ರಾಜ್ಯ

ನೈಋತ್ಯ ರೈಲ್ವೆ ವಲಯದಲ್ಲಿ ದಾಖಲೆಯ ಸರಕು ಸಾಗಣೆ

Srinivas Rao BV

ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ನೈಋತ್ಯ ರೈಲ್ವೆ ವಲಯ ದಾಖಲೆಯ ಪ್ರಮಾಣದಲ್ಲಿ ಸರಕು ಸಾಗಣೆ ಮಾಡಿದೆ. 

13.97 ಮಿಲಿಯನ್ ಟನ್ ಗಳಷ್ಟು ಸರಕು ಸಾಗಣೆ ಮೂಲಕ ಕಳೆದ ವರ್ಷ ಇದೇ ಅವಧಿಗಿಂತಲೂ ಶೇ.36 ರಷ್ಟು ಏರಿಕೆ ಕಂಡಿದೆ ಎಂದು ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಹೇಳಿದ್ದಾರೆ. ಅಲ್ಲದೇ 2021 ರ ಮಾರ್ಚ್ ನಲ್ಲಿ 4.39 ಮಿಲಿಯನ್ ಟನ್ ಗಳಷ್ಟು ಲೋಡ್ ನ ಸರಕನ್ನು ಸಾಗಣೆ ಮಾಡಲಾಗಿದ್ದು ಈ ಝೋನ್ ರಚನೆಯಾದಾಗಿನಿಂದಲೂ ಒಂದೇ ತಿಂಗಳಲ್ಲಿ ಸಾಗಣೆ ಮಾಡಿರುವ ಅತ್ಯುತ್ತಮ ಲೋಡಿಂಗ್ ಆಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಭಾಷಣ ಮಾಡಿರುವ ಕಿಶೋರ್, ಸಾಂಕ್ರಾಮಿಕದ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡರೆ ಈ ಸಾಧನೆ ಶ್ಲಾಘನೀಯ ಎಂದು ಬಣ್ಣಿಸಿದ್ದಾರೆ. "ಪ್ರಯಾಣಿಕ ರೈಲುಗಳ ಸೇವೆ ನಿಧಾನವಾಗಿ ಸುಧಾರಣೆಯಾಗುತ್ತಿದ್ದು, ಕೋವಿಡ್-19 ಗೂ ಮುನ್ನ ಇದ್ದ ರೈಲುಗಳ ಪೈಕಿ ಶೇ.80 ರಷ್ಟು ರೈಲುಗಳು ಸೇವೆಯನ್ನು ಪುನಾರಂಭಗೊಳಿಸಿವೆ ಎಂದು ಮಾಹಿತಿ ನೀಡಿದ್ದಾರೆ. 

SCROLL FOR NEXT