ಸಾಂದರ್ಭಿಕ ಚಿತ್ರ 
ರಾಜ್ಯ

ಅಮೆರಿಕದ ಎರಡು ಕಾಲೇಜ್ ನಲ್ಲಿ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಮೊದಲ ಮೂರು ವರ್ಷ ಉಚಿತ

ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀಯ ಮಾನ್ಯತೆ ನೀಡಲು ಉನ್ನತ ಶಿಕ್ಷಣ ಇಲಾಖೆಯು ಅಮೆರಿಕ ಮೂಲದ ಎರಡು ಕಾಲೇಜುಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇದು ಜಾಗತಿಕ ಮಟ್ಟದ ಉನ್ನತ ಶಿಕ್ಷಣದ...

ಬೆಂಗಳೂರು: ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀಯ ಮಾನ್ಯತೆ ನೀಡಲು ಉನ್ನತ ಶಿಕ್ಷಣ ಇಲಾಖೆಯು ಅಮೆರಿಕ ಮೂಲದ ಎರಡು ಕಾಲೇಜುಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇದು ಜಾಗತಿಕ ಮಟ್ಟದ ಉನ್ನತ ಶಿಕ್ಷಣದ ಅಂತರಾಷ್ಟ್ರೀಕರಣದ ಭಾಗವಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಪಿ ಅವರು ಹೇಳಿದ್ದಾರೆ.

ಈ ಸಂಬಂಧ ಕಳೆದ 20 ದಿನಗಳ ಹಿಂದೆ ಮಾರ್ಗಸೂಚಿಗಳು ಬಂದಿದ್ದರೂ ರಾಜ್ಯ ಸರ್ಕಾರವೂ ಈ ಕುರಿತು ಒಂದು ವರ್ಷದಿಂದ ಕೆಲಸ ಮಾಡುತ್ತಿದೆ ಎಂದು ಅವರು ಶುಕ್ರವಾರ ಹೇಳಿದ್ದಾರೆ.

ಕರ್ನಾಟಕದಲ್ಲಿ ಎನ್‌ಇಪಿ ಅನುಷ್ಠಾನದ ಕುರಿತು ವರದಿಗಾರರೊಂದಿಗೆ ಮಾತನಾಡಿದ ಪ್ರದೀಪ ಅವರು, ಒಂದು ವರ್ಷದ ಮಾತುಕತೆಯ ನಂತರ, ಪ್ರವಾಸ ಮತ್ತು ಪ್ರವಾಸೋದ್ಯಮ ಡಿಪ್ಲೊಮಾಗಾಗಿ ಅಮೆರಿಕದ ಮಾಂಟ್‌ಗೊಮೆರಿ ಕೌಂಟಿ ಸಮುದಾಯ ಕಾಲೇಜು(MCCC) ಮತ್ತು ಸೈಬರ್ ಸೆಕ್ಯುರಿಟಿ ಕೋರ್ಸ್‌ಗಾಗಿ ಹ್ಯಾರಿಸ್‌ಬರ್ಗ್ ಏರಿಯಾ ಸಮುದಾಯ ಕಾಲೇಜ್(HACC) ನೊಂದಿಗೆ ಒಂದು ಅವಳಿ ಕಾರ್ಯಕ್ರಮಕ್ಕೆ(ಡ್ಯುಯಲ್ ಡಿಗ್ರಿ ಪ್ರೋಗ್ರಾಂ ಎಂದೂ ಕರೆಯುತ್ತಾರೆ) ಪಠ್ಯಕ್ರಮ, ಶುಲ್ಕ ರಚನೆಯನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ವರ್ಷಗಳ ಕೊನೆಯಲ್ಲಿ, ಕರ್ನಾಟಕವು ಡಿಪ್ಲೊಮಾ ಪದವಿಯನ್ನು ನೀಡುತ್ತದೆ ಮತ್ತು ಅಮೆರಿಕ ಮೂಲದ ಸಂಸ್ಥೆಗಳು ಸಹಾಯಕ ಪದವಿಯನ್ನು ನೀಡುತ್ತವೆ. 

ಮೊದಲ ವರ್ಷ, ವಿದ್ಯಾರ್ಥಿಗಳು ಕರ್ನಾಟಕದಲ್ಲಿರುತ್ತಾರೆ ಮತ್ತು ಅವರಿಗೆ ಇಲ್ಲಿ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರು ಬೋಧಿಸುತ್ತಾರೆ. ಎರಡನೇ ವರ್ಷ ವಿದೇಶದಲ್ಲಿರುವ ವಿಶ್ವವಿದ್ಯಾಲಯಗಳು ಈ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸುತ್ತವೆ ಮತ್ತು ಮೂರನೇ ವರ್ಷದಲ್ಲಿ ವಿದ್ಯಾರ್ಥಿಗಳು ಅಲ್ಲಿನ ಕಾಲೇಜುಗಳಿಗೆ ಹೋಗುತ್ತಾರೆ. ಇದಕ್ಕಾಗಿ ಎಐಸಿಟಿಇ ಅನುಮೋದನೆಯನ್ನು ಈಗಾಗಲೇ ಪಡೆಯಲಾಗಿದೆ ಎಂದು ಪ್ರದೀಪ್ ಹೇಳಿದರು.

