ರಾಜ್ಯ

ತಾಲಿಬಾನ್ ಹಿಡಿತದಿಂದ ಮಂಗಳೂರಿನ 7 ಮಂದಿ ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್

Harshavardhan M

ಮಂಗಳೂರು: ಯುದ್ಧಗ್ರಸ್ಥ ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿದ್ದ ನಗರದ 7 ಮಂದಿ ಸುರಕ್ಷಿತವಾಗಿ ಮರಳಿದ್ದಾರೆ. ಮಂಗಳೂರಿನ 7 ಮಂದಿ ಅಫ್ಘಾನಿಸ್ತಾನದಲ್ಲಿ ಕಾರ್ಯಾಚರಿಸುತ್ತಿದ್ದ ನ್ಯಾಟೊ ಪಡೆಗಳ ಜೊತೆ ಕೆಲಸ ನಿರ್ವಹಿಸುತ್ತಿದ್ದರು. 

ತಾಲಿಬಾನ್ ಹಿಡಿತದಿಂದ ಪಾರಾಗಿ ಬಂದ 7 ಮಂದಿ ನಗರದ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಇನ್ನೂ ಯಾರದಾದರೂ ಕುಟುಂಬಸ್ಥರು ಸಿಲುಕಿಕೊಂಡಿದ್ದರೆ ತಮ್ಮನ್ನು ಸಂಪರ್ಕಿಸಬಹುದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ. 

ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿರುವ ಕರ್ನಾಟಕದವರ ರಕ್ಷಣೆಗಾಗಿ ಸರ್ಕಾರ ಎಡಿಜಿಪಿ ಉಮೇಶ್ ಕುಮಾರ್ ಅವರನ್ನು ನೇಮಕ ಮಾಡಿದೆ. ಕುಟುಂಬಸ್ಥರು ಅವರ ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ. 

ಪ್ರಸಾದ್ ಅಂಚನ್, ದಿನೇಶ್ ರೈ, ಶ್ರವಣ್ ಅಂಚನ್, ಜಗದೀಶ್ ಪೂಜಾರಿ, ಡೆಸ್ಮಂಡ್ ಡೇವಿಡ್ ಡಿಸೋಜ, ಡೆನ್ಸಿಲ್ ಮೋತೇರೊ, ಮೆಲ್ವಿನ್ ಮೊಂತೇರೊ ಒಟ್ಟು ಏಳು ಮಂದಿ ಭಾರತೀಯ ವಾಯುಪಡೆ ವಿಮಾನದಲ್ಲಿ ಮರಳಿದ್ದಾರೆ.

SCROLL FOR NEXT