ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ರಾಜ್ಯದಲ್ಲಿ ಮೂರು ತಿಂಗಳ ಬಳಿಕ ಭಾರೀ ಪ್ರಮಾಣದಲ್ಲಿ ಇಳಿದ ಕೊರೋನಾ: ನಿನ್ನೆ 2,082 ಹೊಸ ಕೇಸ್ ಪತ್ತೆ!

ರಾಜ್ಯದಲ್ಲಿ ಮೂರು ತಿಂಗಳ ಬಳಿಕ ಕೊರೋನಾ ಸೋಂಕು ಹಾಗೂ ಪಾಸಿಟಿವಿಟಿ ದರ ಗಮನಾರ್ಹ ಪ್ರಮಾಣದಲ್ಲಿ ಇಳಿಕೆಯಾಗಿದೆ. ಶನಿವಾರ ರಾಜ್ಯದಲ್ಲಿ ಕೇವಲ 2,082 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಸಂಗ್ರಹ ಚಿತ್ರ
Manjula VN
Updated On : 4 Jul 2021, 2:07 pm

ಬೆಂಗಳೂರು: ರಾಜ್ಯದಲ್ಲಿ ಮೂರು ತಿಂಗಳ ಬಳಿಕ ಕೊರೋನಾ ಸೋಂಕು ಹಾಗೂ ಪಾಸಿಟಿವಿಟಿ ದರ ಗಮನಾರ್ಹ ಪ್ರಮಾಣದಲ್ಲಿ ಇಳಿಕೆಯಾಗಿದೆ. ಶನಿವಾರ ರಾಜ್ಯದಲ್ಲಿ ಕೇವಲ 2,082 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 

ಮಾರ್ಚ್ 14ರ ಬಳಿಕ ಇದೇ ಮೊದಲ ಬಾರಿಗೆ ಪಾಸಿಟಿವಿಟಿ ದರ ಶೇ.1.34ಕ್ಕೆ ಇಳಿಕೆಯಾಗಿದೆ. ಮಾರ್ಚ್ 14ರಂದು ಶೇ.1.27ರಷ್ಟು ಪಾಸಿಟಿವಿಟಿ ದರ ವರದಿಯಾಗಿತ್ತು. ಇದಾದ ಬಳಿಕ ಏರುಗತಿಯಲ್ಲೇ ಸಾಗಿ ಎರಡನೇ ಅಲೆಯ ಭೀಕರತೆ ಸೃಷ್ಟಿಸಿತ್ತು. ಉಳಿದಂತೆ ಮಾರ್ಚ್ 23ರಂದು 2,010 ಸೋಂಕು ಪ್ರಕರಣ ವರದಿಯಾಗಿತ್ತು. ಬಳಿಕ ಇದೇ ಮೊದಲ ಬಾರಿಗೆ ಸೋಂಕು 2 ಗಡಿ ಸಮೀಪಕ್ಕೆ ಇಳಿಕೆಯಾಗಿದೆ. 

ಸೋಂಕಿತರ ಸಂಖ್ಯೆಯೊಂದಿಗೆ ಸಾವಿನ ಸಂಖ್ಯೆಯೂ ಇಳಿಕೆಯಾಗಿದ್ದು, 86 ಮಂದಿ ಸಾವನ್ನಪ್ಪಿದ್ದಾರೆ. ಆದರೆ, ಸಾವಿನ ದರ ಶೇ.4ರಷ್ಟು ವರದಿಯಾಗಿದೆ. ಎರಡನೇ ಅಲೆಯಲ್ಲಿ ಇಷ್ಟು ಸಾವಿನ ದರ ಈವರೆಗೆ ದಾಖಲಾಗಿರಲಿಲ್ಲ.

Advertisement

Advertisement

ಈ ನಡುವೆ ಉದ್ಯಾನನಗರಿ ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ 4,484 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಇದರೊಂದಿಗೆ ಚೇತರಿಕೆ ಪ್ರಮಾಣದಲ್ಲಿ ಬೆಂಗಳೂರು ರಾಜ್ಯವನ್ನೂ ಮೀರಿಸಿದಂತಾಗಿದೆ.

ರಾಜ್ಯದಲ್ಲಿ ನಿನ್ನೆ ಒಟ್ಟಾರೆಯಾಗಿ 7,751 ಮಂದಿ ಗುಣಮುಖರಾಗಿದ್ದು, ಇದರೊಂದಿಗೆ ಚೇತರಿಕೆ ಪ್ರಮಾಣ ಶೇ.97.07ಕ್ಕೆ ತಲುಪಿದ್ದರೆ, ಬೆಂಗಳೂರಿನ ಚೇತರಿಕೆ ಪ್ರಮಾಣ ಶೇ.97.11ಕ್ಕೆ ಏರಿಕೆಯಾಗಿದೆ. 

ಇನ್ನು ನಗರದಲ್ಲಿ ಶನಿವಾರ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.18.30ರಷ್ಟು ಇಳಿಕೆಯಾಗಿದೆ. ಶುಕ್ರವಾರದವರೆಗೆ 23,760 ರಷ್ಟಿದ್ದ ಸಕ್ರಿಯ ಪ್ರಮಾಣ ಗುಣಮುಖರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶನಿವಾರಕ್ಕೆ 19,760ಕ್ಕೆ ಇಳಿಕೆಯಾಗಿದೆ. ಜೂನ್.3ರವರೆಗೆ ನಗರದಲ್ಲಿ 1,34,384 ಸಕ್ರಿಯ ಪ್ರಕರಣಗಳಿತ್ತು. ಜೂನ್.30ರ ವೇಳೆಗೆ 43,698 ಕ್ಕೆ ಕುಸಿದಿದೆ. 

ರಾಜ್ಯದ ಜೊತೆ ಜೊತೆಗೆ ನಗರದಲ್ಲಿ ಕೋವಿಡ್ ಅಬ್ಬರ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ನಗರದಲ್ಲಿ ಮೂರು ತಿಂಗಳ ಬಳಿಕ ನಿನ್ನೆ 500ಕ್ಕಿಂತ ಕಡಿಮೆ ಸೋಂಕು ಪ್ರಕರಣಗಳು ಪತ್ತೆಯಾಗಿವೆ. 

ನಗರದಲ್ಲಿ ಶನಿವಾರ 481 ಪ್ರಕರಣಗಳು ಪತ್ತೆಯಾಗಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ. ಮಾರ್ಚ್ 10ರಂದು 488 ಪ್ರಕರಣ ಪತ್ತೆಯಾಗಿತ್ತು. ಕಳೆದ ಏಪ್ರಿಲ್.4ರಂದು 8 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಇದೂವರೆಗಿನ ಸಾವಿನ ಕನಿಷ್ಠ ಸಂಖ್ಯೆಯಾಗಿತ್ತು. ಹೊಸ ಸೋಂಕು ಪ್ರಕರಣಗಳಿಂದ ಈ ವರೆಗಿನ ಸೋಂಕಿತರ ಸಂಖ್ಯೆ 12,15,309ಕ್ಕೆ ಏರಿಕೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement