ರಾಜ್ಯ

ಬೆಂಗಳೂರಿನಲ್ಲಿ ಪ್ರತಿ ಚದರ ಕಿ.ಮೀಗೆ 300 ಕೋವಿಡ್-19 ಪ್ರಕರಣಗಳು

Nagaraja AB

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಚದರ ಕಿ.ಮೀಗೆ 300 ಕೋವಿಡ್-19 ಪ್ರಕರಣಗಳಿವೆ.ಶನಿವಾರ ಬೆಂಗಳೂರು ಒಂದರಲ್ಲಿಯೇ 17,342 ಹೊಸ ಕೋವಿಡ್-19 ಪ್ರಕರಣಗಳು, 149 ಸಾವು ಪ್ರಕರಣಗಳು ವರದಿಯಾಗಿವೆ.

ರಾಜ್ಯದಲ್ಲಿ ಶುಕ್ರವಾರದವರೆಗೂ ಸಕ್ರಿಯ ಪ್ರಕರಣಗಳ ಸಂಖ್ಯೆ 2 ಲಕ್ಷ ಗಡಿ ದಾಟಿದ್ದು, ಜೀವನ್ ರಕ್ಷಾ ಯೋಜನೆ ಪ್ರಕಾರ ಕೋವಿಡ್-19 ರೋಗಿಗಳ ಪ್ರಾದೇಶಿಕ ಸಾಂದ್ರತೆ ಪ್ರಕಾರ, ಬೆಂಗಳೂರಿನಲ್ಲಿ ಪ್ರತಿ ಚದರ  ಕಿ.ಮೀಗೆ 300 ಕೋವಿಡ್-19 ರೋಗಿಗಳಿದ್ದಾರೆ.

ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಜನಸಾಂದ್ರತೆ ಹೆಚ್ಚಿರುವ ನಗರಗಳಲ್ಲಿ ಪಾಸಿಟಿವಿಟಿ ದರ ಹೆಚ್ಚಿದೆ.ಪ್ರಸ್ತುತ ಪರಿಸ್ಥಿತಿಯಲ್ಲಿ ರಾಜ್ಯದ ಕೋವಿಡ್-19 ಪ್ರಕರಣಗಳಲ್ಲಿ ಬೆಂಗಳೂರು ಒಂದರಲ್ಲಿಯೇ ಸುಮಾರು ಶೇ.50 ರಷ್ಟು ಪ್ರಕರಣಗಳಿವೆ ಎಂದು ಜೀವನ್ ರಕ್ಷಾ ಯೋಜನಾಧಿಕಾರಿ  ಮೈಸೂರು  ಸಂಜೀವ್ ಹೇಳಿದ್ದಾರೆ.

ರಾಜ್ಯಸರ್ಕಾರದಿಂದ ನಡೆಸಿರುವ ಆಧಾರ್ ನೋಂದಣಿ ಪ್ರಕಾರ ಬೆಂಗಳೂರು 2.196 ಚದರ ಕಿಲೋ ಮೀಟರ್ ಭೂ ಪ್ರದೇಶವಿದ್ದು, 1,06,40,064 ಜನಸಂಖ್ಯೆಯನ್ನು ಹೊಂದಿದೆ.

ಬೆಂಗಳೂರಿನಲ್ಲಿ ಜನಸಾಂದ್ರತೆ ಹೆಚ್ಚಿರುವ ಕಾರಣಕ್ಕೆ ಪ್ರಕರಣಗಳು ಕೂಡಾ ಹೆಚ್ಚಾಗುತ್ತಿವೆ. ಪಾಸಿಟಿವಿಟಿ ದರ ಶೇ.20 ರಷ್ಟಿರುವುದಕ್ಕೆ ಜನಸಾಂದ್ರತೆಯೇ ಕಾರಣ ಎಂದು ರಾಜ್ಯ ಕೋವಿಡ್-19 ಟೆಸ್ಟಿಂಗ್ ನೋಡಲ್ ಅಧಿಕಾರಿ ಡಾ.ಸಿ.ಎನ್, ಮಂಜುನಾಥ್ ವಿವರಿಸಿದ್ದಾರೆ.

SCROLL FOR NEXT