ರಾಜ್ಯ

ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆ 2 ಬಾರಿ ಭೂಕಂಪನ: ಹಲವು ಗ್ರಾಮದಲ್ಲಿ ಭಾರೀ ಸ್ಪೋಟದ ಶಬ್ದ

Shilpa D

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆ ಸ್ಫೋಟದ ಅನುಭವವಾಗಿದೆ. ಬೆಳಗ್ಗೆ 7 ಗಂಟೆಯಿಂದ 7.30ರೊಳಗೆ ಭಾರಿ ಸ್ಫೋಟದ ಸದ್ದು ಕೇಳಿ ಬಂದಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ.

'3.1 ತೀವ್ರತೆಯ ಭೂಕಂಪನ, ಡಿಸೆಂಬರ್ 12ರಂದು ಬೆಳಿಗ್ಗೆ 7.09ರ ವೇಳೆಗೆ ಸಂಭವಿಸಿದೆ. ಬೆಂಗಳೂರಿನ ಉತ್ತರ, ಈಶಾನ್ಯ ಭಾಗದ 70 ಕಿಮೀ ದೂರದಲ್ಲಿ 11 ಕಿಮೀ ಆಳದಲ್ಲಿ ಭೂಕಂಪನ ಉಂಟಾಗಿದೆ' ಎಂದು ಎನ್ ಎಸ್ ಸಿ ಟ್ವೀಟ್ ಮಾಡಿದೆ.

ಇದಾಗಿ ಐದು ನಿಮಿಷದಲ್ಲಿಯೇ ಮತ್ತೊಮ್ಮೆ ಭೂಕಂಪನ ಉಂಟಾಗಿದ್ದು, ಈ ಬಾರಿ ತೀವ್ರತೆ ಕೊಂಚ ಹೆಚ್ಚಿತ್ತು. ಬೆಂಗಳೂರು ಉತ್ತರ- ಈಶಾನ್ಯ ಭಾಗದ 66 ಕಿಮೀ ದೂರದಲ್ಲಿ 23 ಕಿಮೀ ಆಳದಲ್ಲಿ ಬೆಳಿಗ್ಗೆ 7.14ರ ಸುಮಾರಿಗೆ 3.3 ತೀವ್ರತೆಯಲ್ಲಿ ಭೂಮಿ ನಡುಗಿದೆ ಎಂದು ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.

SCROLL FOR NEXT