ರಾಜ್ಯ

ಮಂಗಳೂರು: ಐಎಸ್ಐಎಸ್ ನಂಟು ಶಂಕೆ; ಉಳ್ಳಾಲ ಮಾಜಿ ಶಾಸಕ ಬಿಎಂ ಇದಿನಬ್ಬ ಪುತ್ರನ ನಿವಾಸದ ಮೇಲೆ ಎನ್ಐಎ ದಾಳಿ

Srinivas Rao BV

ಉಳ್ಳಾಲ: ಉಳ್ಳಾಲದ ಮಾಜಿ ಶಾಸಕ ಬಿಎಂ ಇದಿನಬ್ಬ ಪುತ್ರನ ನಿವಾಸದ ಮೇಲೆ ಆ.04 ರಂದು ಬೆಳ್ಳಂಬೆಳಿಗ್ಗೆ ಎನ್ಐಎ ದಾಳಿ ನಡೆದಿರುವುದು ಖಾಸಗಿ ಸುದ್ದಿ ಜಾಲತಾಣವೊಂದು ವರದಿಯಿಂದ ಬಹಿರಂಗಗೊಂಡಿದೆ. 

ಇದಿನಬ್ಬ ಅವರ ಪುತ್ರ ಬಿಎಂ ಬಾಷಾ ಈ ಮನೆಯಲ್ಲಿ ವಾಸವಿದ್ದು, ಕುಟುಂಬದವರಿಗೆ ಸಿರಿಯಾ ಮೂಲದ ಭಯೋತ್ಪಾದಕ ಸಂಘಟನೆ ಐಎಸ್ಐಎಸ್ ನಂಟಿರುವ ಬಗ್ಗೆ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. 

ಮೂಲಗಳ ಪ್ರಕಾರ, ಕೇರಳದಲ್ಲಿದ್ದ ಬಾಷಾ ಅವರ ಪುತ್ರಿ ಹಲವು ವರ್ಷಗಳಿಂದ ನಾಪತ್ತೆಯಾಗಿದ್ದು, ಐಎಸ್ಐಎಸ್ ಸೇರಿರುವ ಶಂಕೆ ವ್ಯಕ್ತವಾಗತೊಡಗಿದೆ. ಬಾಷಾ ಅವರು ಇಲ್ಲಿನ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. ಅವರ ಇಬ್ಬರು ಪುತ್ರರು ವಿದೇಶದಲ್ಲಿದ್ದಾರೆ. ಅವರ ಕುಟುಂಬ ಸದಸ್ಯರು ಐಎಸ್ಐಎಸ್ ಗೆ ಸಂಬಂಧಿಸಿದ ಯೂಟ್ಯೂಬ್ ಚಾನಲ್ ಗಳಿಗೆ ಚಂದಾದಾರರಾಗಿದ್ದರು. ಅಷ್ಟೇ ಅಲ್ಲದೇ ಉಗ್ರ ಸಂಘಟನೆ ಬಗ್ಗೆ ಮೃದು ಧೋರಣೆ ಹೊಂದಿದ್ದರು ಎಂಬ ಆರೋಪ ಕೇಳಿಬಂದಿದೆ. ಎನ್ಐಎ ನಿರ್ದೇಶಕ ಹಾಗೂ ಐಜಿ ಪೊಲೀಸ್ ಶ್ರೇಣಿಯ ಅಧಿಕಾರಿ ದಾಳಿಯ ನೇತೃತ್ವ ವಹಿಸಿದ್ದಾರೆ.

SCROLL FOR NEXT