ರಾಜ್ಯ

ಐಐಎಸ್ ಸಿ ಬೆಂಗಳೂರು ಸಂಶೋಧನಾ ಕ್ರಮಗಳಿಗೆ ಪ್ರಧಾನಿ ಮೆಚ್ಚುಗೆ

Srinivas Rao BV

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ ಸ್ನಾತಕೋತ್ತರ ವೈದ್ಯಕೀಯ ಶಾಲೆ ಹಾಗೂ ಸಂಶೋಧನಾ ಆಸ್ಪತ್ರೆಯನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಈ ಪ್ರಸ್ತಾವನೆಯನ್ನು ಪ್ರಧಾನಿ ನರೇಂದ್ರ ಮೋದಿ ಎದುರು ಮಂಡಿಸಿದೆ. 

ಐಐಎಸ್ ಸಿ ಬೆಂಗಳೂರಿನ ನಿರ್ದೇಶಕ ಜಿ ರಂಗರಾಜನ್ ಯೋಜನೆಯನ್ನು ವಿವರಿಸಿದ್ದಾರೆ. ಇದೇ ವೇಳೆ ಕೋವಿಡ್-19 ನಿರ್ವಹಣೆ ಹಾಗೂ ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿಯೆಡೆಗೆ ಸಂಸ್ಥೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ್ದಾರೆ.

ಸರ್ಕಾರಿ ಅನುದಾನಿತ 100 ತಾಂತ್ರಿಕ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದಾಗ ಐಐಎಸ್ ಸಿ ಮುಖ್ಯಸ್ಥರು ಸಂಸ್ಥೆಯ ಕ್ರಮಗಳನ್ನು ವಿವರಿಸಿದ್ದು, ಈ ಕುರಿತು ಮೋದಿಯೂ ಟ್ವೀಟ್ ಮಾಡಿದ್ದು, 

"ಐಐಎಸ್ ಐಯ ಕೋವಿಡ್-19 ನಿರ್ವಹಣಾ ಕ್ರಮಗಳನ್ನು ಮೋದಿ ಒಪ್ಪಿಕೊಂಡಿದ್ದು, ಆತ್ಮನಿರ್ಭರ್ ಭಾರತ ದೃಷ್ಟಿಕೋನದಲ್ಲಿ ಆರೋಗ್ಯ ಕ್ಷೇತ್ರದೆಡೆಗೆ ಹೆಚ್ಚಿನ ಒತ್ತು ನೀಡಬೇಕೆಂಬ ಐಐಎಸ್ ಸಿಯ ಸಲಹೆಯನ್ನು ಉಲ್ಲೇಖಿಸಿದ್ದಾರೆ. 

"ರೊಬೋಟಿಕ್ಸ್, ಗಣಿತ / ವಿಜ್ಞಾನ ಶಿಕ್ಷಕರಿಗೆ ತರಬೇತಿ ನೀಡುವುದು ಹಾಗೂ ಕೋವಿಡ್-19 ಸಂಬಂಧಿತ ಕ್ಷೇತ್ರಗಳಲ್ಲಿ ಸಂಸ್ಥೆಯ ಆರ್&ಡಿ ಕ್ರಮಗಳನ್ನು ಆಸಕ್ತಿದಾಯಕ" ಎಂದು ಮೋದಿ ಹೇಳಿದ್ದಾರೆ. 

ಸ್ಮಾರ್ಟ್ ಫೋನ್ ಬಳಕೆ ಕಡಿಮೆ ಇರುವೆಡೆಗೆ ಹಾಗೂ ಆಸ್ಪತ್ರೆಗಳಲ್ಲಿ ಸಹಾಯಕ ಸಾಧನಗಳ ಕೊರತೆ ಇರುವೆಡೆಗೆ 
ಕರ್ನಾಟಕ ರಾಜ್ಯ ಕೋವಿಡ್ ಸಿರೋಸರ್ವೇ, ಕೋವಿಡ್ ವಾಚ್ ಸೇರಿದಂತೆ ರೋಗನಿರ್ಣಯ ಮತ್ತು ನಿಗಾ ಸೇವೆಗಳಿಗೆ ಸಂಸ್ಥೆಯ ಆವಿಷ್ಕಾರಗಳು ಸಹಕಾರಿಯಾಗಿವೆ.

ಸಾಂಕ್ರಾಮಿಕ ರೋಗಕ್ಕೆ ಮಾಡೆಲಿಂಗ್, ಸಿಮ್ಯುಲೇಶನ್ ಮತ್ತು ವಿಶ್ಲೇಷಣೆಯೆಡೆಗೆ ಕೆಲಸ ಮಾಡುತ್ತಿರುವ ಸಂಶೋಧಕರಿಗೂ ಸಂಸ್ಥೆ ಸಹಕಾರಿಯಾಗಿದೆ. ಮುನ್ನೆಲೆ ಆರೋಗ್ಯ ಕಾರ್ಯಕರ್ತರು ಹಾಗೂ ಹಿರಿಯ ನಾಗಕರಿಕರು, ಬಹುವಿಧದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ರಕ್ಷಣೆ ನೀಡಲು ವೇಗವಾಗಿ ಉತ್ಪಾದಿಸಬಲ್ಲ ಲಸಿಕೆಯನ್ನು ಅಭಿವೃದ್ಧಿಪಡಿಸಲು ರಿಕಾಂಬಿನೆಂಟ್ ಸಬ್ ಯುನಿಟ್ ಲಸಿಕೆಗೆ ಸಂಬಂಧಿಸಿದಂತೆ ಸಂಶೋಧಕರು ಕೆಲಸ ಮಾಡುತ್ತಿದ್ದಾರೆ. 

ಬದಲಾಗುತ್ತಿರುವ ಕಾಲ, ಎದುರಾಗುತಿರುವ ಸವಾಲುಗಳಿಗೆ ತಕ್ಕಂತೆ ಉನ್ನತ ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣವನ್ನು ಹೊಂದಿಕೊಳ್ಳುವಂತೆ ಮಾಡಲು ಪ್ರಧಾನಿ ನರೇಂದ್ರ ಮೋದಿ ನಿರ್ದೇಶಕರುಗಳಿಗೆ ಕರೆ ನೀಡಿದ್ದಾರೆ. 

SCROLL FOR NEXT