ರಾಜ್ಯ

ಬಿಪಿನ್ ರಾವತ್ ಕುರಿತು ಅವಹೇಳನಕಾರಿ ಫೋಸ್ಟ್ ಮಾಡಿದವರನ್ನು ಪತ್ತೆ ಹಚ್ಚಿ: ಪೊಲೀಸರಿಗೆ ಗೃಹ ಸಚಿವರ ನಿರ್ದೇಶನ

Nagaraja AB

ಬೆಂಗಳೂರು: ತಮಿಳುನಾಡಿನ ಕುನೂರು ಬಳಿ ಡಿಸೆಂಬರ್ 8 ರಂದು ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಾಕಾರಿ ಫೋಸ್ಟ್ ಮಾಡಿದ್ದವರನ್ನು ಪತ್ತೆ ಹಚ್ಚಿ, ಶಿಕ್ಷೆಗೆ ಗುರಿಪಡಿಸಬೇಕೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಶನಿವಾರ ನಿರ್ದೇಶಿಸಿದ್ದಾರೆ.

ಜನರಲ್ ರಾವತ್ ಅವರ ಅಕಾಲಿಕ ಮರಣವನ್ನು ಸಂಭ್ರಮಿಸುತ್ತಿರುವವರ ಪತ್ತೆ ಕಾರ್ಯ ವಿಳಂಬ ಮಾಡಬಾರದು, ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜ್ಞಾನೇಂದ್ರ ಅವರ ಕಚೇರಿ ಹೇಳಿಕೆಯಲ್ಲಿ ತಿಳಿಸಲಾಗಿದೆ. 

ದೇಶದ ಹೆಮ್ಮೆಯ ಪುತ್ರನ ಸಾವನ್ನು ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಿಸುವಂತಹ ಹೇಳಿಕೆ ಹಾಕುವವರು ದೇಶ ವಿರೋಧಿಗಳು, ಈ ಕ್ರಿಮಿನಲ್ ಗಳ ವಾಸದ ವಿಳಾಸವನ್ನು ಪತ್ತೆ ಹಚ್ಚಿ, ಅವರ ವಿಕೃತ ಮನಸ್ಸಿಗೆ ಸೂಕ್ತ ರೀತಿಯಲ್ಲಿ ಶಿಕ್ಷೆ ನೀಡಬೇಕೆಂದು ಸಚಿವರು ಪ್ರವೀಣ್ ಸೂದ್ ಅವರಿಗೆ ನಿರ್ದೇಶಿಸಿದ್ದಾರೆ.

ದೇಶಕ್ಕೆ ಅಪಾರ ಕೊಡುಗೆ ನೀಡಿದ್ದ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಸಾವಿನಿಂದ ದೇಶಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.

SCROLL FOR NEXT