ರಾಜ್ಯ

ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ಜೋನ್ ಗಳ ಸಂಖ್ಯೆ 101ಕ್ಕೆ ಏರಿಕೆ!

Srinivas Rao BV

ರಾಜ್ಯಾದ್ಯಂತ ಒಟ್ಟು ಕೋವಿಡ್-19 ಪ್ರಕರಣಗಳ ವರದಿ ಕಡಿಮೆ ಎಂದೆನಿಸಿದರೂ, ಮೈಕ್ರೋ ಕಂಟೈನ್ಮೆಂಟ್ ಜೋನ್ (ಎಂಸಿಝೆಡ್) ಗಳು ನಗರದಲ್ಲಿ 100 ರ ಗಡಿ ದಾಟಿವೆ. 

ಆರೋಗ್ಯ ಬುಲೆಟಿನ್ ನ ಮಾಹಿತಿಯ ಪ್ರಕಾರ ನಗರದಲ್ಲಿ ಸಕ್ರಿಯವಾಗಿರುವ ಒಟ್ಟು ಮೈಕ್ರೋ ಕಂಟೈನ್ಮೆಂಟ್ ಝೋನ್ ಗಳ ಸಂಖ್ಯೆ 101, ಆಗಿದ್ದು ಬೊಮ್ಮನಹಳ್ಳಿ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಕಳೆದ ವಾರ ಎಂಸಿಝೆಡ್ ಗಳ ಸಂಖ್ಯೆ ಶೇ.45 ರಿಂದ 50 ರಷ್ಟು ಹೆಚ್ಚಳವಾಗಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಹೆಚ್ಚಳ ಕಂಡುಬಂದಿದೆ. 

ನ.24 ರಂದು ಪ್ರಕಟಗೊಂಡಿದ್ದ ಬೆಂಗಳೂರು ನಗರದ ಬುಲೆಟಿನ್ ನಲ್ಲಿ 55 ಎಂಸಿಝೆಡ್ ಗಳಿವೆ ಎಂದು ಬಂದಿತ್ತು. ಡಿ.12 ರ ವೇಳೆಗೆ ಈ ಸಂಖ್ಯೆ 101 ಕ್ಕೆ ಏರಿಕೆಯಾಗಿದೆ. ಬೊಮ್ಮನಹಳ್ಳಿ 34 ಎಂಸಿಝೆಡ್ ಗಳನ್ನು ಹೊಂದುವ ಮೂಲಕ ಅತಿ ಹೆಚ್ಚು ಕಂಟೈನ್ಮೆಂಟ್ ಝೋನ್ ಗಳನ್ನು ಹೊಂದಿರುವ ಪ್ರದೇಶವಾಗಿದೆ. ನಂತರದ ಸ್ಥಾನದಲ್ಲಿ 17 ಎಂಸಿಝೆಡ್ ಗಳನ್ನು ಹೊಂದಿರುವ ದಕ್ಷಿಣ ಝೋನ್,  15 ಎಂಸಿಝೆಡ್ ಗಳನ್ನು ಹೊಂದಿರುವ ಮಹದೇವಪುರ, ಈಸ್ಟ್ ಝೋನ್ ನಲ್ಲಿ 14 ಹಾಗೂ ವೆಸ್ಟ್ ಝೋನ್ ನಲ್ಲಿ 7, ರಾಜರಾಜೇಶ್ವರಿ ನಗರದಲ್ಲಿ 3, ದಾಸರಹಳ್ಳಿಯಲ್ಲಿ 3 ಎಂಸಿಝೆಡ್ ಗಳಿವೆ.

ಮೂರು ಅಥವಾ ಅದಕ್ಕಿಂತಲೂ ಹೆಚ್ಚು ಮಂದಿ ಕೋವಿಡ್-19 ಪೀಡಿತರಾದರೆ ಬಿಬಿಎಂಪಿ ಅದನ್ನು ಮೈಕ್ರೋ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸುತ್ತದೆ. 

ಡಿ.14 ರಂದು ಬೆಳ್ಳಂದೂರು, ಹೆಚ್ಎಸ್ ಆರ್ ಲೇಔಟ್, ದೊಡ್ಡನೆಕ್ಕುಂದಿ, ಹಗಡೂರು, ಹೊರಮಾವು, ಉತ್ತರಹಳ್ಳಿ, ಹೆಮ್ಮಿಗೆಪುರ, ಬ್ಯಾಟರಾಯನಪುರ ಹಾಗೂ ಹೂಡಿ ಗಳಲ್ಲಿ ಹೆಚ್ಚು ಕೋವಿಡ್-19 ಪ್ರಕರಣಗಳು ವರದಿಯಾಗಿವೆ.

SCROLL FOR NEXT