ರಾಜ್ಯ

ನಾಗರಹೊಳೆ ಸಂರಕ್ಷಿತಾರಣ್ಯದಲ್ಲಿ ಹುಲಿ ಶವ ಪತ್ತೆ

Srinivasamurthy VN

ಬೆಂಗಳೂರು: ಕರ್ನಾಟಕದ ನಾಗರಹೊಳೆ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಮಂಗಳವಾರ ಗಂಡು ಹುಲಿಯೊಂದು ಸಾವನ್ನಪ್ಪಿದ್ದು, ಅದರ ಕಳೇಬರ ಪತ್ತೆಯಾಗಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಂಗಳವಾರ ಬೆಳಿಗ್ಗೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಬಾಲೆ ಸರೋವರದ ಬಳಿ ಕನನ್ಕುಂಟೆ ವಲಯದ ಡಿಬಿ ಕುಪ್ಪೆಯಲ್ಲಿ ಸುಮಾರು 4-5 ವರ್ಷ ವಯಸ್ಸಿನ ಗಂಡು ಹುಲಿ ಶವವಾಗಿ ಪತ್ತೆಯಾಗಿದೆ. ಹುಲಿಯ ಕೋರೆ ಹಲ್ಲುಗಳು ಮತ್ತು ಉಗುರುಗಳ ಇರುವುದರಿಂದ ಹುಲಿಯ ಸಾವಿನ ಹಿಂದೆ ಯಾರ ಕೈವಾಡವೂ ಇಲ್ಲ. ಬೇಟೆಗಾರರಿಂದ ಹುಲಿ ಸಾವನ್ನಪ್ಪಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹುಲಿಗಳ ನಡುವಿನ ಕಾದಾಟದಲ್ಲಿ ಹುಲಿ ಸಾವನ್ನಪ್ಪಿರಬಹುದು. ಹುಲಿಗಳ ಕಾದಾಟದ ನಡುವೆ ಹುಲಿಗೆ ಹೃದಯಾಘಾತವಾಗಿರುವ ಸಂಭವವಿದ್ದು ಹೀಗಾಗಿ ಹುಲಿ ಮೃತಪಟ್ಟಿರಬಹುದು. ಹುಲಿಯ ಕಳೇಬರವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ಈ ವಲಯದಲ್ಲಿ ಇದೇ ತಿಂಗಳು ಸಂಭವಿಸಿದ 2ನೇ ಹುಲಿ ಸಾವು ಪ್ರಕರಣ ಇದಾಗಿದ್ದು, ಈ ಹಿಂದೆ ವೀರನ ಹೊಸಹಳ್ಳಿ ವ್ಯಾಪ್ತಿಯಲ್ಲಿ 10 ವರ್ಷದ ಗಂಡು ಹುಲಿ ಮೃತಪಟ್ಟಿರುವುದು ವರದಿಯಾಗಿತ್ತು. ಈ ಹುಲಿ ಅರಣ್ಯ ಸಿಬ್ಬಂದಿಗೆ ಪತ್ತೆಯಾದಾಗ ಅದು ಸತ್ತು ಹತ್ತು ದಿನಗಳಾಗಿತ್ತು. 

SCROLL FOR NEXT