ರಾಜ್ಯ

ಕರ್ನಾಟಕದಲ್ಲಿ ಏಳು ಹೊಸ ಓಮಿಕ್ರಾನ್ ಪ್ರಕರಣ ದೃಢ: ಒಟ್ಟಾರೇ 38ಕ್ಕೆ ಏರಿಕೆ

Nagaraja AB

ಬೆಂಗಳೂರು: ರಾಜ್ಯದಲ್ಲಿ ಏಳು ಹೊಸ ಓಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.  ಈ ಪೈಕಿ ಒಬ್ಬರಿಗೆ ಪ್ರಯಾಣದ ಇತಿಹಾಸವಿಲ್ಲ, ಆದರೆ, ದೆಹಲಿಗೆ ಪ್ರಯಾಣಿಸಿದ್ದ ಇಬ್ಬರು ಹಾಗೂ ನಾಲ್ವರು ವಿದೇಶಿ ಪ್ರಯಾಣಿಕರಲ್ಲಿ ಓಮಿಕ್ರಾನ್ ದೃಢಪಟ್ಟಿದೆ.

ಈ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಡಾ. ಕೆ. ಸುಧಾಕರ್  ದೆಹಲಿಗೆ ಪ್ರಯಾಣಿಸಿದ್ದ ಬೆಂಗಳೂರಿನ 76 ವರ್ಷದ ವ್ಯಕ್ತಿ ಮತ್ತು ಯುಎಇಯಿಂದ  ಬೆಂಗಳೂರಿಗೆ ಆಗಮಿಸಿದ್ದ 30 ವರ್ಷದ ಯುವತಿ, ಜಾಂಬಿಯಾದಿಂದ ಬೆಂಗಳೂರಿಗೆ ಆಗಮಿಸಿದ್ದ 63 ವರ್ಷದ ಪುರುಷ ಮತ್ತು ಯುಕೆಗೆ ಪ್ರಯಾಣಿಸಿದ್ದ ಪ್ರಾಥಮಿಕ ಸಂಪರ್ಕಿತ 54 ವರ್ಷದ ವ್ಯಕ್ತಿಯೊಬ್ಬರಲ್ಲಿ ಹೊಸ ರೂಪಾಂತರಿ ಓಮಿಕ್ರಾನ್ ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ. 

ಯುಕೆಯಿಂದ ಬೆಂಗಳೂರಿಗೆ ಆಗಮಿಸಿದ್ದ 21 ವರ್ಷದ ಯುವತಿ , ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಸಿದ್ದ 62 ವರ್ಷದ ವ್ಯಕ್ತಿ ಮತ್ತು ಯುಎಸ್ ಎಯಿಂದ ಬೆಂಗಳೂರಿಗೆ ಪ್ರಯಾಣಿಸಿದ್ದ 15 ವರ್ಷದ ಬಾಲಕನಲ್ಲಿ ಓಮಿಕ್ರಾನ್ ದೃಢಪಟ್ಟಿದೆ. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ, ಪರೀಕ್ಷೆ ನಡೆಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

SCROLL FOR NEXT