ರಾಜ್ಯ

ಲಾಕ್‏ಡೌನ್ ನಿಂದ ಕಂಗೆಟ್ಟಿದ್ದ ಜನರಿಗೆ ರಾಜ್ಯದ ಈ ನಿಸರ್ಗ ತಾಣಗಳೇ ಅಚ್ಚುಮೆಚ್ಚು!

Vishwanath S

ಬೆಂಗಳೂರು: ಹಂತಹಂತವಾಗಿ ಲಾಕ್ ಡೌನ್ ತೆರವುಗೊಳಿಸುತ್ತಿದ್ದರು ಅನೇಕರು ಇನ್ನು ವರ್ಕ್ ಫರ್ಮ್ ಹೋಂ ಆಯ್ಕೆಯನ್ನೇ ಮುಂದುವರೆಸುತ್ತಿರುವುದರಿಂದ ನೈಸರ್ಗಿಕ ಸ್ಥಳಗಳಿಗೆ ಪ್ರಯಾಣಿಸುತ್ತಿದ್ದಾರೆ. ಅಲ್ಲದೆ ಮಾರ್ಗ ಮಧ್ಯೆ ಕೆಲಸ ಮಾಡುತ್ತಿರುವುದಾಗಿ ಕೆಲ ಪ್ರಕೃತಿ ಪ್ರಿಯರು ಹೇಳಿದ್ದಾರೆ. 

ನಾಗರಿಕರು ಇನ್ನೂ ಪ್ರಸಿದ್ಧಿಯಲ್ಲದ ಪ್ರದೇಶಗಳನ್ನು ಅನ್ವೇಷಿಸಲು ಪ್ರಾರಂಭಿಸಿಲ್ಲ. ಕಳೆದ ವರ್ಷದ ಅನ್‌ಲಾಕ್ ಅವಧಿಗಿಂತ ಭಿನ್ನವಾಗಿ ಈ ಸಮಯದಲ್ಲಿ, ಅವರು ತಿಳಿದಿರುವ ಸ್ಥಳಗಳಿಗೆ ಹೋಗುತ್ತಿದ್ದಾರೆ. ಅದರಂತೆ ಈ ಬಾರಿ ಭದ್ರಾಗಿಂತ ಕಬಿನಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂದು ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ಹೇಳಿದರು.

'ಮಳೆಗಾಲದಲ್ಲಿ ದೋಣಿ ಮತ್ತು ವನ್ಯಜೀವಿ ಸಫಾರಿ ಇರುವುದರಿಂದ ಈ ತಾಣವು ಸೂಕ್ತವಾಗಿದೆ. ದರಗಳು ತುಲನಾತ್ಮಕವಾಗಿ ಕಡಿಮೆ ಇರುವುದು ಇನ್ನೊಂದು ಕಾರಣ. ಪ್ರವಾಸಿಗರು ಬಂಡೀಪುರ, ಕೆ ಗುಡಿ, ಜೋಗ್ ಫಾಲ್ಸ್ ಮತ್ತು ದೇವ್‌ಬಾಗ್‌ಗೆ ಆದ್ಯತೆ ನೀಡುತ್ತಿದ್ದಾರೆ. ಆದರೆ ವಾರಾಂತ್ಯದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನ(ಬಿಬಿಪಿ)ಕ್ಕೆ ಹೆಚ್ಚಿನ ಜನರು ಹೋಗುತ್ತಾರೆ ಎಂದರು.  

