ಲಸಿಕೆ ಪಡೆಯುತ್ತಿರುವ ಆರೋಗ್ಯ ಕಾರ್ಯಕರ್ತರು (ಸಂಗ್ರಹ ಚಿತ್ರ) 
ರಾಜ್ಯ

ಓಮಿಕ್ರಾನ್ ಸೋಂಕು ಪತ್ತೆಯಾಗಿದ್ದ ಬೆಂಗಳೂರು ವೈದ್ಯನಿಗೆ ಮತ್ತೆ ಕೋವಿಡ್ ಪಾಸಿಟಿವ್!: ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಕೆ

ಓಮಿಕ್ರಾನ್ ಸೋಂಕು ಪೀಡಿತರಾಗಿದ್ದ ಬೆಂಗಳೂರು ವೈದ್ಯರಲ್ಲಿ ಮೊದಲ ಪರೀಕ್ಷೆಯ 15 ದಿನಗಳು ಕಳೆದರೂ ಕೋವಿಡ್-19 ಸೋಂಕು ಸಕ್ರಿಯವಾಗಿರುವುದು ಕಂಡುಬರುತ್ತಿದೆ. 

ಬೆಂಗಳೂರು: ಓಮಿಕ್ರಾನ್ ಸೋಂಕು ಪೀಡಿತರಾಗಿದ್ದ ಬೆಂಗಳೂರು ವೈದ್ಯರಲ್ಲಿ ಮೊದಲ ಪರೀಕ್ಷೆಯ 15 ದಿನಗಳು ಕಳೆದರೂ ಕೋವಿಡ್-19 ಸೋಂಕು ಸಕ್ರಿಯವಾಗಿರುವುದು ಕಂಡುಬರುತ್ತಿದೆ. 

ಅಚ್ಚರಿಯೆಂಬಂತೆ ವೈದ್ಯರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಓರ್ವ ವ್ಯಕ್ತಿ ಹಾಗೂ ದ್ವಿತೀಯ ಸಂಪರ್ಕದ ಇಬ್ಬರಲ್ಲಿ ಸೋಂಕು ಪತ್ತೆ ಪರೀಕ್ಷೆಯಲ್ಲಿ ಕೋವಿಡ್-19 ನೆಗೆಟೀವ್ ತೋರಿಸುತ್ತಿದೆ. 

ಒಮಿಕ್ರಾನ್ ಸೋಂಕು ಪತ್ತೆಯಾಗಿ 15 ದಿನಗಳು ಕಳೆದಿದ್ದ ಹಿನ್ನೆಲೆಯಲ್ಲಿ 2 ನೇ ಬಾರಿಯ ಪರೀಕ್ಷೆಯಲ್ಲಿ ನೆಗೆಟೀವ್ ವರದಿಯನ್ನು ಅರಿವಳಿಕೆ ತಜ್ಞರಾಗಿರುವ ವೈದ್ಯರು ನಿರೀಕ್ಷಿಸುತ್ತಿದ್ದರು. ಆದರೆ 2ನೇ ಬಾರಿಯೂ ಕೋವಿಡ್-19 ಸೋಂಕು ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ ಬೋರಿಂಗ್ ಆಸ್ಪತ್ರೆಯಲ್ಲೇ ಐಸೊಲೇಷನ್ ಹಾಗೂ ಚಿಕಿತ್ಸೆಯನ್ನು ಮುಂದುವರೆಸಬೇಕಾಗಿದೆ. 

ವೈದ್ಯರಿಂದ ಸಂಗ್ರಹಿಸಲಾದ ಮಾದರಿಗಳನ್ನು ಮತ್ತೊಮ್ಮೆ ಪರೀಕ್ಷೆಗಾಗಿ 24 ಗಂಟೆಗಳ ನಂತರ ಕಳಿಸಲಾಗುತ್ತದೆ. ಸೋಮವಾರ ನೆಗೆಟೀವ್ ವರದಿ ಪಡೆದಿದ್ದವರನ್ನೂ ಮತ್ತೊಮ್ಮೆ ಪರೀಕ್ಷೆಗೊಳಪಡಿಸಲಾಗುತ್ತದೆ ಎಂದು ಹಿರಿಯ ವೈದ್ಯರೊಬ್ಬರು ಮಾಹಿತಿ ನೀಡಿದ್ದಾರೆ. 

