ರಾಜ್ಯ

ಟಾಟಾ ಅಭಿವೃದ್ಧಿಪಡಿಸಿದ್ದ 1,200 ಎಕರೆ ಭೂಮಿಯನ್ನು ಮರಳಿ ಪಡೆಯುವುದಕ್ಕೆ ಸರ್ಕಾರದಿಂದ ಜ್ಞಾಪನಾ ಪತ್ರ

Srinivas Rao BV

ಕೊಡಗು: ಕೊಡಗಿನಲ್ಲಿ ಟಾಟಾ ಸಂಸ್ಥೆ ಟೀ ಎಸ್ಟೇಟ್ ನ್ನಾಗಿ ಅಭಿವೃದ್ಧಿಪಡಿಸಿರುವ 1,200 ಎಕರೆ ಭೂಮಿಯನ್ನು ಮರಳಿ ಪಡೆಯುವುದಕ್ಕೆ ಪೊನ್ನಂಪೇಟೆ ತಹಶೀಲ್ದಾರ್ ಅರಣ್ಯ ಇಲಾಖೆಗೆ ಜ್ಞಾಪನಾ ಪತ್ರವನ್ನು ರವಾನಿಸಿದೆ. 

ಈ ಭೂಮಿಯನ್ನು ರಾಜ್ಯದ ಆದೇಶಗಳಿಗೆ ಅನುಗುಣವಾಗಿ ಮರಳಿ ಪಡೆದು ಅರಣ್ಯ ಇಲಾಖೆಗೆ ಕಳಿಸಲಾಗುವುದು ಹಾಗೂ ಮೀಸಲು ಅರಣ್ಯ ಪ್ರದೇಶವನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ. ತಹಶೀಲ್ದಾರ್ ಯೋಗಾನಂದ ಅವರು ಡಿ.20 ರಂದು ಬರೆದಿರುವ ಮಾಹಿತಿಯ ಪ್ರಕಾರ, ಹೈಸೊಡ್ಲೂರು, ಪೊರಡು, ಪಶ್ಚಿಮ ನಮ್ಮಲೆ, ಟಿ ಶೆಟ್ಟಿಗೆರಿ ಗ್ರಾಮಗಳಲ್ಲಿ ಟಾಟಾ ಸಮೂಹ ಸಂಸ್ಥೆಯ ಟಾಟಾ ಕಾಫಿ ಲಿಮಿಟೆಡ್ ಕಂಪನಿಗೆ 99 ವರ್ಷಗಳ ಕಾಲ ಭೋಗ್ಯಕ್ಕೆ ನೀಡಲಾಗಿತ್ತು. 

1203 ಎಕರೆ ಭೂಮಿಯ ಭೋಗ್ಯದ ಅವಧಿ ಮುಕ್ತಾಯಗೊಂಡಿರುವುದರಿಂದ ಇದೇ ಭೂಮಿಯನ್ನು ಅರಣ್ಯ ಇಲಾಖೆಗೆ ಮೀಸಲು ಅರಣ್ಯ ಪ್ರದೇಶವನ್ನಾಗಿ ಬಿಟ್ಟುಕೊಡಬೇಕಿದೆ. 

1914-15, ಮ್ಯಾಕ್ ಡೊಗಲ್ ಗ್ಲೆನ್ಲೋರಾ ಲಿಮಿಟೆಡ್ 1300 ಎಕರೆ ಪೈಸಾರಿ ಭೂಮಿಯನ್ನು ಅಂದಿನ ಬ್ರಿಟೀಷ್ ಸರ್ಕಾರದಿಂದ 999 ವರ್ಷಗಳ ಕಾಲ ಭೋಗ್ಯಕ್ಕೆ ಪಡೆದಿತ್ತು. ಈ ಭೋಗ್ಯದ ಜಮೀನನ್ನು ನಂತರದ ದಿನಗಳಲ್ಲಿ ಟಾಟಾ ಕಾಫಿ ಲಿಮಿಟೆಡ್ (ಟೀ ಸಂಸ್ಥೆ) ಗೆ ವರ್ಗಾವಣೆ ಮಾಡಲಾಗಿತ್ತು. 

ಪೈಸಾರಿ ಭೂಮಿಯಲ್ಲಿದ್ದ ಟಿಂಬರ್ ಗಳನ್ನು ತೆರವುಗೊಳಿಸಿ, ಕಾಫಿ ಹಾಗೂ ಟೀ ಎಸ್ಟೇಟ್ ಗೆ ದಾರಿ ಮಾಡಿಕೊಡಲಾಗಿತ್ತು ಬಳಿಕ ಭೂಮಿಯ ಸ್ವರೂಪವನ್ನು ಕಂದಾಯ ಇಲಾಖೆ ದಾಖಲೆಗಳಲ್ಲಿ ‘ರಿಡೀಮ್ಡ್‌ ಸಾಗು’ ಎಂದು ನಮೂದು ಮಾಡಲಾಗಿತ್ತು. ಬಳಿಕ ಭೂಮಿಯ ಸ್ವರೂಪವನ್ನು ಅರಣ್ಯ ಎಂದು ಇಲಾಖೆ ಮತ್ತೆ ಬದಲಾವಣೆ ಮಾಡಿತ್ತು.

ಆದರೆ ಈ ಗೊಂದಲಗಳ ಪರಿಣಾಮ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು.  ಸರ್ಕಾರ ತನ್ನ ಅರಿವಿಗೆ ಬಾರದಂತೆ ಭೂಮಿಯ ಭೋಗ್ಯದ ಅವಧಿಯನ್ನು ಬದಲಾವಣೆ ಮಾಡಲಾಗಿದೆ ಅದೂ ಮೀಸಲು ಅಣ್ಯ ಪ್ರದೇಶವಾಗಿದೆ ಎಂದು ವಾದಿಸಿತ್ತು. 999 ವರ್ಷಗಳ ಬ್ರಿಟೀಷ್ ಸರ್ಕಾರ ನಿಗದಿಪಡಿಸಿದ್ದ ಭೋಗ್ಯದ ಅವಧಿಯನ್ನು ಕೂರ್ಗ್ ನ ಅಂದಿನ ಆಯುಕ್ತರು 99 ವರ್ಷಗಳಿಗೆ ಇಳಿಕೆ ಮಾಡಿದ್ದರು. ಈ ಬೆಳವಣಿಗೆಗಳ ಆಧಾರದಲ್ಲಿ ಟಾಟಾ ಸಂಸ್ಥೆಗೆ ಭೂಮಿಯನ್ನು ಮರಳಿ ನೀಡುವಂತೆ ನೊಟೀಸ್ ಜಾರಿಗೊಳಿಸಲಾಗಿತ್ತು. 

ಟಾಟಾ ಸಂಸ್ಥೆ ಕೋರ್ಟ್ ನಲ್ಲಿ ಸರ್ಕಾರ ಅಕ್ರಮವಾಗಿ ರೀಡೀಮ್ಡ್ ಸಾಗು ಎಂದು ಕಂದಾಯ ದಾಖಲೆಗಳಲ್ಲಿ ನಮೂದಾಗಿದ್ದನ್ನು ಅರಣ್ಯ ಭೂಮಿ ಎಂದು ಬದಲಾವಣೆ ಮಾಡಿದೆ ಎಂದು ವಾದಿಸಿತ್ತು.

ಕಂದಾಯ ಇಲಾಖೆಯ ಬದಲಾವಣೆಗಳನ್ನು ಪ್ರಶ್ನಿಸಲು ಕಂದಾಯ ನ್ಯಾಯಾಲಯವನ್ನೇ ಸಂಪರ್ಕಿಸಬೇಕೆಂದು ಸ್ಥಳೀಯ ನ್ಯಾಯಾಲಯ ಆದೇಶ ನೀಡಿತ್ತು. ಈಗ 1203 ಎಕರೆ ಭೂಮಿಯನ್ನು ವಶಕ್ಕೆ ಪಡೆಸಲು ಸರ್ಕಾರ ಮುಂದಾಗಿದೆ.

SCROLL FOR NEXT