ರಾಜ್ಯ

ಬೆಂಗಳೂರು: ಐವರು ಬವಾರಿಯಾ ಗ್ಯಾಂಗ್ ಸದಸ್ಯರ ಬಂಧನ

Nagaraja AB

ಬೆಂಗಳೂರು: ಕುಖ್ಯಾತ ಬವಾರಿಯಾ ಗ್ಯಾಂಗ್ ನ ಐವರು ಸದಸ್ಯರನ್ನು ಬಂಧಿಸಿರುವ ವಿಜಯನಗರ ಉಪ ವಿಭಾಗೀಯ ಪೊಲೀಸರು 13 ಲಕ್ಷ ರೂ.ಮೌಲ್ಯದ ಚಿನ್ನಾಭರಣವನ್ನು ವಶ ಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳು ಅಪರಾಧ ಮಾಡಲು ವಿಮಾನದಿಂದ ನಗರಕ್ಕೆ ಬರುತ್ತಿದ್ದರು ಎನ್ನಲಾಗಿದೆ. ರಾಹುಲ್ , ಗೌರವ್, ನಿತಿನ್, ರಿಯಾಜ್ ಅಹ್ಮದ್ ಮೀರ್ ಮತ್ತು ಕಮಲ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಉತ್ತರ ಪ್ರದೇಶ, ದೆಹಲಿ ಮತ್ತು ಜಮ್ಮು-ಕಾಶ್ಮೀರಕ್ಕೆ ಸೇರಿದವರಾಗಿದ್ದಾರೆ. 

ಜುಲೈ 19 ರಂದು ವಿಜಯನಗರದಲ್ಲಿ ವರದಿಯಾಗಿದ್ದ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಮಹಿಳೆಯೊಬ್ಬರಿಂದ 32 ಗ್ರಾಂ ತೂಕದ ಸರ ಕದ್ದು ದುಷ್ಕರ್ಮಿಗಳು ಪರಾರಿಯಾಗಿದ್ದರು.

ಶಂಕಿತ ಆರೋಪಿಗಳ ಬಂಧನಕ್ಕಾಗಿ ತಂಡವೊಂದನ್ನು ರಚಿಸಲಾಗಿತ್ತು. ಕೆಲ ಮೂಲಗಳಿಂದ ದೊರೆತ ಮಾಹಿತಿ ಆಧಾರದ ಮೇಲೆ ಐವರನ್ನು ಬಂಧಿಸಲಾಗಿದೆ. ಇದೊಂದು ಖತರ್ನಾಕ್ ಗ್ಯಾಂಗ್ ಆಗಿದೆ. ಕೆಲ ಜವಾಬ್ದಾರಿಯೊಂದಿಗೆ ಎಲ್ಲಾ ಸದಸ್ಯರು ಕೆಲಸ ಮಾಡುತ್ತಾರೆ.  ಒಬ್ಬ ವ್ಯಕ್ತಿ ರಸ್ತೆಯಲ್ಲಿ ಬೈಕ್ ಸವಾರಿ ಮಾಡುತ್ತಿದ್ದರೆ ಇಬ್ಬರು  ಹಿಂದೆ ಬಂದು ಸರಗಳ್ಳತನ ಮಾಡುತ್ತಾರೆ. ಈ ಮಧ್ಯೆ ಮತ್ತೋರ್ವ ರೂಮ್ ನಲ್ಲಿದ್ದರೆ, ಇನ್ನೋರ್ವನ ಕೆಲಸ ಅಡುಗೆಗೆ ಮಾತ್ರ ಸಿಮೀತವಾಗಿರುತ್ತದೆ ಎಂದು ಪೊಲೀಸರು ಹೇಳಿದರು.

ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ಸರಗಳ್ಳತನದಂತಹ ಅಪರಾಧ ಚಟುವಟಿಕೆಗಳಿಗೆ ಬವಾರಿಯಾ ಗ್ಯಾಂಗ್ ಕುಖ್ಯಾತಿ ಪಡೆದಿದೆ.

SCROLL FOR NEXT