ಹರ್ಜಿಂದರ್ ಸಿಂಗ್ ಮತ್ತವರ ಪತ್ನಿ 
ರಾಜ್ಯ

ಬಿಪಿನ್ ರಾವತ್ ಹೆಲಿಕಾಪ್ಟರ್ ಪತನ: ಮೃತಪಟ್ಟ ಲೆ.ಕ. ಹರ್ಜಿಂದರ್‌ ಸಿಂಗ್‌ ಕಾರ್ಕಳದ ಅಳಿಯ

ತಮಿಳುನಾಡಿನ ಕೂನೂರಿನಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಭಾರತೀಯ ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಮೃತಪಟ್ಟ ಲೆಫ್ಟಿನೆಂಟ್‌ ಕರ್ನಲ್‌ ಹರ್ಜಿಂದರ್‌ ಸಿಂಗ್‌ ಉಡುಪಿ ಜಿಲ್ಲೆಯ ಕಾರ್ಕಳದ ಅಳಿಯ.

ಕಾರ್ಕಳ: ತಮಿಳುನಾಡಿನ ಕೂನೂರಿನಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಭಾರತೀಯ ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಮೃತಪಟ್ಟ ಲೆಫ್ಟಿನೆಂಟ್‌ ಕರ್ನಲ್‌ ಹರ್ಜಿಂದರ್‌ ಸಿಂಗ್‌ ಉಡುಪಿ ಜಿಲ್ಲೆಯ ಕಾರ್ಕಳದ ಅಳಿಯ.

ಲೆಫ್ಟಿನೆಂಟ್‌ ಕರ್ನಲ್‌ ಹರ್ಜಿಂದರ್‌ ಸಿಂಗ್‌ ಅವರು ಕಾರ್ಕಳದ ಸಾಲ್ಮರ ಬಂಡಿಮಠ ನಿವಾಸಿ, ಕಾಂಗ್ರೆಸ್‌ ಮುಖಂಡ, ಕಾರ್ಕಳ ಪುರಸಭೆ ಮಾಜಿ ಉಪಾಧ್ಯಕ್ಷ ಫಿಲಿಫ್ ಮಿನೇಜಸ್‌ ಹಾಗೂ ಮೇರಿ ಮಿನೇಜಸ್‌ ದಂಪತಿಯ ಪುತ್ರಿ ಲೆಫ್ಟಿನೆಂಟ್‌ ಪ್ರಫುಲ್ಲಾ ಮಿನೇಜಸ್‌ ಅವರನ್ನು ವಿವಾಹವಾಗಿದ್ದರು.

ಫಿಲಿಪ್ ಮಿನೇಜಸ್‌ ಹಾಗೂ ಮೇರಿ ಮಿನೇಜಸ್‌ ದಂಪತಿಯ ನಾಲ್ವರು ಮಕ್ಕಳಲ್ಲಿ ಕೊನೆಯವಳಾದ ಆಗ್ನೇಸ್‌ ಪ್ರಫುಲ್ಲಾ ಮಿನೇಜಸ್‌ ಹಲವಾರು ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಆಕೆ 15 ವರ್ಷ ಹಿಂದೆ ಹರ್ಜಿಂದರ್‌ ಸಿಂಗ್‌ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು.

ಫಿಲಿಪ್ ಅವರ ಮೊದಲ ಮಗಳು ಪುಷ್ಪಾ ವಿದೇಶದಲ್ಲಿ ನೆಲೆಸಿದ್ದರು, ಆದರೆ ಮನೆ ಮತ್ತು ಅವರ ತಂದೆಯ ಸ್ಟೇಷನರಿ ಅಂಗಡಿಯನ್ನು ನೋಡಿಕೊಳ್ಳಲು ಸಲ್ಮಾರಾಗೆ ಮರಳಿದರು.  ಪ್ರಫುಲ್ಲ ಅವರು ಮೊದಲು ಸೇನೆಯಲ್ಲೆ ಕಾರ್ಯನಿರ್ವಸುತ್ತಿದ್ದರು.   ಇತ್ತೀಚೆಗೆ ಸ್ವಯಂ ನಿವೃತ್ತಿಯನ್ನು ಪಡೆದು ಸೇನಾ ಶಾಲೆಯಲ್ಲೇ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.  ನಾಲ್ಕು ವರ್ಷದ ಹಿಂದೆ ಹರ್ಜಿಂದರ್ ಸಿಂಗ್ ಕಾರ್ಕಳಕ್ಕೆ ಬಂದಿದ್ದರು. ಕೆಲ ವಾರಗಳ ಹಿಂದೆ ಪ್ರಫುಲ್ಲಾ ಕಾರ್ಕಳಕ್ಕೆ ಬಂದು ಕುಟುಂಬಸ್ಥರೊಂದಿಗೆ ಸಮಯ ಕಳೆದಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವೇನ್ ಮುಚ್ಚೋದು ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ- ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ; Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ, Turkey ಬೇಸ್ತು!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್, KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

ಮಿಸ್ಟರ್ 'ನಂಗ್ ಗೊತ್ತಿಲ್ಲಾ' ಗೃಹ ಸಚಿವರೇ ಇಲ್ನೋಡಿ, ಪುಡಿ ರೌಡಿಗಳ ಹಾವಳಿ : Parameshwar ವಿರುದ್ಧ ಜೆಡಿಎಸ್ ಕಿಡಿ

IPL 2026: ಬಟ್ಲರ್ 14,000 ರನ್ ದಾಖಲೆ; ಮಿಂಚಿದ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ; LSG ವಿರುದ್ಧ GT ಗೆಲುವು!

SCROLL FOR NEXT