ಬಿಬಿಪಿಯ ಕಾರ್ಯನಿರ್ವಾಹಕ ನಿರ್ದೇಶಕ ವನಾಶ್ರಿ ವಿಪಿನ್ ಸಿಂಗ್ ಅವರ ಪ್ರಕಾರ, ವಾರದ ದಿನಗಳಲ್ಲಿ ಸುಮಾರು 1,000-1,500 ಜನರು ಭೇಟಿ ನೀಡುತ್ತಾರೆ. ಆದರೆ ವಾರಾಂತ್ಯದಲ್ಲಿ, ವಿಶೇಷವಾಗಿ ಭಾನುವಾರ, ಸುಮಾರು 3,000- 3,500 ಪ್ರಾಣಿ ಪ್ರಿಯರು ಭೇಟಿ ನೀಡುತ್ತಾರೆ. ನಗರ ಪ್ರವಾಸೋದ್ಯಮಕ್ಕೆ ಹೋಲಿಸಿದರೆ ನೈಸರ್ಗಿಕ ಸ್ಥಳಗಳಿಗೆ ಬೇಡಿಕೆ ಹೆಚ್ಚಿದೆ. ನಂದಿ ಬೆಟ್ಟ, ಜೋಗ್ ಫಾಲ್ಸ್ ಮತ್ತು ಆಲ್ಮಟ್ಟಿಗೆ ಹೆಚ್ಚು ಜನರು ಭೇಟಿ ನೀಡುತ್ತಾರೆ. 

ಕೊಡಗಿಗೆ ಭೇಟಿ ನೀಡುವವರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಇದು ಇನ್ನೂ 2-3 ದಿನಗಳಲ್ಲಿ ಹೆಚ್ಚಾಗುತ್ತದೆ ಎಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್‌ಟಿಡಿಸಿ) ವ್ಯವಸ್ಥಾಪಕ ನಿರ್ದೇಶಕ ವಿಜಯ್ ಶರ್ಮಾ ಹೇಳಿದರು.

ಪ್ಯಾಕೇಜ್ ಪ್ರವಾಸಗಳಲ್ಲಿ, ತಿರುಪತಿಗೆ ಸುಮಾರು 160-170 ಟಿಕೆಟ್ಗಳನ್ನು ಕಾಯ್ದಿರಿಸಲಾಗುತ್ತಿದೆ ಎಂದು ಶರ್ಮಾ ಹೇಳುತ್ತಾರೆ. ಕಳೆದ ಒಂದು ವಾರದಲ್ಲಿ ಹೆಚ್ಚುತ್ತಿರುವ ಜನಸಂದಣಿಯಿಂದಾಗಿ ಪ್ರವಾಸೋದ್ಯಮ ಅಧಿಕಾರಿಗಳು ನಾಗರಿಕರು ಲಾಕ್‌ಡೌನ್ ತೆರವುಗೊಳಿಸಿದ ನಂತರ ಹೊರಗೆ ಸುತ್ತಾಡಲು ಹೆಚ್ಚು ಪ್ರಾರಂಭಿಸಿದ್ದಾರೆ. ಪ್ರವಾಸೋದ್ಯಮ ಇಲಾಖೆಗೆ ಸೇರಿದ ರೆಸಾರ್ಟ್ ಗಳಲ್ಲಿ ಸ್ಥಳೀಯರು ಮತ್ತು ಇತರ ನಗರಗಳ ಪ್ರವಾಸಿಗರು ಕೊಠಡಿಗಳನ್ನು ಕಾಯ್ದಿರಿಸಲು ಪ್ರಾರಂಭಿಸಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಈ ಹಿಂದೆ ಇದ್ದಂತೆ ಬೆಂಗಳೂರಿನಿಂದ ಹೆಚ್ಚಿನವರು ಹೆಚ್ಚಿನ ಸ್ಥಳಗಳಿಗೆ ಪ್ರಯಾಣಿಸುತ್ತಿಲ್ಲ ಎಂಬುದು ಅಧಿಕಾರಿಯ ಅಭಿಪ್ರಾಯ. ಜನರಲ್ಲಿ ಇನ್ನೂ ಸ್ವಲ್ಪ ಹಿಂಜರಿಕೆ ಇದೆ. ನಾವು ಈಗ ಹೊಸ ಪ್ಯಾಕೇಜ್‌ಗಳನ್ನು ನೀಡುವ ಬದಲು ಪ್ರವಾಸಿಗರನ್ನು ಸೆಳೆಯುವ ವಿಶ್ವಾಸವನ್ನು ಗಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಪ್ರವಾಸೋದ್ಯಮ ಅಧಿಕಾರಿ ಹೇಳುತ್ತಾರೆ.

SCROLL FOR NEXT