ರಾಜ್ಯ

ಧಾರವಾಡ: ಶೇ.70 ರಷ್ಟು ಕೋವಿಡ್ ರೋಗಿಗಳು ಹೋಂ ಐಸೋಲೇಷನ್ ನಲ್ಲಿ!

Shilpa D

ಧಾರವಾಡ: ಹುಬ್ಬಳ್ಳಿ- ಧಾರವಾಡದ ಸರಿಸುಮಾರು ಶೇ.70 ರಷ್ಟು ಕೋವಿಡ್ ರೋಗಿಗಳು ಹೋಂ ಐಸೋಲೇಷನ್ ನಲ್ಲಿದ್ದಾರೆ.

ಪ್ರತಿದಿನ ಹೊಸದಾಗಿ 300 ಕೇಸ್ ಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಹೋಮ್ ಐಸೋಲೇಷನ್ ಗೆ ಒಳಗಾಗುತ್ತಿದ್ದಾರೆ. ಜಿಲ್ಲೆಯಲ್ಲಿ 2,100 ಕೇಸ್ ಗಳು ಸಕ್ರಿಯವಾಗಿವೆ.

ಕಿಮ್ಸ್ ಮತ್ತು ಇತರೆ ಆಸ್ಪತ್ರೆಗಳಲ್ಲಿ 100 ಕ್ಕೂ ಹೆಚ್ಚು ರೋಗಿಗಳು ಐಸಿಯು ಬೆಡ್ ನಲ್ಲಿದ್ದಾರೆ, ಹೆಚ್ಚುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಆಡಳಿತ ವ್ಯವಸ್ಥೆ ಮಾಡಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್ ರೋಗಿಗಳಿಗೆ ಹಾಸಿಗೆಗಳನ್ನು ಕಾಯ್ದಿರಿಸಲು ತಿಳಿಸಲಾಗಿದೆ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಸೌಲಭ್ಯ ಹೊಂದಿರುವ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ಅವರು ಹೇಳಿದರು.

ರೋಗಲಕ್ಷಣವಿಲ್ಲದ ರೋಗಿಗಳಿಗೆ ಚಿಕಿತ್ಸೆ ನೀಡಲು, ಹುಬ್ಬಳ್ಳಿ ಮತ್ತು ಧಾರವಾಡ ನಗರಗಳಲ್ಲಿ ತಲಾ 200 ಹಾಸಿಗೆ ಸಾಮರ್ಥ್ಯವಿರುವ ಎರಡು ಕೋವಿಡ್ ಕೇರ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 50 ಕ್ಕೂ ಹೆಚ್ಚು ರೋಗಿಗಳನ್ನು ದಾಖಲಿಸಲಾಗಿದೆ.

ಆಸ್ಪತ್ರೆಗಳಲ್ಲಿ, ಮೂರನೇ ಒಂದು ಭಾಗದಷ್ಟು ಹಾಸಿಗೆಗಳು ಈಗಾಗಲೇ ಭರ್ತಿಯಾಗಿವೆ ಇನ್ನು ಕೇವಲ ಸ್ವಲ್ಪ ಪ್ರಮಾಣದತಲ್ಲಿ ಹಾಸಿಗೆ ಲಭ್ಯವಿರುವುದರಿಂದ ಅನೇಕರು ಮನೆಯಲ್ಲಿಯೇ ಐಸೋಲೇಷನ್ ಗೆ ಒಳಗಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT