ರಾಜ್ಯ

ಈ ವರ್ಷ ಹೆಚ್ಚುವರಿಯಾಗಿ 2 ಲಕ್ಷ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಉನ್ನತ ಶಿಕ್ಷಣ ಇಲಾಖೆ ಸಿದ್ಧತೆ

Lingaraj Badiger

ಬೆಂಗಳೂರು: ಕಾಲೇಜುಗಳು ಅಧಿಕೃತವಾಗಿ ಪುನರಾರಾಂಭವಾಗಲು ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳುತ್ತಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳು ಈ ವರ್ಷ ಅಸಾಮಾನ್ಯ ಪ್ರವೇಶಾತಿಗೆ ಸಾಕ್ಷಿಯಾಗುತ್ತಿವೆ ಮತ್ತು ಇಲಾಖೆ ಸಹ ಅಗತ್ಯ ವ್ಯವಸ್ಥೆಗಳೊಂದಿಗೆ ಸಜ್ಜಾಗುತ್ತಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕನಿಷ್ಠ ಎರಡು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಉತ್ತೀರ್ಣರಾದವರಲ್ಲಿ ಹೆಚ್ಚಿನವರು ವಾಣಿಜ್ಯ ವಿದ್ಯಾರ್ಥಿಗಳು, ನಂತರ ವಿಜ್ಞಾನ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳಾಗಿದ್ದಾರೆ. 

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ ಉನ್ನತ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಪಿ, ಸರ್ಕಾರಿ ಕಾಲೇಜುಗಳು ಒಂದು ವರ್ಷದಲ್ಲಿ ಒಂದು ಲಕ್ಷ ಸೀಟುಗಳನ್ನು ಹೆಚ್ಚುವರಿಯಾಗಿ ಹೊಂದಿರುತ್ತವೆ, ಒಟ್ಟು 2.3 ಲಕ್ಷ ಸಾಮರ್ಥ್ಯದಲ್ಲಿ 1 ಲಕ್ಷ ಸೀಟುಗಳು ಖಾಲಿಯಾಗುತ್ತವೆ. ಇದರ ಜೊತೆಗೆ, ಶಿಫ್ಟ್ ಗಳಲ್ಲಿ ತರಗತಿಗಳನ್ನು ನಡೆಸಿದರೆ 1.7 ಲಕ್ಷ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಅವಕಾಶ ಕಲ್ಪಿಸಬಹುದು ಎಂದು ಅವರು ಹೇಳಿದರು.

ಖಾಸಗಿ ಕಾಲೇಜುಗಳು ಸಹ ತಾವು ಸಂಯೋಜಿತವಾಗಿರುವ ವಿಶ್ವವಿದ್ಯಾಲಯಗಳೊಂದಿಗೆ ಹೆಚ್ಚುವರಿ ವಿಭಾಗಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಅವರು ತಿಳಿಸಿದರು.

ಆದಾಗ್ಯೂ, ಹೆಚ್ಚುವರಿ ವಿಭಾಗಗಳನ್ನು ಪ್ರಾರಂಭಿಸಲು ಅರ್ಜಿಗಳು ಈ ತಿಂಗಳ ಅಂತ್ಯದವರೆಗೆ ಸಲ್ಲಿಸಬಹುದು. ಸ್ಥಳೀಯ ತಪಾಸಣೆ ನಡೆದ ನಂತರ, ಸೆಪ್ಟೆಂಬರ್ ವೇಳೆಗೆ ಮಾತ್ರ ಕಾಲೇಜಿನಲ್ಲಿ ಲಭ್ಯವಿರುವ ಹೆಚ್ಚುವರಿ ಸೀಟುಗಳ ಬಗ್ಗೆ ತಿಳಿಯುತ್ತದೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT