ಬಿ.ಎಸ್ ಯಡಿಯೂರಪ್ಪ 
ರಾಜ್ಯ

ಬೆಳಗಾವಿ ಅಧಿವೇಶನ ಮುಗಿಸಿ ದುಬೈಗೆ ತೆರಳಿದ ಬಿ.ಎಸ್. ಯಡಿಯೂರಪ್ಪ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುಟುಂಬ ಸಮೇತ ದುಬೈ ಪ್ರವಾಸ ಕೈಗೊಂಡಿದ್ದಾರೆ. ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ಮುಗಿದ ಬೆನ್ನಲ್ಲೇ ಬಿಎಸ್‌ ವೈ ಮೂರು ದಿನಗಳ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ.

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುಟುಂಬ ಸಮೇತ ದುಬೈ ಪ್ರವಾಸ ಕೈಗೊಂಡಿದ್ದಾರೆ. ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ಮುಗಿದ ಬೆನ್ನಲ್ಲೇ ಬಿಎಸ್‌ ವೈ ಮೂರು ದಿನಗಳ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ.

ಅಧಿವೇಶನ ಮುಗಿಯುವ ಒಂದು ದಿನ ಮೊದಲೇ ಬೆಳಗಾವಿಯಿಂದ ಬೆಂಗಳೂರಿಗೆ ಆಗಮಿಸಿದ ಯಡಿಯೂರಪ್ಪ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕುಟುಂಬ ಸದಸ್ಯರ ಜೊತೆಗೆ ದುಬೈಗೆ ತೆರಳಿದರು.

ದುಬೈ ಕನ್ನಡ ಸಂಘದ ಶಾಲಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಪಾಲ್ಗೊಳ್ಳಲಿದ್ದು, ಮೂರು ದಿನಗಳ ನಂತರ ವಾಪಸ್ಸಾಗಲಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಬೆಂಗಳೂರಿಗೆ ಬರುವ ಮೊದಲೇ ಯಡಿಯೂರಪ್ಪ ಕೋವಿಡ್ ಪರೀಕ್ಷೆ ಮಾಡಿಸಿಕೊಂಡರು. ಬೆಳಗಾವಿಯ ಸುವರ್ಣಸೌಧದಲ್ಲಿ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿ, ನೆಗಟಿವ್ ವರದಿಯೊಂದಿಗೆ ವಿದೇಶಕ್ಕೆ ತೆರಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಂಸತ್ತಿನ ಎರಡೂ ಸದನಗಳಲ್ಲಿ CEC ಜ್ಞಾನೇಶ್ ಕುಮಾರ್ ಪದಚ್ಯುತಿ ಕೋರಿ ನೋಟಿಸ್ ಸಲ್ಲಿಸಿದ ಪ್ರತಿಪಕ್ಷಗಳು

West Asia conflict: ಇರಾಕ್‌ನಲ್ಲಿ ಅಮೆರಿಕಾದ KC-135 ಸೇನಾ ವಿಮಾನ ಪತನ; ನಾಲ್ವರು ಸಿಬ್ಬಂದಿ ಸಾವು

2 ಲಕ್ಷ ಕೋಟಿ ರೂ. ಪೂರಕ ಬಜೆಟ್ ಗೆ ಲೋಕಸಭೆ ಅನುಮೋದನೆ; ಕಲಾಪ ನಾಳೆಗೆ ಮುಂದೂಡಿಕೆ

ಟೆಹ್ರಾನ್‌ನ ಫರ್ದೋಸಿ ಚೌಕದಲ್ಲಿ ಇಸ್ರೇಲ್-ಅಮೆರಿಕ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದಾಗ ಭಾರೀ ಸ್ಫೋಟ, Video!

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಗೆ ಅಭಾವ ಉಂಟಾಗಿದೆಯಾ? IOCL ಹೇಳಿದ್ದೇನು

SCROLL FOR NEXT