ಪ್ರತಿ ಕೋರ್ಸ್‌ಗೆ ಕೇವಲ 30 ವಿದ್ಯಾರ್ಥಿಗಳ ತಂಡ ವಿದೇಶಕ್ಕೆ ಹೋಗಲು ಸಾಧ್ಯವಾಗುತ್ತದೆ. ಪ್ರತಿ ವರ್ಷ 70,000 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ, ಆದ್ದರಿಂದ ಈ ವಿದ್ಯಾರ್ಥಿಗಳ ಆಯ್ಕೆಗಾಗಿ ಪರೀಕ್ಷೆ ನಡೆಯಲಿದೆ. 

ಮೂರನೇ ವರ್ಷದಲ್ಲಿ ಅವರು ಕ್ಯಾಂಪಸ್‌ನಲ್ಲಿ ಕೆಲಸ ಕೈಗೊಂಡರೆ, ವಿದ್ಯಾರ್ಥಿಗಳು 10 ಲಕ್ಷದವರೆಗೆ ಹಣ ಗಳಿಸಬಹುದು ಎಂದು ಅವರು ಹೇಳಿದರು.

ಮೂರು ವರ್ಷಗಳ ನಂತರ, ಐಚ್ಛಿಕ ಪ್ರಾಯೋಗಿಕ ತರಬೇತಿಯ(OPT) ಆಯ್ಕೆಯೂ ಇದೆ - ವಿದ್ಯಾರ್ಥಿಗಳು ಅಮೆರಿಕದಲ್ಲಿಯೇ ಕೆಲಸ ಮಾಡಬಹುದು - ಅದಕ್ಕಾಗಿ ಅವರು ಕೆಲಸದ ವೀಸಾಗಳನ್ನು ಪಡೆಯುತ್ತಾರೆ ಮತ್ತು ನಾಲ್ಕನೇ ವರ್ಷದಲ್ಲಿ, ವಿದ್ಯಾರ್ಥಿಗಳು 30 ಲಕ್ಷ ರೂ. ಹಣ ಗಳಿಸಬಹುದು. ಇದರ ನಂತರ, ಎರಡು ಕಾಲೇಜುಗಳು ಅನೇಕ ವಿಶ್ವವಿದ್ಯಾಲಯಗಳೊಂದಿಗೆ ಸಹಯೋಗ ಹೊಂದಿದ್ದು, ಇನ್ನೂ ಎರಡು ವರ್ಷಗಳ ಕಾಲ ಅಧ್ಯಯನ ಮಾಡಿದರೆ, ಅವರು ಯುಎಸ್ಎಯಲ್ಲಿ ಪದವಿ ಗಳಿಸುತ್ತಾರೆ.

ಮೂರು ವರ್ಷದ ಕಾರ್ಯಕ್ರಮದ ಒಟ್ಟು ವೆಚ್ಚ 20 ಲಕ್ಷ ರೂ. ಆಗಿದ್ದು, ಯುಎಸ್‌ಎ ವಿದ್ಯಾರ್ಥಿಗಳಿಗೆ ಶುಲ್ಕದ ವೆಚ್ಚವು ನಾಲ್ಕನೇ ಒಂದು ಭಾಗವಾಗಿದೆ ಎಂದು ಅವರು ಹೇಳಿದರು.

ಮೊದಲ ಮೂರರಿಂದ ನಾಲ್ಕು ವರ್ಷಗಳ ಎಲ್ಲಾ ವೆಚ್ಚಗಳನ್ನು ಸರ್ಕಾರವೇ ಭರಿಸುವ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಇದಕ್ಕಾಗಿ ಉನ್ನತ ಶಿಕ್ಷಣ ಸಚಿವರು ಮುಖ್ಯಮಂತ್ರಿಗಳಿಂದ ಅನುಮೋದನೆ ಪಡೆದಿದ್ದಾರೆ. ಆದ್ದರಿಂದ ಇದು ಉಚಿತವಾಗಿರುತ್ತದೆ ಎಂದು ಅವರು ಹೇಳಿದರು.

ಈ ರೀತಿಯಾಗಿ, ಕರ್ನಾಟಕದಲ್ಲಿ ಡಿಪ್ಲೋಮಾ ಮಟ್ಟದಲ್ಲಿ ವಿದ್ಯಾರ್ಥಿಗಳು ಜಾಗತಿಕ ಮಾನ್ಯತೆ ಪಡೆಯುತ್ತಾರೆ ಮತ್ತು ಅವರು ಜಾಗತಿಕ ಮಟ್ಟದಲ್ಲಿ ಬೆಳೆಯಬಹುದು ಎಂದು ಅವರು ವಿವರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT