ರಾಜ್ಯ

ಯೋಗೀಶ್ ಗೌಡ ಹತ್ಯೆ ಕೇಸು: ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜಾಮೀನು, ಇಂದೇ ಬಿಡುಗಡೆ ಭಾಗ್ಯ?

Sumana Upadhyaya

ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಯೋಗೀಶ್ ಗೌಡ ಹತ್ಯೆ ಕೇಸಿನಲ್ಲಿ ಜಾಮೀನು ಸಿಕ್ಕಿದ್ದು ವರಮಹಾಲಕ್ಷ್ಮಿ ದಿನ ಶುಕ್ರವಾರವೇ ಬೆಳಗಾವಿಯ ಹಿಂಡಲಗ ಜೈಲಿನಿಂದ ಬಿಡುಗಡೆ ಭಾಗ್ಯ ಅವರಿಗೆ ಸಿಗಲಿದೆಯೇ ಎಂಬ ಮಾತುಗಳು ಕೇಳಿಬರುತ್ತಿದೆ. 

ಇಂದೇ ಬಿಡುಗಡೆಯಾದರೂ ಅವರನ್ನು ಧಾರವಾಡಕ್ಕೆ ಹೋಗಲು ಅನುಮತಿ ನೀಡುವುದು ಸಂಶಯ ಎಂದು ಹೇಳಲಾಗುತ್ತಿದೆ. ಅಂತೂ ಬಿಡುಗಡೆಯ ಭಾಗ್ಯ ದೊರೆತಿರುವುದು ಅವರ ಮನೆಯವರಿಗೆ ಮತ್ತು ಅಭಿಮಾನಿಗಳಲ್ಲಿ ಸಂತಸವನ್ನುಂಟುಮಾಡಿದೆ.

ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಎಂದು ಜೈಲು ಸೇರಿದ್ದ ವಿನಯ್ ಕುಲಕರ್ಣಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿನ್ನೆ ಜಾಮೀನು ನೀಡಿದೆ. ಆದರೆ, ಜಾಮೀನು ಸಿಕ್ಕರೂ ವಿನಯ್ ಕುಲಕರ್ಣಿ ಬಿಡುಗಡೆ ಇಂದು ಬಿಡುಗಡೆಯಾಗುತ್ತಾರೆಯೇ ಇಲ್ಲವೇ ನಾಳೆಯೇ ಎಂಬುದು ಕುತೂಹಲ.

ಬೆಂಬಲಿಗರ ಸಂಭ್ರಮ: ಕಳೆದ ಒಂಭತ್ತೂವರೆ ತಿಂಗಳಿನಿಂದ ವಿನಯ್ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ. ವಿನಯ ಬಿಡುಗಡೆ ಇಂದು ಎಂದು ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಧಾರವಾಡದಲ್ಲಿ ಅವರ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದ್ದರು. ಧಾರವಾಡದ ಶಿವಗಿರಿ ಬಡಾವಣೆಯಲ್ಲಿನ ನಿವಾಸದ ಎದುರು ವಿಜಯೋತ್ಸವ ನಡೆಸಲಾಗಿತ್ತು. ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯ ಮತ್ತು ಬಿಜೆಪಿ ನಾಯಕ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ವಿನಯ ಕುಲಕರ್ಣಿ ನ್ಯಾಯಾಂಗ ಬಂಧನದಲ್ಲಿದ್ದರು. 

SCROLL FOR NEXT