ಬಳಿಕ ಸುಧಾರಿಸುತ್ತದೆ ಎಂದು ವೈದ್ಯರು ಹೇಳಿದ್ದರು. 

ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಸುಬ್ರಮಣ್ಯ ಅವರ ಆಮ್ಲಜನಕ ಪ್ರಮಾಣ ಶೇ.65ಕ್ಕೆ ಇಳಿದಿತ್ತು. ಡಾ.ವಿಶ್ವನಾಥ್ ಹಾಗೂ ಅವರ ತಂಡ ಸುಬ್ರಹ್ಮಣ್ಯ ಅವರನ್ನು ಬದುಕುಳಿಯುವಂತೆ ಮಾಡಲು ಸಾಕಷ್ಟು ಪ್ರಯತ್ನ ಮಾಡಿದರು. ಅದರೆ, ಅದಾವುದೂ ಕೆಲಸ ಮಾಡಲಿಲ್ಲ. ಆಸ್ಪತ್ರೆಗೆ ಸೂಕ್ತ ಸಮಯಕ್ಕೆ ತಲುಪಿದ್ದರೆ ಅವರ ಪ್ರಾಣ ಉಳಿಯುತ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಕೊಡಗು: 100 ಎಕರೆ ಅರಣ್ಯ ವಲಯದಲ್ಲಿ ಬೌದ್ಧಧರ್ಮ ಜೊತೆಗೆ ಪರಿಸರ ಸಂರಕ್ಷಣೆ ಮಾಡುತ್ತಿರುವ 'ಕರ್ಮ ಕರ್ಗ್ಯು ಮಠ!

SCROLL FOR NEXT