ವೈದ್ಯರು ಹಾಗೂ ಅವರ ಸಂಪರ್ಕಿತರು ನೆಗೆಟೀವ್ ವರದಿ ದೃಢಪಡುವವರೆಗೆ ಐಸೊಲೇಷನ್ ಹಾಗೂ ಚಿಕಿತ್ಸೆಯನ್ನು ಮುಂದುವರೆಸಬೇಕಾಗುತ್ತದೆ. ಓಮಿಕ್ರಾನ್ ಪೀಡಿತ ವೈದ್ಯರು ಹಾಗೂ ಅವರ ಸಹೋದ್ಯೋಗಿಗಳಿಗೆ ರಕ್ತದೊತ್ತಡ ಹಾಗೂ ಆಕ್ಸಿಜನ್ ಮಟ್ಟ ಹಾಗೂ ಇತರೆ ಪ್ರಮುಖ ಆರೋಗ್ಯ ಅಂಶಗಳು ಸಹಜವಾಗಿದೆ.

ವೈದ್ಯರಿಗೆ ಮಧುಮೇಹ ಇದ್ದು, ಇನ್ನೂ ಪಾಸಿಟೀವ್ ಬರುತ್ತಿರುವುದಕ್ಕೆ ಇದೂ ಒಂದು ಕಾರಣ ಇರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಡೆಲ್ಟಾ ಹಾಗೂ ಇನ್ನಿತರ ರೂಪಾಂತರಿ ಸೋಂಕು ಪ್ರಕರಣಗಳಲ್ಲಿಯೂ ಈ ರೀತಿ ಆಗಿರುವ ಉದಾಹರಣೆಗಳಿವೆ. ಹಲವರಿಗೆ ಚಿಕಿತ್ಸೆಯ 21 ದಿನಗಳ ನಂತರ ಪಾಸಿಟೀವ್ ಬಂದಿರುವ ಉದಾಹರಣೆಗಳೂ ಇವೆ ಎಂದು ವೈದ್ಯರೊಬ್ಬರು ವಿವರಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ SIR: ವಿದೇಶಾಂಗ ಸಚಿವ ಜೈಶಂಕರ್, ಎಲ್.ಕೆ ಅಡ್ವಾಣಿ ಸೇರಿದಂತೆ ಹಲವು ಮತದಾರರಿಗೆ ನೋಟಿಸ್; CEO ಕೊಟ್ಟ ಸ್ಪಷ್ಟನೆ ಏನು?

ಇದು ಎಂತಹ ವಿಶೇಷ ತೀವ್ರ ಪರಿಷ್ಕರಣೆ? ಅರ್ಹರನ್ನು ಕಿತ್ತುಹಾಕಿ, ಅನರ್ಹರನ್ನು ಸೇರಿಸುವುದೇ SIR: ಕಪಿಲ್ ಸಿಬಲ್ ಕಿಡಿ!

ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಮರುನೇಮಕ ಪ್ರಶ್ನಿಸಿದ ಟಾಟಾ ಟ್ರಸ್ಟ್ಸ್!

ಸಿಎಂ ಡಿಕೆ ಶಿವಕುಮಾರ್‌ ನೂರು ದಿನಗಳ ಆಡಳಿತಕ್ಕೆ ಬಿಜೆಪಿ ನಾಯಕ ಫಿದಾ! ಏನಂದ್ರು ಗೊತ್ತಾ?

ಅಂತಹ ಮನಸ್ಥಿತಿ ಇದ್ದಾಗ ಮೊದಲೇ ಅದರಿಂದ ದೂರ ಇರಬೇಕಿತ್ತು: ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಹದೇವಪ್ಪ ಟಾಂಗ್!