ಸಾಂದರ್ಭಿಕ ಚಿತ್ರ 
ರಾಜ್ಯ

ತುಮಕೂರು: ಪತ್ನಿ -ಪುತ್ರಿಯೊಂದಿಗೆ ಹೇಮಾವತಿ ನಾಲೆಗೆ ಹಾರಿ ಎಂಜಿನೀಯರ್ ಆತ್ಮಹತ್ಯೆ

ಹೇಮಾವತಿ ನಾಲಾ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಪತ್ನಿ, ಪುತ್ರಿಯೊಂದಿಗೆ ನಾಲೆಗೆ ಹಾರಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ.

ತುಮಕೂರು: ಹೇಮಾವತಿ ನಾಲಾ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಪತ್ನಿ, ಪುತ್ರಿಯೊಂದಿಗೆ ನಾಲೆಗೆ ಹಾರಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ.

ಎಂಜಿನಿಯರ್ ರಮೇಶ್ (55), ಪತ್ನಿ ಮಮತ (45), ಪುತ್ರಿ ಶುಭಾ (25) ಆತ್ಮಹತ್ಯೆ ಮಾಡಿಕೊಂಡವರು.

ಗುರುವಾರ‌ ಸಂಜೆ 8 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ತುಮಕೂರು ಜಿಲ್ಲೆಯ ಹೇಮಾವತಿ ನಾಲಾ ವಿಭಾಗದ ಎಇಇ ರಮೇಶ್ ಹಾಗೂ ಕುಟುಂಬ ಆತ್ಮಹತ್ಯೆ ಶರಣಾಗಿದ್ದಾರೆ.

ತಡರಾತ್ರಿ ಓಮಿನಿಯಲ್ಲಿ ಆಗಮಿಸಿದ ರಮೇಶ್, ಪತ್ನಿ ಮಮತ ಹಾಗೂ ಮಗಳು ಶುಭಾ ಅವರುಗಳು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಾಗರನಹಳ್ಳಿ ಗೇಟ್ ಬಳಿ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಓಮಿನಿ ಕಾರಿನಲ್ಲಿ ಬಂದಿದ್ದ ಮೂವರೂ ಕೂಡ ಹರಿಯುವ ನೀರಿಗೆ ಹಾರಿ ಆತ್ಮಹತ್ಯೆ ಗೆ ಶರಣಾಗಿದ್ದು ಹಲವು ಅನುಮಾನಗಳು ಹುಟ್ಟು ಹಾಕಿವೆ. ಮಮತ ಮತ್ತು ಶುಭಾ ಅವರ ಶವ ಸಿಕ್ಕಿದ್ದು, ರಮೇಶ್‌ ಅವರ ಶವಕ್ಕಾಗಿ ಶೋಧ ಕಾರ್ಯ ನಡೆದಿದೆ.

ಇನ್ನು ರಮೇಶ್ ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಕ್ರಾಸ್ ನಲ್ಲಿ ಹೇಮಾವತಿ ನಾಲಾ ವಿಭಾಗದ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ತುಮಕೂರು ನಗರದಲ್ಲಿ ಕುಟುಂಬ ಸಮೇತ ವಾಸವಿದ್ದರು. ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಹೋಟೆಲ್ ಉದ್ಯಮಿಗೆ ಮಗಳು ಶುಭಾಳನ್ನ 15 ದಿನಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ಸೋಲು: ಯಾರೇ ಒಪ್ಪಿದರೂ-ಒಪ್ಪದಿದ್ದರೂ ನಿಯಮಗಳ ಪ್ರಕಾರವೇ ಲೋಕಸಭೆ ಕಾರ್ಯನಿರ್ವಹಣೆ; ಸ್ಪೀಕರ್ ಓಂ ಬಿರ್ಲಾ

ಇರಾನ್ ಬಿಕ್ಕಟ್ಟು: ಕೇಂದ್ರ ಸರ್ಕಾರಕ್ಕೆ ಹೊರೆ, ಪ್ರತಿ ತಿಂಗಳು 30,000 ಕೋಟಿ ರೂ. ಹೆಚ್ಚಿನ ವೆಚ್ಚ!

ಟಿ20 ವಿಶ್ವಕಪ್ ನಲ್ಲಿ ವಿವಾದಾತ್ಮಕ ನಿರ್ಧಾರ: ಸೂರ್ಯ ಕುಮಾರ್ ಯಾದವ್ ಕ್ಷಮೆಯಾಚನೆ!

ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಪತನ; 92.36ಕ್ಕೆ ಕುಸಿತ

ಭಾರತಕ್ಕೆ ದೊಡ್ಡ ರಾಜತಾಂತ್ರಿಕ ಗೆಲುವು: ಹಾರ್ಮುಜ್ ಜಲಸಂಧಿಯಿಂದ ಮುಂಬೈಗೆ ಬಂದ ಮೊದಲ ತೈಲ ಹಡಗು!

SCROLL FOR NEXT