ಹುಬ್ಬಳ್ಳಿ ವಿಮಾನ ನಿಲ್ದಾಣ 
ರಾಜ್ಯ

ಹುಬ್ಬಳ್ಳಿಯಲ್ಲಿ ಶೀಘ್ರವೇ ಏರ್ ಟ್ಯಾಕ್ಸಿ ಸರ್ವೀಸ್ ಆರಂಭ

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ರಾತ್ರಿ ಪಾರ್ಕಿಂಗ್ ಸೌಲಭ್ಯಕ್ಕೆ ಏಜೆನ್ಸಿಯೊಂದು ಅನುಮತಿ ಪಡೆದಿರುವುದರಿಂದ ಮುಂಬರುವ ದಿನಗಳಲ್ಲಿ ಹುಬ್ಬಳ್ಳಿಗೆ ಏರ್ ಟ್ಯಾಕ್ಸಿ ಸೇವೆ ದೊರೆಯುವ ಸಾಧ್ಯತೆಯಿದೆ.

ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ರಾತ್ರಿ ಪಾರ್ಕಿಂಗ್ ಸೌಲಭ್ಯಕ್ಕೆ ಏಜೆನ್ಸಿಯೊಂದು ಅನುಮತಿ ಪಡೆದಿರುವುದರಿಂದ ಮುಂಬರುವ ದಿನಗಳಲ್ಲಿ ಹುಬ್ಬಳ್ಳಿಗೆ ಏರ್ ಟ್ಯಾಕ್ಸಿ ಸೇವೆ ದೊರೆಯುವ ಸಾಧ್ಯತೆಯಿದೆ. ಎಲ್ಲವೂ ಅಂದಕೊಂಡಂತೆ ನಡೆದರೆ ಏರ್ ಟ್ಯಾಕ್ಸಿಯನ್ನು ವಿಮಾನ ನಿಲ್ದಾಣದಲ್ಲಿ 24 ಗಂಟೆಯೂ ನಿಲ್ಲಿಸಲಾಗುತ್ತದೆ.

ರಾತ್ರಿ ವೇಳೆ ಲ್ಯಾಂಡಿಂಗ್ ಸೌಲಭ್ಯವಿದ್ದು, ಕ್ರಾಫ್ಟ್‌ಗಳನ್ನು ನಿಲ್ಲಿಸಲು ಸಾಕಷ್ಟು ಸ್ಥಳಾವಕಾಶವಿದ್ದರೂ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆ ಕ್ರಾಫ್ಟ್‌ಗಳನ್ನು ಪಾರ್ಕಿಂಗ್ ಮಾಡಲು ಅವಕಾಶವಿರಲಿಲ್ಲ.

ಕೆಲವು ಏರ್‌ಲೈನ್‌ಗಳು ವಿಮಾನ ನಿಲ್ದಾಣದಲ್ಲಿ ರಾತ್ರಿ ನಿಲುಗಡೆ ಅಥವಾ ಪಾರ್ಕಿಂಗ್‌ಗೆ ಅನುಮತಿ ನೀಡುವಂತೆ ಒತ್ತಾಯಿಸಿದ್ದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (ಡಿಜಿಸಿಐ) ಒಪ್ಪಿಗೆಗಾಗಿ ಕಾಯುತ್ತಿದ್ದರು.

ಇತ್ತೀಚೆಗೆ ಗುರುಗ್ರಾಮ ಮೂಲದ ‘ಏರ್ ಟ್ಯಾಕ್ಸಿ’ ಎಂಬ ವಿಮಾನ ಸೇವೆ ಒದಗಿಸುವ ಕಂಪನಿ ಹುಬ್ಬಳ್ಳಿಯಲ್ಲಿ ರಾತ್ರಿ ವಾಹನ ನಿಲುಗಡೆ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದು, ಅನುಮತಿ ನೀಡಲಾಗಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣವು ಒಂದೇ ಬಾರಿಗೆ ಏಳು ಕ್ರಾಪ್ಟ್ ಗಳ ಪಾರ್ಕಿಂಗ್ ಸೌಲಭ್ಯವನ್ನು ಹೊಂದಿದೆ, ಆದರೆ ಇಲ್ಲಿಯವರೆಗೆ ಯಾವುದೇ ವಿಮಾನ ಸೇವೆಯನ್ನು ಒದಗಿಸದ ಕಾರಣ ಅದನ್ನು ಬಳಸಲಾಗಿಲ್ಲ. ಇತರ ನಗರಗಳಿಂದ ಬುಕ್ ಮಾಡಲು ಚಾರ್ಟರ್ ಫ್ಲೈಟ್‌ಗಳನ್ನು ಬಳಸಲಾಗುತ್ತಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏರ್ ಟ್ಯಾಕ್ಸಿ ಏಜೆನ್ಸಿಯು ನಾಲ್ಕು ಆಸನಗಳ ವಿಮಾನಕ್ಕಾಗಿ ರಾತ್ರಿ ಪಾರ್ಕಿಂಗ್ ಅನುಮತಿಯನ್ನು ಕೋರಿದ್ದು ಡಿಜಿಸಿಐ ಅನುಮತಿ ನೀಡಿದೆ.  ವಿಮಾನ ನಿಲ್ದಾಣದಿಂದ ಕಾರ್ಯಾಚರಣೆಯ ಬಗ್ಗೆ ಸಂಸ್ಥೆಯು ಇನ್ನೂ ಯಾವುದೇ ವಿವರ ನೀಡಿಲ್ಲ, ಅವರು ಸಂಪೂರ್ಣ ಮಾಹಿತಿ ನೀಡಿದ ನಂತರ, ಅದು ನಿಗದಿತ ವಿಮಾನವೇ ಅಥವಾ ಬೇರಯದ್ದೆ ಎಂಬ ಬಗ್ಗೆ ನಮಗೆ ತಿಳಿಯುತ್ತದೆ ಎಂದು ಏರ್ ಪೋರ್ಟ್ ನಿರ್ದೇಶಕ ಪ್ರಮೋದ್ ಠಾಕ್ರೆ ತಿಳಿಸಿದ್ದಾರೆ.

ಏರ್ ಟ್ಯಾಕ್ಸಿ ಸರ್ವೀಸ್  ಏಜೆನ್ಸಿ ತನ್ನ ಕ್ರಾಫ್ಟ್ ಅನ್ನು ಇಲ್ಲಿ ನಿಲ್ಲಿಸಲಿದ್ದು ಈ ವಿಮಾನ ನಿಲ್ದಾಣದಿಂದ ಕಾರ್ಯನಿರ್ವಹಿಸುತ್ತದೆ. ಇದು ನಿಗದಿತವಲ್ಲದ ವಾಣಿಜ್ಯ ವಿಮಾನ ಸೇವೆಯಾಗಿದೆ ಹಾಗೂ ನಗರದಿಂದ ಚಾರ್ಟರ್ ಫ್ಲೈಟ್ ಸೇವೆಯನ್ನು ಒದಗಿಸುತ್ತದೆ. ವಿಮಾನ ಸಂಪರ್ಕ ಹೊಂದಿರುವ ನಗರ ಅಥವಾ ಇತರ ನಗರಗಳ ಜನರು ಹುಬ್ಬಳ್ಳಿಯಿಂದ ಚಾರ್ಟರ್ ಫ್ಲೈಟ್‌ಗಳನ್ನು ಬುಕ್ ಮಾಡಬಹುದು ಎಂದು ಇನ್ನೊಬ್ಬ ಅಧಿಕಾರಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT