ಸಾಂದರ್ಭಿಕ ಚಿತ್ರ 
ರಾಜ್ಯ

ಓಮೈಕ್ರಾನ್ ಭೀತಿ: ವೀಸಾ ಅವಧಿ ವಿಸ್ತರಿಸುವಂತೆ ಗೋಕರ್ಣದಲ್ಲಿರುವ ವಿದೇಶಿ ಪ್ರವಾಸಿಗರ ಮನವಿ

ಕೊರೋನಾ ವೈರಸ್ ಮತ್ತು ರೂಪಾಂತರಿ ಓಮೈಕ್ರಾನ್ ಸೋಂಕಿನ ಭೀತಿಯಿಂದಾಗಿ ವಿಮಾನ ಟಿಕೆಟ್ ಲಭ್ಯವಾಗುತ್ತಿಲ್ಲ, ಹೀಗಾಗಿ ತಮ್ಮ ವೀಸಾ ಅವಧಿಯನ್ನು ವಿಸ್ತರಿಸುವಂತೆ ಗೋಕರ್ಣದಲ್ಲಿ ತಂಗಿರುವ ವಿದೇಶಿಗರು ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

ಗೋಕರ್ಣ: ಕೊರೋನಾ ವೈರಸ್ ಮತ್ತು ರೂಪಾಂತರಿ ಓಮೈಕ್ರಾನ್ ಸೋಂಕಿನ ಭೀತಿಯಿಂದಾಗಿ ವಿಮಾನ ಟಿಕೆಟ್ ಲಭ್ಯವಾಗುತ್ತಿಲ್ಲ, ಹೀಗಾಗಿ ತಮ್ಮ ವೀಸಾ ಅವಧಿಯನ್ನು ವಿಸ್ತರಿಸುವಂತೆ ಗೋಕರ್ಣದಲ್ಲಿ ತಂಗಿರುವ ವಿದೇಶಿಗರು ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

ಗೋಕರ್ಣದಲ್ಲಿ ನೆಲೆಸಿರುವ ವಿದೇಶಿಗರನ್ನು ದೇಶವನ್ನು ತೊರೆಯುವಂತೆ ಉತ್ತರ ಕನ್ನಡ ಜಿಲ್ಲಾಡಳಿತವು  ಸೂಚಿಸಿತ್ತು, ಆದರೆ ಗೋಕರ್ಣದಲ್ಲಿರುವ ಸುಮಾರು  45  ವಿದೇಶಿಗರು, ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ತಮ್ಮ ವೀಸಾವನ್ನು ವಿಸ್ತರಿಸಲು ಕೇಂದ್ರ ಗೃಹ ಇಲಾಖೆಗೆ ಮನವಿ ಮಾಡಿದ್ದಾರೆ.

ಅಮೆರಿಕಾದ ಓರಿಜೋನಾದ ಫಾರ್ಮಾಸಿಸ್ಟ್ ಟಿಟಿಯಾನಾ ಗುರೀಸ್ ಡಿಸೆಂಬರ್ 6 ರಂದು ಪತ್ರ ಬರೆದು ವೀಸಾ ಅವಧಿ ವಿಸ್ತರಿಸುವಂತೆ ಕೋರಿದ್ದಾರೆ. ಚಳಿಗಾಲದಲ್ಲಿ ಇಲ್ಲಿರಲು ನಮಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.

ಓಮೈಕ್ರಾನ್ ಸೋಂಕು ಎಲ್ಲೆಡೆ ಹರಡುತ್ತಿದ್ದು,  ನಮ್ಮ ಸುರಕ್ಷತೆಯನ್ನು ನಾವು ಬಯಸುತ್ತಿದ್ದೇವೆ,   ಆಸ್ಟ್ರೇಲಿಯಾ, ರಷ್ಯಾ, ಆಸ್ಟ್ರಿಯಾ, ಉಕ್ರೇನ್ ಮತ್ತು ಯುಕೆ  ಮತ್ತು ಆಫ್ರಿಕಾ ದೇಶಗಳು ಓಮಿಕ್ರಾನ್ ನೊಂದಿಗೆ ಹೋರಾಡುತ್ತಿವೆ, ಹೀಗಾಗಿ ನಮ್ಮ ವೀಸಾ ಅವಧಿ ವಿಸ್ತರಣೆ ಮನವಿಯನ್ನು ಪರಿಗಣಿಸಬೇಕು ಎಂದು ಪತ್ರದಲ್ಲಿ ವಿದೇಶಿಗರು ಬರೆದಿದ್ದಾರೆ.

ಭಾರತದ ಇತರ ರಾಜ್ಯಗಳಲ್ಲಿ ವೀಸಾಗಳನ್ನು ಅಧಿಕೃತವಾಗಿ 6 ತಿಂಗಳವರೆಗೆ ವಿಸ್ತರಿಸಲಾಗುತ್ತಿದೆ ಎಂದು ತಿಳಿದಿದೆ, ಹೀಗಾಗಿ ಕರ್ನಾಟಕದಲ್ಲಿರುವ ನಮಗೂ ವಿಸಾ ಅವಧಿ ವಿಸ್ತರಿಸುವಂತೆ ಮನವಿ ಮಾಡಿದ್ದಾರೆ, ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ.ಯಲ್ಲಿ ನಾವು ಹೊರಗೆ ಹೋಗುವುದು ಸೂಕ್ತವಲ್ಲ, ನಾವು ಇಲ್ಲಿ ಉಳಿಯಲು ಬೇಕಾದ, ಅಗತ್ಯವಿರುವ ಸೇವಾ ತೆರಿಗೆ ಮತ್ತು ವೀಸಾ ಶುಲ್ಕ ಪಾವತಿಸಲು ನಾವು ಸಿದ್ದರಿದ್ದೇವೆ ಎಂದು ವಿದೇಶಿ ಪ್ರಜೆಗಳ ಪರವಾಗಿ ಟಿಟಿಯಾನಾ ಹೇಳಿದ್ದಾರೆ.

ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಕೆಲವು ವಿದೇಶಿಗರಿಗೆ ವೀಸಾ ಅವಧಿ ಮುಗಿದಿರುವುದರಿಂದ ಹೊರಹೋಗುವಂತೆ ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ನಾವು ಐವರನ್ನು ಗಡಿಪಾರು ಮಾಡಿದ್ದೇವೆ, ಉಳಿದವರಿಗೆ ಎಚ್ಚರಿಕೆ ನೀಡಿದ್ದೇವೆ ಎಂದು ಗೋಕರ್ಣ ಪಟ್ಟಣ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನವೀನ್ ನಾಯಕ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT