ಸಾಂದರ್ಭಿಕ ಚಿತ್ರ 
ರಾಜ್ಯ

ಕೌಟುಂಬಿಕ ಕಲಹ: ರಾಮನಗರದಲ್ಲಿ ಕೆರೆಗೆ ಹಾರಿ ಮೂವರ ಆತ್ಮಹತ್ಯೆ, ಬದುಕುಳಿದ ಬಾಲಕಿ

ಕೌಟುಂಬಿಕ ‌ಕಲಹ ಹಿನ್ನೆಲೆ ಕೆರೆಗೆ ಹಾರಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ‌ಯತ್ನಿಸಿದ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನ ದಮ್ಮನಕಟ್ಟೆ ಗ್ರಾಮದಲ್ಲಿ ನಡೆದಿದೆ

ರಾಮನಗರ: ಕೌಟುಂಬಿಕ ‌ಕಲಹ ಹಿನ್ನೆಲೆ ಕೆರೆಗೆ ಹಾರಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ‌ಯತ್ನಿಸಿದ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನ ದಮ್ಮನಕಟ್ಟೆ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಓರ್ವ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಗ್ರಾಮದ ಸಿದ್ದಮ್ಮ(55), ಆಕೆಯ ಮಗಳು ಸುಮಿತ್ರಾ (30) ಮತ್ತು ಅಳಿಯ‌ ಹನುಮಂತ ರಾಜು(35) ಮೃತರು. ಬಾಲಕಿ ಕೀರ್ತನಾ (11) ಸ್ಥಿತಿ ಕೂಡ ಗಂಭೀರವಾಗಿದ್ದು, ಮಾಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾಲ್ವರು ಕೆರೆಗೆ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದರು. ಆದರೆ ಅವರಲ್ಲಿ ಮೃತ ಸುಮಿತ್ರಾಳ 10 ವರ್ಷದ ಮಗಳು ಅಲ್ಲಿಂದ ತಪ್ಪಿಸಿಕೊಂಡು ಬಂದು ಗ್ರಾಮಸ್ಥರಿಗೆ ಆತ್ಮಹತ್ಯೆ ವಿಷಯ ತಿಳಿಸಿದ್ದಾಳೆ.

ಕೂಡಲೇ ಗ್ರಾಮಸ್ಥರು ಬಾಲಕಿಯನ್ನು ರಕ್ಷಿಸಿದ್ದಾರೆ. ಉಳಿದ ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪಿಗೆ ಸೆಡ್ಡು ಹೊಡೆದ ಟ್ರಂಪ್; ಜಾಗತಿಕ ಸುಂಕ ಶೇ. 10 ರಿಂದ 15ಕ್ಕೆ ಹೆಚ್ಚಿಸಿ ಆದೇಶ!

ಟ್ರಂಪ್ ಸುಂಕ ಕಾನೂನುಬಾಹಿರ: ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಭಾರತದ ಮೊದಲ ಪ್ರತಿಕ್ರಿಯೆ..

ನನಗೂ ಚಿಂತೆಯಾಗಿದೆ: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಅಭಿಷೇಕ್ ಶರ್ಮಾ ಕುರಿತು ಸೂರ್ಯ ಸ್ಫೋಟಕ ಹೇಳಿಕೆ

40ನೇ ವಯಸ್ಸಿನಲ್ಲಿ ಶಿಖರ್ ಧವನ್ 2ನೇ ಮದುವೆ: ಗೆಳತಿ ಸೋಫಿ ಶೈನ್ ಜೊತೆ 'ಗಬ್ಬರ್' ಸಪ್ತಪದಿ, ಫೋಟೋ ವೈರಲ್!

ಅಯೋಧ್ಯೆ ರಾಮ ಮಂದಿರಕ್ಕೆ 4 ಕಿ.ಮೀ ಉದ್ದದ ಭದ್ರತಾ ಗೋಡೆ ನಿರ್ಮಾಣ; ಇದರ ವಿಶೇಷತೆ ಏನು?

SCROLL FOR NEXT