ರಾಜ್ಯ

ಎಸ್‌ಡಿಎಮ್ ಆಸ್ಪತ್ರೆಯ 500 ಮೀಟರ್ ವ್ಯಾಪ್ತಿ ಸೀಲ್ ಡೌನ್: ಧಾರವಾಡ ಜಿಲ್ಲಾಧಿಕಾರಿ ಸ್ಪಷ್ಟೀಕರಣ

Shilpa D

ಧಾರವಾಡ: ಧಾರವಾಡದ ಎಸ್.ಡಿ.ಎಮ್. ಮಹಾವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಮತ್ತು ವೈದ್ಯರಲ್ಲಿ ಕೋವಿಡ್ ಪ್ರಕರಣಗಳು ಪತ್ತೆ ಆಗಿದ್ದರಿಂದ ಕಳೆದ ನ.25 ರಿಂದ ಎಸ್.ಡಿ.ಎಮ್. ಮಹಾವಿದ್ಯಾಲಯ ಬಂದ್ ಮಾಡಲಾಗಿದೆ.

ಸೋಂಕಿತ ವಿದ್ಯಾರ್ಥಿಗಳು ಇರುವ ಎರಡು ವಸತಿ ನಿಲಯಗಳನ್ನು ಮಾತ್ರ ನಿಯಮಾನುಸಾರ ಸೀಲ್ ಡೌನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ತಿಳಿಸಿದ್ದಾರೆ. ಈ ಕುರಿತು ಪ್ರಕಣೆ ನೀಡಿರುವ ಜಿಲ್ಲಾಧಿಕಾರಿಗಳು, ಮಕ್ಕಳ, ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಎಸ್.ಡಿ.ಎಮ್.ಆಸ್ಪತ್ರೆಯ ಸಮೀಪದಲ್ಲಿರುವ ಅಂಗನವಾಡಿ, ಶಾಲೆ,ಕಾಲೇಜುಗಳಿಗೆ ಡಿ.1ರವರೆಗೆ ತರಗತಿಗಳನ್ನು ನಡೆಸದಂತೆ, ತೆರೆಯದಂತೆ ಸೂಚಿಸಲಾಗಿದೆ.

ಆದರೆ ಜಿಲ್ಲಾಡಳಿತದಿಂದ ಯಾವುದೇ ಇತರ ಪ್ರದೇಶ ಅಥವಾ 500 ಮೀಟರ್ ವ್ಯಾಪ್ತಿಯಲ್ಲಿ ಸೀಲ್ ಡೌನ್ ಮಾಡಿದ ಕುರಿತು ಆದೇಶ ಹೊರಡಿಸಿರುವದಿಲ್ಲ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಹಾಗೂ ಕೋವಿಡ್ ಸೋಂಗು ಹರಡದಂತೆ ತಡೆಯಲು ಎಸ್.ಡಿ.ಎಮ್.ಆಸ್ಪತ್ರೆಯ ಹೊರ ರೋಗಿಗಳ ಚಿಕಿತ್ಸಾ ವಿಭಾಗವನ್ನು ಮತ್ತು ಹೊಸ ಪೆಸೆಂಟ್ ದಾಖಲಾತಿಯನ್ನು ಕೆಲವು ದಿನಗಳ ಕಾಲ ನಿಲ್ಲಿಸಲಾಗಿದೆ. ಉಳಿದಂತೆ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆ, ಉದ್ಯಮಗಳನ್ನು ತೆರೆಯಲು ಅನುಮತಿಸಲಾಗಿದೆ ಎಂದು ತಿಳಿಸಿದ್ದಾರೆ.

ಧಾರವಾಡದ ಎಸ್​ಡಿಎಂ ಆಸ್ಪತ್ರೆಯ ಸುತ್ತಲಿನ ಶಾಲಾ ಕಾಲೇಜುಗಳು ಮತ್ತೆ ನಾಳೆಯಿಂದ ಆರಂಭ ಮಾಡುತ್ತೇವೆ. ಜಿಲ್ಲೆಯಲ್ಲಿ ವಾಣಿಜ್ಯ ವ್ಯವಹಾರಗಳಿಗೆ ನಿರ್ಬಂದ ಹೇರುವುದಿಲ್ಲ. ಮತ್ತು ನಿರ್ಬಂಧ ಹೇರಲು ಅವಕಾಶವೂ ಇಲ್ಲ’’ ಎಂದು ಅವರು ಹೇಳಿದ್ದಾರೆ. ಧಾರವಾಡದಲ್ಲಿ ಕೊರೊನಾ ಟೆಸ್ಟ್ ಮಾಡುತ್ತಿರುವುದರ ಕುರಿತು ಮಾತನಾಡಿರುವ ಅವರು, ‘‘ಧಾರವಾಡ ಜಿಲ್ಲೆಯಲ್ಲಿ ಪ್ರತಿನಿತ್ಯ ೫ ಸಾವಿರ ಜನರಿಗೆ ಟೆಸ್ಟ್ ಮಾಡುತ್ತಿದ್ದೇವೆ’’ ಎಂದು ಹೇಳಿದ್ದಾರೆ.

SCROLL FOR NEXT