ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು: ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ

ಹಾಡಗಲೇ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಗರದ ಬನಶಂಕರಿ ದೇವಾಲಯದ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಬೆಂಗಳೂರು: ಹಾಡಗಲೇ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಗರದ ಬನಶಂಕರಿ ದೇವಾಲಯದ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಲಕ್ಕಸಂದ್ರ ನಿವಾಸಿ ಮದನ್ ಕೊಲೆಯಾದ ವ್ಯಕ್ತಿ‌.

ಬನಶಂಕರಿ ದೇವಾಲಯದ ಮೆಟ್ರೋ‌ ಪಿಲ್ಲರ್ ಬಳಿ ಇಂದು ಮಧ್ಯಾಹ್ನ ಸುಮಾರು 12 ಗಂಟೆಯ ಸುಮಾರಿಗೆ ಸೊಪ್ಪು ಖರೀದಿಸಿ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಬೈಕ್‌ ಹಿಂಬಾಲಿಸಿದ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಮದನ್‌ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಹತ್ಯೆಗೈದು ಪರಾರಿಯಾಗಿದ್ದಾರೆ.

ತಕ್ಷಣವೇ ಘಟನಾ ಸ್ಥಳದಲ್ಲಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಜಯನಗರ ಹಾಗೂ ಬನಶಂಕರಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಮೃತ ವ್ಯಕ್ತಿ ಮದನ್

ಮೃತದೇಹವನ್ನು‌ ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ಪೊಲೀಸರು ರವಾನಿಸಿದ್ದಾರೆ. ಕೃತ್ಯ ನಡೆದ‌ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಹತ್ಯೆ ಕುರಿತು ನಗರ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ‌ ಪ್ರತಿಕ್ರಿಯಿಸಿ, ಮದನ್ ಗುರಿಯಾಗಿಸಿಕೊಂಡಿದ್ದ ಹಂತಕರು ಮೂರು ಬೈಕ್ ಗಳಲ್ಲಿ ಬಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆಗೈದು ಪರಾರಿಯಾಗಿದ್ದಾರೆ ಎಂದರು.

ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಿದಿರಬಹುದು ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ಆರೋಪಿಗಳ ಸುಳಿವು ದೊರೆತಿದ್ದು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವೇನ್ ಮುಚ್ಚೋದು ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ- ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ; Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ, Turkey ಬೇಸ್ತು!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್, KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

ಮಿಸ್ಟರ್ 'ನಂಗ್ ಗೊತ್ತಿಲ್ಲಾ' ಗೃಹ ಸಚಿವರೇ ಇಲ್ನೋಡಿ, ಪುಡಿ ರೌಡಿಗಳ ಹಾವಳಿ : Parameshwar ವಿರುದ್ಧ ಜೆಡಿಎಸ್ ಕಿಡಿ

IPL 2026: ಬಟ್ಲರ್ 14,000 ರನ್ ದಾಖಲೆ; ಮಿಂಚಿದ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ; LSG ವಿರುದ್ಧ GT ಗೆಲುವು!

SCROLL FOR NEXT