ರಾಜ್ಯ

ವಿತ್ತ ಜಗತ್ತಿನ ವರ್ತಮಾನ ಪುಸ್ತಕ ಬಿಡುಗಡೆ

Srinivas Rao BV

ಬೆಂಗಳೂರು: ಆರ್ಥಿಕ ಕ್ಷೇತ್ರದ ಲೇಖಕ, ಕನ್ನಡ ಪ್ರಭ.ಕಾಂ ನ ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ಅವರ ವಿತ್ತ ಜಗತ್ತಿನ ವರ್ತಮಾನ ಪುಸ್ತಕ ಆ.23 ರಂದು ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯದಲ್ಲಿ ಬಿಡುಗಡೆ ಮಾಡಲಾಯಿತು.

ಐಸಿಎಐ (ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ) ಬೆಂಗಳೂರು ಶಾಖೆಯ ಅಧ್ಯಕ್ಷರಾದ ಬಿ.ಟಿ ಶೆಟ್ಟಿಯವರು ಮತ್ತು ಮಾಜಿ ಅಧ್ಯಕ್ಷರಾದ ಶಿವರಾಂ ಭಟ್ ಅವರು ಪುಸ್ತಕ ಲೋಕಾರ್ಪಣೆ ಮಾಡಿದರು. ಅಯೋಧ್ಯಾ ಪ್ರಕಾಶನ ಸಂಸ್ಥೆಯ ರೋಹಿತ್ ಚಕ್ರತೀರ್ಥ ಮತ್ತು ಲೇಖಕ ರಂಗಸ್ವಾಮಿ ಮೂಕನಹಳ್ಳಿ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು. 

ವಿತ್ತ ಜಗತ್ತಿನ ವರ್ತಮಾನ ಪತ್ರಿಕೆ ಅಜೇಯದಲ್ಲಿ ಪ್ರತಿವಾರ 'ವಿಚಕ್ಷು' ಹೆಸರಿನಲ್ಲಿ ಪ್ರಕಟವಾಗುತ್ತಿರುವ ಅಂಕಣ ಬರಹಗಳ ಸಂಕಲನವಾಗಿದೆ. 

ಜಗತ್ತಿನ ಹಲವಾರು ದೇಶಗಳಲ್ಲಿ ಆಗುತ್ತಿರುವ ಬದಲಾವಣೆ ಜೊತೆಗೆ ಮುಂದಿನ ಹತ್ತಿಪ್ಪತ್ತು ವರ್ಷಗಳಲ್ಲಿ ಆಗಬಹುದಾದ ಸಂಭಾವ್ಯ ಬದಲಾವಣೆಗಳನ್ನ ಕುರಿತು ಕನ್ನಡದಲ್ಲಿ ಸರಳವಾಗಿ ಕೃತಿಯನ್ನ ತಂದಿದ್ದಾರೆ ಎಂದು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಬಿ.ಟಿ ಶೆಟ್ಟಿ ಹೇಳಿದ್ದಾರೆ. 

ವಿದ್ಯಾರ್ಥಿ ಜೀವನದ ನಂತರ 'ಅರ್ಥ'ಕ್ಕಾಗಿ ದುಡಿಯುವ ನಾವೆಲ್ಲಾ 'ಅರ್ಥ'ದ ಬಗ್ಗೆ ಹೆಚ್ಚು ತಿಳುವಳಿಕೆ ಹೊಂದಬೇಕಾಗಿದೆ. ಜೀವನದ ಬಹು ಸಮಯವನ್ನ ಹಣ ಗಳಿಕೆಗೆ ಮೀಸಲಿಡುವ ನಾವು , ಹಣಕಾಸಿನ ನಿಜವಾದ ತಿಳುವಳಿಕೆಯನ್ನ ಕಂಡುಕೊಂಡರೆ ಕಡಿಮೆ ಸಮಯದಲ್ಲಿ ಗಳಿಸುವ ಸಾಧ್ಯತೆ ಇರುತ್ತದೆ ಎಂದು ಶಿವರಾಂ ಭಟ್ ಹೇಳಿದ್ದಾರೆ.

ಅಯೋಧ್ಯ ಪ್ರಕಾಶನ ಸದಾ ಹೊಸ ಪ್ರಯತ್ನಗಳಲ್ಲಿ, ಹೊಸ ವಿಷಯಗಳ ಪ್ರಕಟಣೆಯಲ್ಲಿ ತೊಡಗಿಕೊಂಡಿದೆ, ಆ ನಿಟ್ಟಿನಲ್ಲಿ ರಂಗಸ್ವಾಮಿ ಮೂಕನಹಳ್ಳಿ ಅವರ ವಿತ್ತ ಜಗತ್ತಿನ ವರ್ತಮಾನ ಒಂದು ಹೊಸ ಪ್ರಯತ್ನ. ಜಾಗತಿಕ ವಿತ್ತ ಜಗತ್ತಿನ ಬದಲಾವಣೆಗಳನ್ನ ಸರಳವಾಗಿ ಮತ್ತು ಚಿಕ್ಕದಾಗಿ ಕಟ್ಟಿಕೊಡುವ ಪ್ರಯತ್ನವನ್ನ ಅವರು ಮಾಡಿದ್ದಾರೆ ಎಂದರು. 

SCROLL FOR NEXT