ರಾಜ್ಯ

ಬೆಳಗಾವಿ ಚಳಿಗಾಲದ ಅಧಿವೇಶನದ ನಂತರ ರಾಜ್ಯದಲ್ಲಿ 6ನೇ ಹುಲಿ ಸಂರಕ್ಷಿತ ಪ್ರದೇಶ ಘೋಷಣೆ ಸಾಧ್ಯತೆ

Lingaraj Badiger

ಬೆಂಗಳೂರು: ಬೆಳಗಾವಿಯಲ್ಲಿ ನಡೆಯುತ್ತಿರುವ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನದ ನಂತರ, ಮಲೆ ಮಹದೇಶ್ವರ(ಎಂಎಂ ಹಿಲ್ಸ್) ವನ್ಯಜೀವಿ ಅಭಯಾರಣ್ಯ ಕರ್ನಾಟಕದ ಆರನೇ ಮತ್ತು ಬಹು ನಿರೀಕ್ಷಿತ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸುವ ಸಾಧ್ಯತೆ ಇದೆ.

ರಾಜ್ಯ ಅರಣ್ಯ ಇಲಾಖೆ, ಸಂರಕ್ಷಣಾಧಿಕಾರಿಗಳು ಮತ್ತು ತಜ್ಞರ ಬಹುಕಾಲದ ಬೇಡಿಕೆ ಈಗ ಈಡೇರುತ್ತಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(ಎನ್‌ಟಿಸಿಎ) ಕಳೆದ ಜುಲೈನಲ್ಲಿ ತನ್ನ ಅನುಮೋದನೆ ನೀಡಿದ್ದರೆ, ರಾಜ್ಯ ವನ್ಯಜೀವಿ ಮಂಡಳಿಯು 2018ರಲ್ಲೇ ಅನುಮತಿ ನೀಡಿದೆ.

“ಈ ಸಂಬಂಧ ಎಲ್ಲಾ ಪೇಪರ್‌ಗಳು ಸಿದ್ಧವಾಗಿದ್ದು, ಸರ್ಕಾರದ ಆದೇಶಕ್ಕಾಗಿ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಸಲ್ಲಿಕೆಯಾಗಬೇಕಿದೆ. ರಾಜಕೀಯ ಕಾರಣಗಳಿಂದ ರಾಜ್ಯ ಸರ್ಕಾರ ಈ ಮಹತ್ವ ಘೋಷಣೆ ಮಾಡಲು ವಿಳಂಬ ಮಾಡುತ್ತಿದೆ. 

“ಪ್ರತಿ ಬಾರಿ ಪ್ರಸ್ತಾಪ ಬಂದಾಗ, ರಾಜಕಾರಣಿಗಳು ಕುದುರೆಮುಖ ಮತ್ತು ಎಂಎಂ ಹಿಲ್ಸ್‌ನಲ್ಲಿ ನಕ್ಸಲ್ ಸಮಸ್ಯೆಯನ್ನು ಪ್ರಸ್ತಾಪಿಸುತ್ತಾರೆ. ಹುಲಿ ಸಂರಕ್ಷಿತ ಪ್ರದೇಶ ಬಗ್ಗೆ ಯಾವುದೇ ಪ್ರಸ್ತಾಪ ಮಾಡುತ್ತಿರಲಿಲ್ಲ. ಆದರೆ ಈಗ ಹುಲಿ ಗಣತಿ ಸಮೀಪಿಸುತ್ತಿರುವುದರಿಂದ ಎಂಎಂ ಹಿಲ್ಸ್‌ನ್ನು ಮೀಸಲು ಪ್ರದೇಶವೆಂದು ಘೋಷಿಸುವುದಕ್ಕೆ ನೆರವಾಗಲಿದೆ. ಅಲ್ಲದೆ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಈಗಾಗಲೇ ಅನುಮೋದನೆ ನೀಡಿರುವುದರಿಂದ ರಾಜ್ಯ ಸರ್ಕಾರ ಆದೇಶ ನೀಡುವುದು ಕೇವಲ ಔಪಚಾರಿಕವಾಗಿದೆ,'' ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

SCROLL FOR NEXT