ರಾಜ್ಯ

ಪರಿಷತ್ ಚುನಾವಣೆ ದಕ್ಷಿಣ ಕನ್ನಡದಲ್ಲಿ ಚುರುಕು, ಚಿತ್ರದುರ್ಗದಲ್ಲಿ ನೀರಸ: ಮಧ್ಯಾಹ್ನ 2 ಗಂಟೆ ವೇಳೆಗೆ ಶೇ.76ರಷ್ಟು ಮತದಾನ

Srinivasamurthy VN

ಬೆಂಗಳೂರು: ವಿಧಾನ ಪರಿಷತ್ ಚುನಾವಣಾ ಮತದಾನ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಮಧ್ಯಾಹ್ನ 2ಗಂಟೆ ಹೊತ್ತಿಗೆ ರಾಜ್ಯಾದ್ಯಂತ ಶೇ.76ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.

ದಕ್ಷಿಣಕನ್ನಡದಲ್ಲಿ  ಬೆಳಗಿನಿಂದಲೇ ಬಿರುಸಿನ ಮತದಾನವಾಗುತ್ತಿದ್ದು ಇಲ್ಲಿ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಶೇ.98.05 ರಷ್ಟುಮತದಾನವಾಗಿದೆ ಎನ್ನಲಾಗಿದೆ. ಅಂತೆಯೇ ಚಿತ್ರದುರ್ಗದಲ್ಲಿ ಕನಿಷ್ಠ ಪ್ರಮಾಣದ ಮತದಾನವಾಗಿದ್ದು ಇಲ್ಲಿ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಶೇ 10 ರಷ್ಟು ಮಾತ್ರ ಮತದಾನವಾಗಿದೆ ಎನ್ನಲಾಗಿದೆ.

ಉಳಿದಂತೆ ತುಮಕೂರಿನಲ್ಲಿ ಮಧ್ಯಾಹ್ನ 2 ಗಂಟೆ  ಹೊತ್ತಿಗೆ ಶೇ.77.66 ರಷ್ಚು ಮತದಾನವಾಗಿದ್ದು, ಶೇ.78.75ರಷ್ಚು ಮಹಿಳೆಯರು ಮತ್ತು ಶೇ.76.44 ಪುರುಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇಲ್ಲಿ ಒಟ್ಟು 5,559 ಮತದಾರರ ಪೈಕಿ 2,312 ಮಹಿಳೆಯರು ಮತ್ತು 2,005 ಪುರುಷರು ಸೇರಿದಂತೆ 4,317 ಮತದಾರರು ಮತ ಚಲಾಯಿಸಿದ್ದಾರೆ. ಇತ್ತ ಮಧ್ಯಾಹ್ನ 2 ಗಂಟೆಗೆ ಉಡುಪಿ ಜಿಲ್ಲೆಯಲ್ಲಿ ಶೇ 98.12 ರಷ್ಟು ಮತದಾನವಾಗಿದೆ. 

ಇತ್ತ ಮೊಳಕಾಲ್ಮುರು ತಾಲೂಕಿನ ಕಾಲುವೆಹಳ್ಳಿ ಜಿ.ಪಂ.ನ ಎಲ್ಲಾ 19 ಸದಸ್ಯರು ಮತದಾನ ಮಾಡಿದ್ದರಿಂದ ಶೇ.100ರಷ್ಟು ಮತದಾನವಾದಂತಾಗಿದೆ. ಅಂತೆಯೇ ತುಮಕೂರು ಜಿಲ್ಲೆಯ ಕುಣಿಗಲ್ ನಲ್ಲೂ ಶೇ. 100%ರಷ್ಚು ಮತದಾನವಾಗಿದ್ದು,  20 ಮತದಾರರ ಪೈಕಿ ತಲಾ ಹತ್ತು ಪುರುಷ ಮತ್ತು ಮಹಿಳೆ, ಎಲ್ಲರೂ ಮಧ್ಯಾಹ್ನ 12.30 ರ ಹೊತ್ತಿಗೆ ತಮ್ಮ ಹಕ್ಕು ಚಲಾಯಿಸಿದರು. 

SCROLL FOR NEXT