ರಾಜ್ಯ

ಚಾಮರಾಜನಗರ ದುರಂತ: ಮೃತ ರೋಗಿಗಳ ಕುಟುಂಬಗಳಿಗೆ ನೀಡುವ ಪರಿಹಾರ ಮೊತ್ತ ಹೆಚ್ಚಿಸಲು ಹೈಕೋರ್ಟ್ ಆದೇಶ

Shilpa D

ಬೆಂಗಳೂರು: ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ರೋಗಿಗಳ ಸಾವು ಪ್ರಕರಣದ ವಿಚಾರಣ ನಡೆಸಿದ ಹೈಕೋರ್ಟ್ ಅತ್ಯಂತ ಮಹತ್ವದ ತೀರ್ಪು ನೀಡಿದೆ. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. 

ಆಕ್ಸಿಜನ್ ಕೊರತೆಯಾದ ರಾತ್ರಿ, ಬೆಳಗ್ಗೆ 13 ರೋಗಿಗಳ ಸಾವನ್ನಪ್ಪಿದ್ದಾರೆ. ಈ ಮೃತರ 13 ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡಿ. ಬಳಿಕ ಮೃತಪಟ್ಟ 11 ಜನರ ಕುಟುಂಬಕ್ಕೆ ತಲಾ 2ಲಕ್ಷ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶಿಸಿದೆ. ಆಯೋಗದ ವರದಿ ಬಳಿಕ ಹೆಚ್ಚುವರಿ ಪರಿಹಾರ ಬಗ್ಗೆ ನಿರ್ಧರಿಸಿ ಎಂದು ಸಹ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

2021ರ ಮೇ 2ರ ರಾತ್ರಿ 10.30ರಿಂದ ಮೇ 3ರ ಬೆಳಗಿನ ಜಾವ 2.30 ಗಂಟೆಯ ಅವಧಿಯಲ್ಲಿ ಮೃತಪಟ್ಟ ಮೂವರ ಕುಟುಂಬಗಳಿಗೆ ಮಾತ್ರ 5 ಲಕ್ಷ ರು, ಪರಿಹಾರ ನೀಡಲಾಗುವುದು ಎಂದು ಸರ್ಕಾರಕ್ಕೆ ನ್ಯಾಯಾಲಯ ವಿವರಣೆ ಸಲ್ಲಿಸಿದೆ. 

‘ಮೇ 3 ರ ಬೆಳಗಿನ ಜಾವ 2.21 ರಿಂದ ಬೆಳಿಗ್ಗೆ 9 ಗಂಟೆಯ ಅವಧಿಯಲ್ಲಿ ಮೃತಪಟ್ಟ 10 ಸೋಂಕಿತರ ಕುಟುಂಬಗಳಿಗೆ 2 ಲಕ್ಷ ರು. ಪರಿಹಾರವನ್ನಷ್ಟೇ ನೀಡಲು ನಿರ್ಧರಿಸಲಾಗಿದೆ. ಮೇ 2ರಂದು ರಾತ್ರಿ 10.30ಕ್ಕೂ ಮೊದಲು ಮೃತಪಟ್ಟ 11 ಜನರ ಕುಟುಂಬಕ್ಕೂ ಈಗಾಗಲೇ 2 ಲಕ್ಷ ರು. ಪಾವತಿಸಲಾಗಿದೆ. 

ನ್ಯಾಯಮೂರ್ತಿ ಬಿ.ಎ. ಪಾಟೀಲ ಅವರ ನಡೆಸುತ್ತಿರುವ ತನಿಖಾ ವರದಿ ಬಂದ ಬಳಿಕ ಆ ಕುಟುಂಬಗಳಿಗೆ ಹೆಚ್ಚುವರಿ ಪರಿಹಾರ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವಡಗಿ ವಿವರಿಸಿದರು.

ಆಮ್ಲಜನಕ ಕೊರತೆಯಿಂದಲೇ ಸೋಂಕಿತರು ಮೃತಪಟ್ಟಿದ್ದಾರೆ ಎಂಬುದನ್ನು ಕಾನೂನು ಸೇವೆಗಳ ಪ್ರಾಧಿಕಾರದ ಸಮಿತಿ ಎತ್ತಿ ತೋರಿಸಿದೆ. ಈ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ಸರ್ಕಾರ ಭೇದ ಮಾಡದೆ ಎಲ್ಲರನ್ನೂ ಸಮಾನವಾಗಿ ಪರಿಗಣಿಸಬೇಕಾಗುತ್ತದೆ’ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ಪೀಠ ಹೇಳಿತು.

ಮೇ 3ರ ಬೆಳಗಿನ ಜಾವ 2.30ಕ್ಕೆ ಆಮ್ಲಜನಕ ಪೂರೈಕೆ ಆಗಿದ್ದರೂ, ಬಳಿಕ ಮೃತಪಟ್ಟವರ ಆರೋಗ್ಯದ ಮೇಲೆ ಆಮ್ಲಜನಕ ಕೊರತೆ ಪ್ರತಿಕೂಲ ಪರಿಣಾಮ ಬೀರಿರುತ್ತದೆ. ಹಾಗಾಗಿ, ಮೃತಪಟ್ಟವರ ನಡುವೆ ಯಾವುದೇ ವ್ಯತ್ಯಾಸ ಕಂಡು ಹಿಡಿಯಲು ಸಾಧ್ಯವಿಲ್ಲ’ ಎಂದು ಪೀಠ ಅಭಿಪ್ರಾಯಪಟ್ಟಿತು.

ಆಡಿಟ್ ವರದಿ ಪ್ರಕಾರ ಆಕ್ಸಿಜನ್ ಕೊರತೆಯಿಂದ ಮೂವರು ಸಾವನ್ನಪ್ಪಿದ್ದಾರೆ. ಮೆದುಳಿನ ಆಘಾತದಿಂದ 7 ರೋಗಿಗಳು ಮೃತಪಟ್ಟಿದ್ದಾರೆ. ಕೊರೊನಾ ಸೋಂಕಿನಿಂದ 14 ಸಾವಾಗಿದೆ ಎಂದು ತಿಳಿಸಲಾಗಿತ್ತು. ಆದರೆ ಇವರೆಲ್ಲರಿಗೂ ಆಕ್ಸಿಜನ್ ಕೊರತೆ ಆಗಿದ್ದು ನಿಜ. ಆಕ್ಸಿಜನ್ ಕೊರತೆಯಾದ ನಂತರ 36 ಒಳರೋಗಿಗಳು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ನ್ಯಾ.ಎ.ಎನ್.ವೇಣುಗೋಪಾಲಗೌಡ ನೇತೃತ್ವದ ಸಮಿತಿ ಹೈಕೋರ್ಟ್​ಗೆ ವರದಿ ಸಲ್ಲಿಸಿತ್ತು.
 

SCROLL FOR NEXT