ರಾಜ್ಯ

ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ವಾವಲಂಬನೆಗೆ ಸಮಿತಿ ರಚನೆ

Srinivasamurthy VN

ಬೆಂಗಳೂರು: ರಾಜ್ಯದ ಎಲ್ಲಾ ರಸ್ತೆ ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಡೀಕರಣಗಳ ಅಧ್ಯಯನ ನಡೆಸಿ ವರದಿ ನೀಡಲು ಸರ್ಕಾರ ಸಮಿತಿ‌ ರಚಿಸಿದೆ.

ನಿವೃತ್ತ ಅಧಿಕಾರಿ ಎಂ.ಆರ್.ಶ್ರೀನಿವಾಸಮೂರ್ತಿ ಅಧ್ಯಕ್ಷತೆಯಲ್ಲಿ ತಜ್ಞರನ್ನೊಳಗೊಂಡ ಸಮಿತಿ‌ ರಚಿಸಿದ್ದು, ರಾಜ್ಯದ ಎಲ್ಲಾ ರಸ್ತೆ ಸಾರಿಗೆ ಸಂಸ್ಥೆಗಳ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣಗಳ ಸಂಪೂರ್ಣ ಅಧ್ಯಯನ ನಡೆಸಿ ಮೂರು ತಿಂಗಳ ಒಳಗಾಗಿ ವರದಿಯನ್ನು ಸಲ್ಲಿಸುವಂತೆ ಆದೇಶಿಸಿದೆ.

ನಾಲ್ಕು ನಿಗಮಗಳ ಅಧ್ಯಯನ‌ ಸೇರಿದಂತೆ ಸಾರಿಗೆ ಕ್ಷೇತ್ರದ ಕಾರ್ಯಕ್ರಮ ಹಚ್ಚಿಸುವ ನಿಟ್ಟಿನಲ್ಲಿ ಸಮಿತಿಹೆ ಅವಶ್ಯವಿರುವ ಅಧಿಕಾರಿಗಳ ಸಹಕಾರ ನೀಡುವಂತೆ ಸರ್ಕಾರಬನಾಲ್ಕು ಸಾರಿಗೆ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಸೂಚಿಸಿದೆ. ಸಮಿತಿಯು ಕಾರ್ಯ ನಿರ್ವಹಿಸಲು ಅಗತ್ಯವಿರುವ ಸಳಾವಕಾಶ, ಕಚೇರಿ ಪೀಠೋಪಕರಣಗಳು, ಸಿಬ್ಬಂದಿ ಸೇರಿದಂತೆ ಇತರ ಸೌಕರ್ಯಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಒದಗಿಸಲಿದೆ. ಸಮಿತಿ ಅಧ್ಯಕ್ಷರಿಗೆ ನೀಡುವ ಸಂಭಾವನೆಯ ಬಗ್ಗೆ ಪ್ರತ್ಯೇಕ ಆದೇಶ ಹೊರಡಿಸಲಾಗುತ್ತಿದ್ದು, ಸಮಿತಿಯ ಅಧ್ಯಯನ ನಡೆಸುವ ಸಲುವಾಗಿ ರಾಜ್ಯ ಸಾರಿಗೆ ಸಂಸ್ಥೆಗಳು ಹಾಗೂ ಕಚೇರಿ ಕೇಂದ್ರಗಳಿಗೆ ಭೇಟಿ ನೀಡುವ ಸಲುವಾಗಿ ಕೈಗೊಳ್ಳುವ ಪ್ರಯಾಣಕ್ಕೆ ಭತ್ಯೆಯನ್ನು ಕೆಸಿಎಸ್‌ಆರ್ ನ ಪ್ರಕಾರ ಪಡೆಯಲು ಅರ್ಹರಿದ್ದು, ವೆಚ್ಚವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಭರಿಸಲಿದೆ.

ಸಮಿತಿ ಅಧ್ಯಯನದ ಸಲುವಾಗಿ ಹೊರ ರಾಜ್ಯಕ್ಕೆ ಭೇಟಿ ನೀಡಿದಲ್ಲಿ, ಪ್ರಯಾಣದ ವೆಚ್ಚವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ‌‌ ಭರಿಸುವಂತೆಯೂ ಸೂಚಿಸಿರುವ ಸರ್ಕಾರ, ಸಮಿತಿಯು ಈ ವರದಿಯನ್ನು ಆದೇಶದ ದಿನಾಂಕದಿಂದ ಮೂರು ತಿಂಗಳೊಳಗಾಗಿ ಸರ್ಕಾರಕ್ಕೆ ಸಲ್ಲಿಸಬೇಕೆಂದು ಹೇಳಿದೆ.
 

SCROLL FOR NEXT