ರಾಜ್ಯ

ಡ್ರಗ್ಸ್ ಮಾರಾಟಕ್ಕೆ ಹೊಸ ಮಾರ್ಗ: ಪೆಡ್ಲರ್ ಗಳಿಂದ ಸಾರ್ವಜನಿಕ ಪ್ರದೇಶಗಳ ಬಳಕೆ!

Manjula VN

ಬೆಂಗಳೂರು: ಡ್ರಗ್ಸ್ ದಂಧೆ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು, ಡ್ರಗ್ಸ್ ಮಾರಾಟಕ್ಕೆ ಗ್ರಾಹಕರ ತಲುಪಲು ಪೆಡ್ಲರ್ ಗಳು ಹರಸಾಹಸಪಡುತ್ತಿದ್ದಾರೆ.

ಇತ್ತೀಚೆಗಷ್ಟೇ ಮಡಿವಾಳದಲ್ಲಿ ಮಾದಕ ದ್ರವ್ಯ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಐವರು ಯುವಕರನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧನಕ್ಕೊಳಪಡಿಸಿದ್ದರು. ಪ್ರಣವ್ ವಿ ಎಂ, ಶ್ಯಾಮದಾಸ್, ಅನುಭವ್ ರವೀಂದ್ರನ್ ಕೆಕೆ, ಶಾಮಿಲ್ ವೈ ಮತ್ತು ಮೊಹಮ್ಮದ್ ಸಕರಿಯಾ ಎಂಬುವವರನ್ನು ಬಂಧಿಸಿ ಸುಮಾರು ರೂ. 10 ಲಕ್ಷ ಮೌಲ್ಯದ ಎಂಡಿಎಂಎ ಮತ್ತು ಗಾಂಜಾವನ್ನು ವಶಪಡಿಸಿಕೊಂಡಿದ್ದರು. ಐವರ ವಿಚಾರಣೆ ಡ್ರಗ್ಸ್ ಮಾರಾಟಕ್ಕೆ ಪೆಡ್ಲರ್ ಗಳು ಬಳಕೆ ಮಾಡುತ್ತಿರುವ ಹೊಸ ಮಾರ್ಗಗಳು ಬಯಲಾಗಿವೆ.

ಗ್ರಾಹಕರ ಎದುರಿಗೆ ಬಾರದೆ ಪೆಡ್ಲರ್ ಗಳು ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಫೋನ್ ಮೂಲಕ ಗ್ರಾಹಕರನ್ನು ಸಂಪರ್ಕರಿಸಿ ಆರ್ಡರ್ ಪಡೆದುಕೊಳ್ಳುತ್ತಿದ್ದ  ಪೆಡ್ಲರ್ ಗಳು ಬಳಿಕ ಸಾರ್ವಜನಿಕ ಪ್ರದೇಶಗಳಲ್ಲಿ ಯಾರಿಗೂ ತಿಳಿಯದಂತೆ ಡ್ರಗ್ಸ್ ಗಳನ್ನು ಬಚ್ಚಿಟ್ಟು, ಗ್ರಾಹಕರಿಗೆ ಲೊಕೇಷನ್ ಕಳುಹಿಸಿ ಮಾರಾಟ ಮಾಡುತ್ತಿದ್ದರು ಎಂದು ಅಧಿಕಾರಿಗಳಉ ಮಾಹಿತಿ ನೀಡಿದ್ದಾರೆ.

ಉದ್ಯಾನವನದ ಮರ ಅಥವಾ ಬೆಂಚ್ ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ಪೆಡ್ಲರ್ ಗಳು ಡ್ರಗ್ಸ್ ಗಳನ್ನು ಬಚ್ಚಿಡುತ್ತಿದ್ದರು. ಬಳಿಕ ಇಟ್ಟಿರುವ ಜಾಗದ ಫೋಟೋವನ್ನು ಕ್ಲಿಕ್ಕಿಸಿ ಗ್ರಾಹಕರಿಗೆ ಫೋಟೋ ಕಳುಹಿಸುತ್ತಿದ್ದರು. ಸಂದೇಶ, ಫೋಟೋ ಬರುತ್ತಿದ್ದಂತೆಯೇ ಗ್ರಾಹಕ ಸ್ಥಳಕ್ಕೆ ತೆರಳಿ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.

SCROLL FOR NEXT